ಶೀಘ್ರದಲ್ಲಿಯೇ ಸ್ವರಾಶಿಗೆ ಧನದಾತನ ಆಗಮನ, ಲಕ್ಷ್ಮಿ ಕೃಪೆಯಿಂದ ಈ ರಾಶಿಗಳ ಜನರ ಜೀವನದಲ್ಲಿ ಶುಕ್ರದೆಸೆ ಆರಂಭ!

Venus Transit In Tula: ಜೋತಿಷ್ಯ ಶಾಸ್ತ್ರದ ಪ್ರಕಾರ ವೈಭವ ಹಾಗೂ ಐಶ್ವರ್ಯ ಕಾರಕನಾಗಿರುವ ಶುಕ್ರ ಶೀಘ್ರದಲ್ಲಿಯೇ ತನ್ನ ಸ್ವರಾಶಿಯಾಗಿರುವ ತುಲಾ ರಾಶಿಗೆ ಆಗಮಿಸಲಿದ್ದಾನೆ. ಹೀಗಾಗಿ ಲಕ್ಷ್ಮಿ ಕೃಪೆಯಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಶುಕ್ರದೆಸೆ ಆರಂಭಗೊಳ್ಳಲಿದೆ. (Spiritual News In Kannada)
 

ಬೆಂಗಳೂರು: ಜೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಧನ-ವೈಭವ ಹಾಗೂ ಐಶ್ವರ್ಯದ ಕಾರಕ ಗ್ರಹ ಎಂದು ಪರಿಗಣಿಸಲಾಗಿದೆ. ಹೀಗಾಗಿ ಆತನ ರಾಶಿ ಪರಿವರ್ತನೆಗೆ ವಿಶೇಷ ಮಹತ್ವವನ್ನು ಕಲ್ಪಿಸಲಾಗಿದೆ. ಬರುವ ನವೆಂಬರ್ 30, 2023 ರಂದು ಆತ ಪುನಃ ತನ್ನ ಸ್ವರಾಶಿಯಾಗಿರುವ ತುಲಾ ರಾಶಿಯೇ ಆಗಮಿಸಲಿದ್ದಾನೆ. ಸಾಮಾನ್ಯವಾಗಿ ಸ್ವರಾಶಿಗೆ ಆಗಮಿಸುವ ಯಾವುದೇ ಗ್ರಹ ತನ್ನ ಸಂಪೂರ್ಣ ಮತ್ತು ಶುಭ ಫಲಗಳನ್ನು ನೀಡುತ್ತದೆ ಎನ್ನಲಾಗುತ್ತದೆ. ಹೀಗಿರುವಾಗ ಶುಕ್ರನ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಗೋಚರಿಸಲಿದೆ. ಆದರೆ, 3 ರಾಶಿಗಳ ಜನರ ಜೀವನದಲ್ಲಿ ಇದರಿಂದ ಅಪಾರ ಧನ ಸಂಪತ್ತು ಹರಿದು ಬರಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,  (Spiritual News In Kannada)

 

ಇದನ್ನೂ ಓದಿ-ಶೀಘ್ರದಲ್ಲೇ ಮಂಗಳನ ಅಂಗಳದಲ್ಲಿ ತ್ರಿಗ್ರಹಿ ಯೋಗ ನಿರ್ಮಾಣ, ಧನ ಕುಬೇರ ಕೃಪೆಯಿಂದ ಈ ಜನರ ಬ್ಯಾಂಕ್ ಬ್ಯಾಲೆನ್ಸ್ ನಲ್ಲಿ ಅಪಾರ ಹೆಚ್ಚಳ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

Venus Transit In Tula: ಜೋತಿಷ್ಯ ಶಾಸ್ತ್ರದ ಪ್ರಕಾರ ವೈಭವ ಹಾಗೂ ಐಶ್ವರ್ಯ ಕಾರಕನಾಗಿರುವ ಶುಕ್ರ ಶೀಘ್ರದಲ್ಲಿಯೇ ತನ್ನ ಸ್ವರಾಶಿಯಾಗಿರುವ ತುಲಾ ರಾಶಿಗೆ ಆಗಮಿಸಲಿದ್ದಾನೆ. ಹೀಗಾಗಿ ಲಕ್ಷ್ಮಿ ಕೃಪೆಯಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಶುಕ್ರದೆಸೆ ಆರಂಭಗೊಳ್ಳಲಿದೆ. (Spiritual News In Kannada)

2 /5

ತುಲಾ ರಾಶಿ: ತುಲಾ ರಾಶಿಗೆ ಶುಕ್ರ ಅಧಿಪತಿ, ನಿಮ್ಮ ರಾಶಿಗೆ ಶುಕ್ರ ಆಗಮಿಸಲಿದ್ದಾನೆ. ಶುಕ್ರನ ಈ ಗೋಚರ ನಿಮ್ಮ ಜಾತಕದ ಲಗ್ನ ಭಾವದಲ್ಲಿ ನೆರವೇರಲಿದೆ. ಇದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ಅಪಾರ ಹೊಳಪು ಕಂಡು ಬರಲಿದೆ. ಅರ್ಥಾತ್ ನಿಮ್ಮ ವ್ಯಕ್ತಿತ್ವ ಹೆಚ್ಚು ಆಕರ್ಷಕವಾಗಲಿದೆ. ಇನ್ನೊಂದೆಡೆ ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಅದ್ಭುತವಾಗಿರಲಿದೆ. ವ್ಯಾಪಾರ ವರ್ಗದ ಜನರಿಗೆ ಈ ಸಮಯ ಅತ್ಯಂತ ಆಹ್ಲಾದಕರವಾಗಿರಲಿದೆ. ವೈವಾಹಿಕ ಜೀವನ ಕೂಡ ಸುಖದಿಂದ ಕೂಡಿರಲಿದೆ. ಪಾರ್ಟ್ನರ್ಶಿಪ್ ಕೆಲಸದಲ್ಲಿ ಲಾಭದ ಎಲ್ಲಾ ಸಂಕೇತಗಳು ಗೋಚರಿಸುತ್ತಿವೆ. ನಿಮ್ಮ ಜಾತಕದ ಎಂಟನೇ ಮನೆಗೆ ಶುಕ್ರ ಅಧಿಪತಿ. ಹೀಗಾಗಿ ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಉತ್ತಮ ಲಾಭ ಸಿಗಲಿದೆ.  

3 /5

ಮಿಥುನ ರಾಶಿ: ಶುಕ್ರ ನಿಮ್ಮ ಜಾತಕದ ಪಂಚಮ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ನಿಮಗೆ ಮಕ್ಕಳಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಸಿಗುವ ಎಲ್ಲಾ ಲಕ್ಷಣಗಳಿವೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಅದ್ಭುತವಾಗಿರಲಿದೆ. ವ್ಯಾಪಾರ ವರ್ಗದ ಜನರಿಗೆ ಈ ಸಮಯ ಸಾಕಷ್ಟು ಅನುಕೂಲಕರವಾಗಿರಲಿದೆ. ಪ್ರೇಮ ಸಂಬಂಧ ವಿವಾಹ ರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಶುಕ್ರ ನಿಮ್ಮ ಜಾತಕದ ದ್ವಾದಶ ಭಾವಕ್ಕೆ ಅಧಿಪತಿಯಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನೀವು ಹಣ ಕೂಡಿಹಾಕುವಲ್ಲಿ ಯಶಸ್ಸನ್ನು ಸಂಪಾದಿಸುವಿರಿ. ಕಾಲಕಾಲಕ್ಕೆ ನಿಮಗೆ ಆಕಸ್ಮಿಕ ಧನಲಾಭ ಯೋಗದ ಸಂಕೇತಗಳು ಕೂಡ ಗೋಚರಿಸುತ್ತಿವೆ. ನಿಮ್ಮ ಆರೋಗ್ಯ ಕೂಡ ಉತ್ತಮವಾಗಿರಲಿದೆ. 

4 /5

ಮಕರ ರಾಶಿ: ಶುಕ್ರ ನಿಮ್ಮ ರಾಶಿಯ ಅಧಿಪತಿಯಾಗಿರುವ ಶನಿಯ ಮಿತ್ರನಾಗಿದ್ದಾನೆ. ಜೊತೆಗೆ ಆತ ನಿಮ್ಮ ಗೋಚರ ಜಾತಕದ ವೃತ್ತಿ ಹಾಗೂ ವ್ಯಾಪಾರ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ವೃತ್ತಿ ಜೀವನದ ವಿಷಯದಲ್ಲಿ ಹೇಳುವುದಾದರೆ, ಈ ಅವಧಿಯಲ್ಲಿ ನಿಮಗೆ ಅಪಾರ ಸಂತುಷ್ಟಿ ಪ್ರಾಪ್ತಿಯಾಗಲಿದೆ. ವ್ಯಾಪಾರಿಗಳ ಪಾಲಿಗೆ ಈ ಅವಧಿಯಲ್ಲಿ ಒಂದು ವಿಶೇಷ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆ ಇದೆ. ಚಿತ್ರೋದ್ಯಮ, ಮಾಡೆಲಿಂಗ್, ಫ್ಯಾಶನ್, ಡಿಸೈನಿಂಗ್, ಕಲೆ ಹಾಗೂ ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ವಿಶೇಷ ಲಾಭ ಸಿಗಲಿದೆ. ಶುಕ್ರ ನಿಮ್ಮ ಜಾತಕದ ಚತುರ್ಥ ಭಾವಕ್ಕೆ ಅಧಿಪತಿ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ವಾಹನ-ಆಸ್ತಿಪಾಸ್ತಿ ಸುಖ ಪ್ರಾಪ್ತಿಯಾಗುವ ಸಾಧ್ಯತೆ ಇದೆ. 

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)