ಇನ್ನು 24 ಗಂಟೆ.. ಈ ರಾಶಿಗಳ ಬದುಕಿನ ದಿಕ್ಕು ಬದಲಿಸುವನು ಶುಕ್ರ ! ಹಠಾತ್ ಧನಲಾಭ, ಸಮಾಜದಲ್ಲಿ ಗೌರವ ಪ್ರಾಪ್ತಿ

Shukra Gochar 2023: ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ಗ್ರಹದ ಸಾಗಣೆಯು ವಿವಿಧ ರಾಶಿಗಳ ಜನರ ಜೀವನದ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಏಪ್ರಿಲ್ 17 ರಂದು ಶುಕ್ರನು ಯೌವ್ವನಾವಸ್ಥೆಗೆ ಬರುತ್ತಾನೆ. ಇದು ಈ 4 ರಾಶಿಗಳ ಜನರ ಜೀವನದಲ್ಲಿ ಉತ್ತಮ ಫಲವನ್ನು ನೀಡಲಿದೆ.

Shukra Gochar 2023: ವೈದಿಕ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳು ಮೂರು ಹಂತಗಳಲ್ಲಿ ಸಾಗುತ್ತವೆ. ಗ್ರಹಗಳ ಸ್ಥಿತಿಯಲ್ಲಿನ ಬದಲಾವಣೆ ಜನರ ಜೀವನದ ಮೇಲೆ ಗೋಚರಿಸುತ್ತದೆ. ಕೆಲವು ರಾಶಿಗಳಿಗೆ ಅಶುಭವಾದರೆ, ಮತ್ತೆ ಕೆಲವರಿಗೆ ಶುಭ ಫಲ ಸಿಗುತ್ತವೆ. ಕುಮಾರ, ಯೌವನ ಮತ್ತು ವೃದ್ಧಾಪ್ಯದಲ್ಲಿ ಗ್ರಹಗಳ ಸಂಚಾರ ನಡೆಯುತ್ತದೆ. ಸಂಪತ್ತು ಮತ್ತು ವೈಭವವನ್ನು ನೀಡುವ ಶುಕ್ರನು ಏಪ್ರಿಲ್ 17 ರಂದು ತನ್ನ ಯೌವನ ಸ್ಥಿತಿವನ್ನು ಪ್ರವೇಶಿಸಲಿದ್ದಾನೆ. ಈ ಸಮಯದಲ್ಲಿ, 4 ರಾಶಿಗಳ ಜನರು ಸಂಪತ್ತು ಮತ್ತು ಗೌರವವನ್ನು ಪಡೆಯುತ್ತಾರೆ. 

 

ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಮೇಷ ರಾಶಿ: ಯೌವನದಲ್ಲಿ ಶುಕ್ರನ ಸಂಕ್ರಮವು ಮೇಷ ರಾಶಿಯವರಿಗೆ ಮಂಗಳಕರ. ನೀವು ಹಠಾತ್ ಧನಲಾಭವಾಗುವ ಸಾಧ್ಯತೆಯಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪ ಬರಬಹುದು. ಈ ಅವಧಿಯಲ್ಲಿ ನೀವು ನಿಮ್ಮ ಜೀವನ ಸಂಗಾತಿಯ ಬೆಂಬಲವನ್ನು ಪಡೆಯುತ್ತೀರಿ. ಜೀವನ ಸಂಗಾತಿಯ ಪ್ರಗತಿಗೆ ಈ ಸಮಯವೂ ಅನುಕೂಲಕರವಾಗಿದೆ. 

2 /4

ವೃಷಭ ರಾಶಿ: ಈ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ಶುಕ್ರ ಗ್ರಹವು ಲಗ್ನ ಮನೆಯಲ್ಲಿ ಸಂಚರಿಸಲಿದೆ. ಈ ಸಂದರ್ಭದಲ್ಲಿ ಮಾಲವ್ಯ ರಾಜಯೋಗ ರಚನೆಯಾಗುತ್ತಿದೆ. ಆದಾಯವು ಹೆಚ್ಚಾಗುತ್ತದೆ. ಹಳೆಯ ಹೂಡಿಕೆಯಿಂದಲೂ ಲಾಭವನ್ನು ಕಾಣಬಹುದು. ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು. ಕೋರ್ಟ್ ವಿಷಯಗಳಲ್ಲಿ ಯಶಸ್ಸನ್ನು ಕಾಣುವಿರಿ. ವ್ಯಕ್ತಿತ್ವವೂ ಸುಧಾರಿಸುತ್ತದೆ.

3 /4

ಕಟಕ ರಾಶಿ: ಶುಕ್ರ ಗ್ರಹವು ನಿಮ್ಮ ಜಾತಕದ 11 ನೇ ಮನೆಯಲ್ಲಿ ಸಾಗುತ್ತದೆ. ಆದಾಯದಲ್ಲಿ ಭಾರಿ ಹೆಚ್ಚಳ ಕಂಡುಬರುತ್ತದೆ. ಹೊಸ ಆದಾಯದ ಮೂಲಗಳನ್ನು ಸೃಷ್ಟಿಸಬಹುದು. ಎಲ್ಲಾ ಭೌತಿಕ ಸುಖಗಳನ್ನು ಪಡೆಯುವ ಅವಕಾಶಗಳಿವೆ. ರಫ್ತು ಮತ್ತು ಆಮದು ಕೆಲಸ ಮಾಡುವವರಿಗೆ ಈ ಸಮಯ ತುಂಬಾ ಅನುಕೂಲಕರ.  

4 /4

ಸಿಂಹ ರಾಶಿ: ಈ ರಾಶಿಯ ಜನರಿಗೆ ಒಳ್ಳೆಯ ಸಮಯ. ನಿಮ್ಮ ಜಾತಕದ ಕರ್ಮ ಮನೆಯಲ್ಲಿ ಶುಕ್ರ ಗ್ರಹವು ಪ್ರಯಾಣಿಸಲಿದೆ. ಈ ಸಮಯದಲ್ಲಿ ಇನ್ಕ್ರಿಮೆಂಟ್ ಮತ್ತು ಬಡ್ತಿ ಪಡೆಯಬಹುದು. ಶುಕ್ರನು ತನ್ನ ಸ್ವಂತ ಮನೆಯಲ್ಲಿದ್ದು ಮಾಲವ್ಯ ರಾಜಯೋಗವು ರೂಪುಗೊಳ್ಳುತ್ತಿದೆ. ಆಸೆಗಳು ಈಡೇರುತ್ತವೆ. ಉದ್ಯಮಿಗಳು ಉತ್ತಮ ಲಾಭವನ್ನು ಪಡೆಯುವ ನಿರೀಕ್ಷೆಯಿದೆ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ.