Vastu Tips:ಸ್ನಾನದ ನಂತರ ಮಾಡುವ ತಪ್ಪಿನಿಂದ ತಲೆದೋರುತ್ತದೆ ಆರ್ಥಿಕ ಸಮಸ್ಯೆ

ಸ್ನಾನಗೃಹಕ್ಕೆ ಸಂಬಂಧಿಸಿದ ಈ ನಿಯಮಗಳನ್ನು ನಿರ್ಲಕ್ಷಿಸಿದರೆ, ಈ ಆರ್ಥಿಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.  

ಬೆಂಗಳೂರು : ಮನೆಯ ಪ್ರತಿಯೊಂದು ಭಾಗದಂತೆ,  ಸ್ನಾನದ ಮನೆಗೆ ಕೂಡಾ ವಾಸ್ತು ಶಾಸ್ತ್ರದಲ್ಲಿ ಕೆಲವು ಪ್ರಮುಖ ನಿಯಮಗಳನ್ನು ಹೇಳಲಾಗಿದೆ. ಇದರಲ್ಲಿ ಬಾತ್ರೂಮ್-ಶೌಚಾಲಯ ಮಾಡಲು ಸರಿಯಾದ ದಿಕ್ಕಿನ ಹೊರತಾಗಿ, ಅವುಗಳ ಬಳಕೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಸಹ ಸೇರಿಸಲಾಗಿದೆ. ಸ್ನಾನಗೃಹಕ್ಕೆ ಸಂಬಂಧಿಸಿದ ಈ ನಿಯಮಗಳನ್ನು ನಿರ್ಲಕ್ಷಿಸಿದರೆ, ಈ ಆರ್ಥಿಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಸ್ನಾನಗೃಹವನ್ನು ಬಳಸುವಾಗ ಮಾಡಿದ ಕೆಲವು ತಪ್ಪುಗಳು ಹಣದ ನಷ್ಟಕ್ಕೆ ಕಾರಣವಾಗುತ್ತವೆ. ಸ್ನಾನದ ನಂತರ ಬಾತ್ರೂಮ್ ಅನ್ನು ಕೊಳಕಾಗಿ ಬಿಡಬಾರದು.  ಸ್ನಾನಗೃಹವನ್ನು ಕೊಳಕಾಗಿ ಇಟ್ಟುಕೊಂಡರೆ,  ರಾಹು-ಕೇತು ಗ್ರಹ ಅಶುಭ ಫಲಿತಾಂಶಗಳನ್ನು ನೀಡುತ್ತದೆ. ಆದ್ದರಿಂದ ಬಾತ್ರೂಮ್ ಅನ್ನು ಎಂದಿಗೂ ಕೊಳಕಾಗಿ ಇಡಬೇಕು. ಹಾಗೆಯೇ ಬಾತ್ ರೂಂನಲ್ಲಿ ಒದ್ದೆ ಬಟ್ಟೆಗಳನ್ನು ಬಿಡಬೇಡಿ. 

2 /5

ನಲ್ಲಿಗಳಿಂದ ನೀರು ಸೋರಿಕೆಯು ಪ್ರಮುಖ ವಾಸ್ತು ದೋಷಗಳನ್ನು ಸೃಷ್ಟಿಸುತ್ತದೆ. ಇದಲ್ಲದೆ, ನೀರನ್ನು ವ್ಯರ್ಥ ಮಾಡುವುದರಿಂದ ಕುಟುಂಬದ ಸಂಪತ್ತು ಮತ್ತು ಗೌರವ ನಷ್ಟವಾಗುತ್ತದೆ. ಆದ್ದರಿಂದ, ಮನೆಯಲ್ಲಿ ಯಾವುದೇ ಟ್ಯಾಪ್ ಸೋರಿಕೆಯಾಗುತ್ತಿದ್ದರೆ, ತಕ್ಷಣ ಅದನ್ನು ಸರಿಪಡಿಸಿ, ಇಲ್ಲದಿದ್ದರೆ  ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ. 

3 /5

ಕೂದಲನ್ನು ತೊಳೆಯುವಾಗ ಕೆಲವು ಕೂದಲು ಉದುರಿ ಬೀಳುತ್ತದೆ. ಸ್ನಾನದ ನಂತರ ಈ ಕೂದಲನ್ನು ಬಾತ್ ರೂಮಬಿಡಬೇಡಿ. ಹೀಗಾದಾಗ, ಶನಿ ದೇವ ಮತ್ತು ಮಂಗಳ ದೇವ ಕೋಪಗೊಳ್ಳುತ್ತಾರೆ. ಈ ಕಾರಣದಿಂದಾಗಿ ಶನಿ ಮತ್ತು ಮಂಗಳವು ಕೆಟ್ಟ ಫಲಿತಾಂಶಗಳನ್ನು ನೀಡುತ್ತಾರೆ. 

4 /5

ನೀರಿನ ಪಾತ್ರೆಗಳನ್ನು ಖಾಲಿ ಇಡುವುದರಿಂದ ಮನೆಯಲ್ಲಿ ಬಡತನ ಬರುತ್ತದೆ. ಬಡತನವನ್ನು ತಪ್ಪಿಸಲು ಬಯಸಿದರೆ, ಬಾತ್ ರೂಮ್ ನಲ್ಲಿ ಖಾಲಿ ಬಕೆಟ್ ಅನ್ನು ಎಂದಿಗೂ ಬಿಡಬೇಡಿ. ಸ್ನಾನದ ನಂತರ, ಬಕೆಟ್‌ಗೆ ನೀರು ತುಂಬಿಟ್ಟು ಹೊರ ಬನ್ನಿ.

5 /5

ಅನೇಕ ಜನರು ಸ್ನಾನದ ನಂತರ ಕೊಳಕು ಬಟ್ಟೆಗಳನ್ನು ಸ್ನಾನದ ಮನೆಯಲ್ಲಿಯೇ ತೊಳೆಯುತ್ತಾರೆ. ಹಾಗೆ ಮಾಡಬಾರದು. ಸ್ನಾನ ಮಾಡುವ ಮೊದಲು ಯಾವಾಗಲೂ ಕೊಳಕು ಬಟ್ಟೆಗಳನ್ನು ತೊಳೆಯಿರಿ.  ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)