Trigrahi Yoga: 3 ಗ್ರಹಗಳು ಒಂದೇ ರಾಶಿಯಲ್ಲಿದ್ದರೆ ತ್ರಿಗ್ರಾಹಿ ಯೋಗ ಉಂಟಾಗುತ್ತದೆ. ಈ ತ್ರಿಗ್ರಾಹಿ ಯೋಗವು ಸೂರ್ಯ, ಶುಕ್ರ ಮತ್ತು ಬುಧಗಳ ಸಂಯೋಜನೆಯಿಂದ ರೂಪುಗೊಂಡಿದೆ. ಈ ಯೋಗವನ್ನು ಜ್ಯೋತಿಷ್ಯದಲ್ಲಿ ಮಂಗಳಕರವೆಂದು ಪರಿಗಣಿಸಲಾಗಿದೆ.
Trigrahi Yoga: ಜ್ಯೋತಿಷ್ಯದಲ್ಲಿ ಗ್ರಹಗಳ ಸಂಚಾರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ಸಂಕ್ರಮಣ ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ನವಗ್ರಹಗಳು ಸ್ವಲ್ಪ ಸಮಯದ ನಂತರ ತಮ್ಮ ಸ್ಥಾನಗಳನ್ನು ಬದಲಾಯಿಸುತ್ತವೆ. ಈ ಬದಲಾವಣೆಯು ಪ್ರತಿಯೊಬ್ಬರ ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಒಂದೇ ರಾಶಿಯಲ್ಲಿ ಒಂದು ಅಥವಾ ಹೆಚ್ಚಿನ ಗ್ರಹಗಳ ಸಾಗುವುದನ್ನು ಸಂಯೋಗವೆಂದು ಕರೆಯಲಾಗುತ್ತದೆ. ಪ್ರಸ್ತುತ ಮಿಥುನ ರಾಶಿಯಲ್ಲಿ 3 ಗ್ರಹಗಳ ಸಂಯೋಗವಿದೆ. 3 ಗ್ರಹಗಳು ಒಂದೇ ರಾಶಿಯಲ್ಲಿದ್ದರೆ ತ್ರಿಗ್ರಾಹಿ ಯೋಗ ಉಂಟಾಗುತ್ತದೆ. ಈ ತ್ರಿಗ್ರಾಹಿ ಯೋಗವು ಸೂರ್ಯ, ಶುಕ್ರ ಮತ್ತು ಬುಧಗಳ ಸಂಯೋಜನೆಯಿಂದ ರೂಪುಗೊಂಡಿದೆ. ಈ ಯೋಗವನ್ನು ಜ್ಯೋತಿಷ್ಯದಲ್ಲಿ ಮಂಗಳಕರವೆಂದು ಪರಿಗಣಿಸಲಾಗಿದೆ. ಬುಧ, ಸೂರ್ಯ ಮತ್ತು ಶುಕ್ರನ ಸಂಯೋಜನೆಯನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ʼತ್ರಿಗಾಹಿ ಯೋಗʼದಿಂದ ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಜೂನ್ 29ರವರೆಗೆ ಮಿಥುನ ರಾಶಿಯಲ್ಲಿ ತ್ರಿಗ್ರಾಹಿ ಯೋಗ ಇರುತ್ತದೆ. ನಂತರ ಬುಧವು ಮಿಥುನ ರಾಶಿಯಿಂದ ಕಟಕಕ್ಕೆ ಪ್ರವೇಶಿಸಲಿದೆ. ತ್ರಿಗ್ರಾಹಿ ಯೋಗವನ್ನು ಹೊರತುಪಡಿಸಿ ಈ 3 ಗ್ರಹಗಳು ವಿಭಿನ್ನ ಅದೃಷ್ಟ ಯೋಗಗಳನ್ನು ರೂಪಿಸಲಿವೆ. ಬುಧನು ಭದ್ರ ರಾಜಯೋಗವನ್ನು ನೀಡಲಿದ್ದು, ಇದು ಪಂಚಮಹಾ ಪುರುಷ ರಾಜಯೋಗಗಳಲ್ಲಿ ಒಂದಾಗಿದೆ. ಇದರ ಜೊತೆಗೆ ಬುಧ-ಸೂರ್ಯರ ಸಂಯೋಗದಿಂದ ಬುಧಾದಿತ್ಯ ಯೋಗವೂ, ಶುಕ್ರ-ಸೂರ್ಯರ ಸಂಯೋಗದಿಂದ ಶುಕ್ರಾದಿತ್ಯ ಯೋಗವೂ ಉಂಟಾಗಲಿದೆ. ಬುಧ ಮತ್ತು ಶುಕ್ರರು ಒಟ್ಟಾಗಿ ಲಕ್ಷ್ಮೀನಾರಾಯಣ ಯೋಗವನ್ನು ನೀಡಲಿದ್ದಾರೆ. ಇಂತಹ ಸಂದರ್ಭಗಳಲ್ಲಿ ಮಿಥುನ ರಾಶಿಯಲ್ಲಿ ಈ 3 ಗ್ರಹಗಳು ಇರುವುದರಿಂದ ಕೆಲವು ರಾಶಿಯವರಿಗೆ ಅದೃಷ್ಟ ಒಲಿದು ಬಂದಿದೆ. ಮಿಥುನ ರಾಶಿಯಲ್ಲಿ ರೂಪುಗೊಂಡ ಈ ತ್ರಿಗ್ರಾಹಿ ಯೋಗದಿಂದ ಯಾವ ರಾಶಿಯವರಿಗೆ ಒಳ್ಳೆಯದು ಎಂದು ತಿಳಿಯಿರಿ.
ಮೇಷ ರಾಶಿಯವರಿಗೆ ಸೂರ್ಯ, ಶುಕ್ರ & ಬುಧ ಗ್ರಹಗಳ ಸಂಯೋಜನೆಯು ಶುಭಕರವಾಗಿದೆ. ಈ ಸಮಯದಲ್ಲಿ ನೀವು ತುಂಬಾ ಧನಾತ್ಮಕವಾಗಿರುತ್ತೀರಿ & ಪ್ರತಿ ಕೆಲಸದಲ್ಲಿಯೂ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ತೋರಿಸುತ್ತಾರೆ. ಆರೋಗ್ಯವೂ ಚೆನ್ನಾಗಿರುತ್ತದೆ. ನೀವು ಮಕ್ಕಳೊಂದಿಗೆ ಸಮಯ ಕಳೆಯುತ್ತೀರಿ.
ತುಲಾ ರಾಶಿಯವರಿಗೆ ಬುಧ, ಶುಕ್ರ ಮತ್ತು ಸೂರ್ಯನ ಸಂಯೋಜನೆಯು ಲಾಭದಾಯಕವಾಗಲಿದೆ. ಗ್ರಹಗಳ ಚಲನೆಯಲ್ಲಿನ ಬದಲಾವಣೆಯಿಂದ ಈ ರಾಶಿಯ ಜನರು ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಾರೆ. ನಿಮ್ಮ ಹಣಕಾಸಿನ ಪರಿಸ್ಥಿತಿ ಸ್ಥಿರವಾಗಿರಲಿದ್ದು, ವೆಚ್ಚವನ್ನು ನಿಯಂತ್ರಿಸುವ ಅವಶ್ಯಕತೆಯಿದೆ. ಆಗ ಮಾತ್ರ ನೀವು ಹಣ ಉಳಿಸಬಹುದು. ದಾಂಪತ್ಯ ಜೀವನ ಸಂತೋಷದಿಂದ ಕೂಡಿರುತ್ತದೆ. ಕಷ್ಟದ ಸಮಯದಲ್ಲಿ ಕುಟುಂಬದ ಬೆಂಬಲ ಸಿಗಲಿದೆ.
ತ್ರಿಗ್ರಾಹಿ ಯೋಗವು ಮಿಥುನ ರಾಶಿಯಲ್ಲಿ ಸೂರ್ಯ, ಶುಕ್ರ ಮತ್ತು ಬುಧಗಳ ಸಂಯೋಗದಿಂದ ರೂಪುಗೊಳ್ಳುತ್ತದೆ. ಇದರ ಪರಿಣಾಮ ಮಿಥುನ ರಾಶಿಯವರಿಗೆ ತುಂಬಾ ಪ್ರಯೋಜನಕಾರಿ. ಆದಾಯ ಹೆಚ್ಚಿಸಿಕೊಳ್ಳಲು ಅನೇಕ ಹೊಸ ಮೂಲಗಳನ್ನು ಕಂಡುಕೊಳ್ಳುವಿರಿ. ಈ ತಿಂಗಳು ನೀವು ಎಲ್ಲದರಲ್ಲೂ ಯಶಸ್ವಿಯಾಗುತ್ತೀರಿ. ವೃತ್ತಿ ಜೀವನದಲ್ಲಿ ಕೆಲವು ಹೊಸ ಜವಾಬ್ದಾರಿ ಸ್ವೀಕರಿಸುತ್ತೀರಿ. ನಿಮ್ಮ ಸಂಗಾತಿ ಅಥವಾ ಪ್ರೇಮಿಯೊಂದಿಗೆ ಉತ್ತಮ ಸಮಯ ಕಳೆಯುತ್ತೀರಿ.