ಮೂವತ್ತು ವರ್ಷಗಳ ಬಳಿಕ ಸ್ವರಾಶಿಯಲ್ಲಿ ಶನಿಯ ನೇರನಡೆ, ಧನ ಕುಬೇರ ಕೃಪೆಯಿಂದ ಈ ಜನರಿಗೆ ಐಶ್ವರ್ಯ ನಿಧಿ ಪ್ರಾಪ್ತಿ!

Horoscope 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಕರ್ಮ ಫಲದಾತ ಶನಿ ತನ್ನ ಸ್ವರಾಶಿಯಾಗಿರುವ ಕುಂಭ ರಾಶಿಯಲ್ಲಿ ತನ್ನ ನೇರನಡೆ ಆರಂಭಿಸಿದ್ದು, ಇದರಿಂದ ವರ್ಷ 2024 ರಲ್ಲಿ ಮೂರು ರಾಶಿಗಳ ಜನರ ಆದಾಯದಲ್ಲಿ ಅಪಾರ ಧನ-ಸಂಪತ್ತು ಹರಿದುಬರಲಿದೆ. (Spiritual News In Kannada)
 

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಕರ್ಮ ಫಲದಾತ ಎಂದೇ ಪರಿಗಣಿಸಲಾಗುವ ಶನಿ 30 ವರ್ಷಗಳ ಬಳಿಕ ತನ್ನ ಸ್ವರಾಶಿಯಾಗಿರುವ ಕುಂಭ ರಾಶಿಯಲ್ಲಿ ತನ್ನ ನೇರನಡೆಯನ್ನು ಆರಂಭಿಸಲಿದ್ದಾನೆ. ಅರ್ಥಾತ್ ವಕ್ರ ನಡೆಯನ್ನು ಬದಲಿಸಿ ತನ್ನ ನಿರ್ಧಾರಿತ ಪಾರ್ಗದಲ್ಲಿ ಪುನಃ ಚಲಿಸಲಿದ್ದಾನೆ. ಇದರಿಂದ ವರ್ಷ 2024ರಲ್ಲಿ ಕೆಲ ರಾಶಿಗಳ ಜನರ ಮೇಲೆ ಆತನ ವಿಶೇಷ ಕೃಪೆ ಇರಲಿದೆ. ಈ ರಾಶಿಗಳ ಅದೃಷ್ಟ ಸೂರ್ಯನಂತೆ ಹೊಳೆಯಲಿದ್ದು, ಅವರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿಯಾಗಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, (Spiritual News In Kannada)
 

ಇದನ್ನೂ ಓದಿ-ಐನೂರು ವರ್ಷಗಳ ಬಳಿಕ ಸೂರ್ಯ-ಶುಕ್ರರ ಕೃಪೆಯಿಂದ ನೀಚ್ ಭಂಗ್ ರಾಜಯೋಗ ನಿರ್ಮಾಣ, 3 ರಾಶಿಗಳಿಗೆ ತಿಜೋರಿ ಹಣದಿಂದ ತುಂಬಿ ತುಳುಕಲಿದೆ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /4

Horoscope 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಕರ್ಮ ಫಲದಾತ ಶನಿ ತನ್ನ ಸ್ವರಾಶಿಯಾಗಿರುವ ಕುಂಭ ರಾಶಿಯಲ್ಲಿ ತನ್ನ ನೇರನಡೆ ಆರಂಭಿಸಿದ್ದು, ಇದರಿಂದ ವರ್ಷ 2024 ರಲ್ಲಿ ಮೂರು ರಾಶಿಗಳ ಜನರ ಆದಾಯದಲ್ಲಿ ಅಪಾರ ಧನ-ಸಂಪತ್ತು ಹರಿದುಬರಲಿದೆ. (Spiritual News In Kannada)

2 /4

ವೃಷಭ ರಾಶಿ: ವರ್ಷ 2024 ರಲ್ಲಿ ಶನಿ ನಿಮ್ಮ ಗೋಚರ ಜಾತಕದ ಕರ್ಮ ಭಾವದಲ್ಲಿ ಸಂಚರಿಸಲಿದ್ದಾನೆ. ನಿಮ್ಮ ರಾಶಿಗೆ ಶುಕ್ರ ಅಧಿಪತಿ ಮತ್ತು ಶನಿ ಹಾಗೂ ಶುಕ್ರನ ಮಧ್ಯೆ ಮಿತ್ರಭಾವದ ಸಂಬಂಧವಿದೆ. ಹೀಗಾಗಿ ಜೀವನೋಪಾಯದ  ಸೌಕರ್ಯಗಳಲ್ಲಿ ವೃದ್ಧಿಯಾಗಲಿದೆ. ವೃತ್ತಿ ಜೀವನದ ಕುರಿತು ಹೇಳುವುದಾದರೆ, ನಿಮಗೆ ಈ ಅವಧಿಯಲ್ಲಿ ಅಪಾರ ಸಂತುಷ್ಟಿ ಸಿಗಲಿದೆ. ವ್ಯಾಪಾರಿಗಳು ಈ ಅವಧಿಯಲ್ಲಿ ಹೊಸ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ. ಹಣ ಉಳಿತಾಯ ಮಾಡುವಲ್ಲಿ ನೀವು ಯಶಸ್ಸನ್ನು ಸಾಧಿಸುವಿರಿ. ಶನಿ ನಿಮಗೆ ವಾಹನ-ಆಸ್ತಿಪಾಸ್ತಿ ಸುಖ ದಯಪಾಲಿಸುವ ಸಾಧ್ಯತೆ ಇದೆ. ಶನಿ ದೇವ ನಿಮ್ಮ ಜಾತಕದ ಭಾಗ್ಯ ಸ್ಥಾನಕ್ಕೆ ಅಧಿಪತಿಯಾಗಿರುವ ಕಾರಣ ನಿಮಗೆ ಈ ಅವಧಿಯಲ್ಲಿ ಅದೃಷ್ಟದ ಅಪಾರ ಬೆಂಬಲ ಸಿಗಲಿದೆ, ದೇಶ-ವಿದೇಶ ಯಾತ್ರೆಗಳು ಸಂಭವಿಸುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. 

3 /4

ಕನ್ಯಾ ರಾಶಿ: ವರ್ಷ 2024 ರಲ್ಲಿ ಶನಿ ನಿಮ್ಮ ಗೋಚರ ಜಾತಕದ ಷಷ್ಟಮ ಭಾವದಲ್ಲಿ ಸಂಚರಿಸಲಿದ್ದಾನೆ. ಈ ಭಾವದಲ್ಲಿ ಶನಿ ತುಂಬಾ ಬಲಿಷ್ಠನಾಗುತ್ತಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಕೋರ್ಟ್-ಕಚೇರಿ ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದೆ. ವೃತ್ತಿ ಜೀವನದಲ್ಲಿ ನಿಮ್ಮ ಇಚ್ಚೆಗಳು ಈಡೇರಲಿವೆ. ಹೊಸ ನೌಕರಿ ಭಾಗ್ಯ ಕೂಡ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಕಾರ್ಯಕ್ಷೇತ್ರದಲ್ಲಿ ನಿಮಗೆ ಉನ್ನತ ದರ್ಜೆಯ ಲಾಭ ಸಿಗಲಿದೆ. ಶನಿ ದೇವ ನಿಮ್ಮ ಜಾತಕದ ಪಂಚಮ ಭಾವಕ್ಕೆ ಅಧಿಪತಿಯಾಗಿದ್ದಾನೆ. ಹೀಗಾಗಿ ಮಕ್ಕಳಿಗೆ ಸಂಬಂಧಿಸಿದಂತೆ ನಿಮಗೆ ಶುಭ ಸಮಾಚಾರ ಪ್ರಾಪ್ತಿಯಾಗಲಿದೆ. ಮಕ್ಕಳ ನೌಕರಿ ಅಥವಾ ವಿವಾಹ ನೆರವೇರುವ ಸಾಧ್ಯತೆ ಇದೆ. ವಿದೇಶಿ ಮೂಲಗಳಿಂದ ನಿಮಗೆ ಧನಲಾಭ ಉಂಟಾಗುವ ಸಾಧ್ಯತೆ ಇದೆ. 

4 /4

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)