ನಟಿ ಊರ್ವಶಿ ಮಗಳು ಯಾರ್‌ ಗೊತ್ತೆ..? ಈಕೆಯನ್ನ ನೋಡಿದ್ರೆ ರವಿಮಾಮ.. ʼನಾನು ನನ್ನ ಹೆಂಡತಿʼ ಸಿನಿಮಾ ನೆನಪಾಗುತ್ತೆ..

Urvashi daughter Kunjatta : ಹಿರಿಯ ನಟಿ ಊರ್ವಶಿ ಯಾರಿಗೆ ಗೊತ್ತಿಲ್ಲ ಹೇಳಿ.. 1980 ರಲ್ಲಿ ನ್ಯಾಯ ನೀತಿ ಧರ್ಮ ಎಂಬ ಸಿನಿಮಾದ ಮೂಲಕ ಕನ್ನಡ ಸಿನಿರಂಗಕ್ಕೆ ಬಂದ ಸುಂದರಿ, ನಾನು ನನ್ನ ಹೆಂಡತಿ, ಪ್ರೇಮಲೋಕ, ಜೀವನದಿ, ಹಬ್ಬ, ಯಾರಿಗೆ ಸಾಲುತ್ತೆ ಸಂಬಳ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.. ಸಧ್ಯ ಊರ್ವಶಿ ಪುತ್ರಿಯ ಕುರಿತು ತಿಳಿಯಲು ಅವರ ನೆಟ್ಟಿಗರು ಉತ್ಸುಕರಾಗಿದ್ದು, ಇಂಟರ್‌ನೆಟ್‌ನಲ್ಲಿ ಸರ್ಚ್‌ ಮಾಡುತ್ತಿದ್ದಾರೆ..
 

1 /7

ರಾಮಾ ಶಾಮಾ ಭಾಮಾ ಈ ಸಿನಿಮಾ ಹೆಸರು ಕೇಳಿದ್ರೆ ತಕ್ಷಣ ನೆನಪಾಗೋದು ಹಿರಿಯ ನಟಿ ಊರ್ವಶಿ.. ಸುಮಾರು 30 ಕ್ಕೂ ಹಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡ ಸಿನಿರಸಿಕರ ಮನೆ ಗೆದ್ದ ನಟಿ ಇವರು..  

2 /7

ಊರ್ವಶಿಯವರು ಹೆಸರಿಗೆ ತಕ್ಕಂತೆ ಅಪರೂಪದ ಸುಂದರಿ.. ಈ ಕೇರಳದ ಚೆಲುವೆ ತಮ್ಮ ನಟನೆ ಮತ್ತು ಸೌಂದರ್ಯದಿಂದ ಸ್ಯಾಂಡಲ್‌ವುಡ್‌ನಲ್ಲೂ ಮೋಡಿ ಮಾಡಿದ್ದರು.. ಇವರಂತೆ ಇವರ ಮಗಳೂ ಸಹ ಅಪರೂಪದ ಸುಂದರಿ..   

3 /7

ನಟಿ ಊವರ್ಶಿ ಮಗಳ ಹೆಸರು ತೇಜಲಕ್ಷ್ಮಿ.. ಪ್ರೀತಿಯಿಂಧ ಕುಂಜಟ್ಟಾ ಅಂತಲೂ ಕರೆಯುತ್ತಾರೆ.. ಇನ್ನೂ ನಟಿಯಾಗಿ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿಲ್ಲ, ಆದರೆ ಅವರು ಈಗಾಗಲೇ ಸಾಮಾಜಿಕ ಮಾಧ್ಯಮದ ಮೂಲಕ ಸಾಕಷ್ಟು ಜನ ಫ್ಯಾನ್ಸ್‌ ಪಾಲೋಯಿಂಗ್‌ ಹೊಂದಿದ್ದಾರೆ..  

4 /7

ಹಿರಿಯ ನಟ ದಿಲೀಪ್ ಮತ್ತು ಊರ್ವಶಿ ಪುತ್ರಿ ಕುಂಜಟ್ಟಾ.. ಸಧ್ಯ ತಂದೆ-ತಾಯಿಯ ಹಾದಿಯಲ್ಲೇ ಚಿತ್ರರಂಗಕ್ಕೆ ಕಾಲಿಡಲು ಪ್ರಯತ್ನಿಸುತ್ತಿದ್ದಾರೆ.. ನಟಿಯಾಗಿ ವೃತ್ತಿಜೀವನವನ್ನು ಮುಂದುವರೆಸಲು ಸಿದ್ಧರಾಗಿದ್ದಾರೆ ಎಂದು ಹೇಳಲಾಗುತ್ತಿದೆ.. ಆದ್ರೆ ಇನ್ನು ಇದು ಖಚಿತವಾಗಿಲ್ಲ.  

5 /7

ಕುಂಜಟ್ಟಾ ಅವರು ಕಿಕ್‌ಬಾಕ್ಸಿಂಗ್‌ನಲ್ಲಿ ಹೆಚ್ಚಿನ ಒಲವು ಹೊಂದಿರುವಂತೆ ತೋರುತ್ತಿದೆ, ಇತ್ತೀಚೆಗೆ ತಮ್ಮ Instagram ಕಥೆಗಳಲ್ಲಿ ಹಂಚಿಕೊಂಡ ಕೆಲವು ಚಿತ್ರಗಳಿಂದ ಇದನ್ನು ಸ್ಪಷ್ಟ ಪಡಿಸುತ್ತವೆ.. ಸ್ಟಿಲ್‌ಗಳಲ್ಲಿ, ಕುಂಜಟ್ಟಾ ಟ್ರ್ಯಾಕ್ ಪ್ಯಾಂಟ್‌ನಲ್ಲಿ ಕಾಣಿಸಿಕೊಂಡಿದ್ದು, ಕಿಕ್‌ಬಾಕ್ಸಿಂಗ್ ಅಭ್ಯಾಸ ಮಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ..   

6 /7

ಇನ್ನು ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಕಿಕ್‌ಬಾಕ್ಸಿಂಗ್ ಅನ್ನು ವೃತ್ತಿಯಾಗಿ ಮುಂದುವರಿಸಲು ಬಯಸುತ್ತಾರೆಯೇ ಅಥವಾ ತಮ್ಮ ಚೊಚ್ಚಲ ಸಿನಿಮಾಗಾಗಿ ತರಬೇತಿ ಪಡೆಯುತ್ತಿದ್ದಾರೆಯೇ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.   

7 /7

ಈ ವರ್ಷದ ಆರಂಭದಲ್ಲಿ, ಕುಂಜಟ್ಟಾ ಅವರು ತಮ್ಮ ತಾಯಿ ಊರ್ವಶಿ ನಟಿಸಿದ ಉಲ್ಲೋಳುಕ್ ಚಿತ್ರದ ಪ್ರಥಮ ಪ್ರದರ್ಶನಕ್ಕೆ ಹಾಜರಾಗಿದ್ದಾಗ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದರು. ದೇವರು ಆಶೀರ್ವದಿಸಿದರೆ ನಾಯಕಿಯಾಗುವ ಭರವಸೆ ಇದೆ ಎಂದು ಕುಂಜತ್ತ ಹೇಳಿದ್ದರು.