Flower benefits for hair : ನಮ್ಮ ಜೀವನದಲ್ಲಿ ಹೂವುಗಳ ಪಾತ್ರ ಬಹಳ ಮುಖ್ಯವಾಗಿದೆ. ದೇವರಿಗೆ ಅರ್ಪಿಸುವುದರಿಂದ ಹಿಡಿದು ತಲೆಗೆ ಮುಡಿದುಕೊಳ್ಳಲು, ಮನೆಯನ್ನು ಅಲಂಕರಿಸಲು ಹೂಗಳನ್ನು ಬಳಸುತ್ತೇವೆ.. ಹೂಗಳು ಹುಟ್ಟಿನಿಂದ ಸಾಯುವವರೆಗೂ ಮಾನವನ ಜೊತೆ ಸಂಬಂಧ ಹೊಂದಿವೆ.. ಇಂತಹ ಹೂವುಗಳನ್ನು ಔಷಧೀಯವಾಗಿಯೂ ಬಳಸಲಾಗುತ್ತದೆ..
ಹೆಂಗಸರು ಸ್ವಾಭಾವಿಕವಾಗಿ ಸುಂದರಿಯರು, ಈ ಚೆಲುವೆಯರು ಹೂವನ್ನು ಮುಡಿದರೆ ಅವರ ಸೌಂದರ್ಯ ಇಮ್ಮಡಿಗೊಳ್ಳುತ್ತದೆ.. ಈ ವಿಚಾರದಲ್ಲಿ ಯಾರಿಗೂ ಸಂಶಯವಿಲ್ಲ ಅಲ್ವಾ... ಹೂವು ಸುಂದರಿಯರ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಿಂದಿನ ಕಾಲದಲ್ಲಿ ಪ್ರತಿ ಮಹಿಳೆ ಹೂವನ್ನು ಮುಡಿಯುತ್ತಿದ್ದರು..
ಹೂಗಳನ್ನು ಮುಡಿದುಕೊಳ್ಳುವುದು ಧನಾತ್ಮಕ ಶಕ್ತಿ ಉತ್ಪತ್ತಿಗೆ ಕಾರಣ ಎಂದು ಹೇಳಲಾಗುತ್ತದೆ. ಹೂವುಗಳು ಸೌಂದರ್ಯವನ್ನು ಮಾತ್ರವಲ್ಲದೆ ಧನಾತ್ಮಕ ಶಕ್ತಿಯನ್ನು ಸಹ ತರುತ್ತವೆ ಎಂದು ನಂಬಲಾಗಿದೆ. ತಜ್ಞರು ಹೂವುಗಳು ಆರೋಗ್ಯ ಪ್ರಯೋಜನಗಳನ್ನೂ ಹೊಂದಿವೆ ಅಂತ ಹೇಳುತ್ತಾರೆ..
ಗುಲಾಬಿ ಪ್ರೀತಿ ಮತ್ತು ವಾತ್ಸಲ್ಯದ ಸಂಕೇತವಾಗಿದೆ. ಕೆಲವು ಮಹಿಳೆಯರಿಗೆ ಮಲ್ಲಿಗೆ ಮುಡಿಯುವುದರಿಂದ ತಲೆನೋವು ಉಂಟಾಗುತ್ತದೆ. ಅದರೆ ಗುಲಾಬಿಯ ವಾಸನೆಯು ತಲೆಯ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ತಲೆತಿರುಗುವಿಕೆಯನ್ನು ತಡೆಯುತ್ತದೆ ಎಂದು ತಜ್ಞರು ಹೇಳುತ್ತಾರೆ.
ಮಲ್ಲಿಗೆ ಹೂ: ಇದು ಸಮೃದ್ಧಿ ಮತ್ತು ಅದೃಷ್ಟದ ಸಂಕೇತವಾಗಿದೆ. ಮಲ್ಲಿಗೆ ಹೂವನ್ನು ಮುಡಿಯುವುದರಿಂದ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಇದರ ವಾಸನೆಯು ಮಹಿಳೆಯರ ಮನಸ್ಸನ್ನು ಶಾಂತಗೊಳಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ಕೆಲವರಿಗೆ ಈ ಹೂವು ಉಸಿರಾಟದ ತೊಂದರೆ ಮತ್ತು ತಲೆತಿರುಗುವಿಕೆಗೆ ಕಾರಣವಾಗಬಹುದು.
ದಾಸವಾಳ: ಈ ಹೂವು ಶಕ್ತಿಯ ಇನ್ನೊಂದು ರೂಪವಾದ ಕಾಳಿ ದೇವಿಯನ್ನು ಪೂಜಿಸಲು ಬಳಸುವುದರಿಂದ ಇದು ಶಕ್ತಿಯ ಸಂಕೇತವಾಗಿ ಗುರುತಿಸಿಕೊಂಡಿದೆ. ದಾಸವಾಳದ ಹೂವನ್ನು ತಲೆಯ ಮೇಲೆ ಇಡುವುದು ತುಂಬಾ ಪ್ರಯೋಜನಕಾರಿ ಎಂದು ನಂಬಲಾಗಿದೆ.
ಚೆಂಡು ಹೂಗಳು: ಈ ಹೂವುಗಳನ್ನು ಹೆಚ್ಚಾಗಿ ಹಳ್ಳಿಗಳಲ್ಲಿ ಬೆಳೆಯಲಾಗುತ್ತದೆ. ಈ ಹೂವು ಯಾವುದೇ ಪರಿಮಳವನ್ನು ಹೊಂದಿಲ್ಲದಿದ್ದರೂ, ಇದು ನೋಡಲು ಸುಂದರವಾಗಿರುತ್ತದೆ. ವಾಸನೆಯಿಲ್ಲದ ಕಾರಣ ತಲೆನೋವು ಬರುವ ಸಾಧ್ಯತೆ ಕಡಿಮೆ. ಈ ಹೂವನ್ನು ಮುಡಿದರೆ ತಲೆ ನೋವು ಬರುವುದಿಲ್ಲ ಎಂಬ ನಂಬಿಕೆ ಇದೆ.
(ಗಮನಿಸಿ: ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಈ ವಿವರಗಳನ್ನು ನಿಮಗೆ ಒದಗಿಸಲಾಗಿದೆ. ವಿಷಯಗಳು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. TV9 ತಮಿಳು ಯಾವುದಕ್ಕೂ ಜವಾಬ್ದಾರನಾಗಿರುವುದಿಲ್ಲ.)