ಮಕರ ರಾಶಿಯಲ್ಲಿ ಶನಿ, ಬುಧ ಮತ್ತು ಶುಕ್ರರ ಸಂಯೋಗದಿಂದ ತ್ರಿಗ್ರಾಹಿ ಯೋಗ ರೂಪುಗೊಳ್ಳುತ್ತದೆ. ಈ ಯೋಗದಿಂದ 4 ರಾಶಿಯವರು ಅದ್ಭುತ ಲಾಭ ಗಳಿಸಲಿದ್ದಾರೆ.
ಬೆಂಗಳೂರು : ಮಕರ ಸಂಕ್ರಾಂತಿಯ ದಿನ ಮೂರು ರಾಶಿಗಳು ಮಕರ ರಾಶಿಯಲ್ಲಿ ಮುಖಾಮುಖಿಯಾಗುವುದರಿಂದ ತ್ರಿಗ್ರಾಹಿ ಯೋಗ ರೂಪುಗೊಳ್ಳುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಯೋಗವನ್ನು ಅತ್ಯಂತ ಮಂಗಳಕರ ಎಂದು ಕರೆಯಲಾಗುತ್ತದೆ. ಮಕರ ರಾಶಿಯಲ್ಲಿ ಶನಿ, ಬುಧ ಮತ್ತು ಶುಕ್ರರ ಸಂಯೋಗದಿಂದ ಈ ಯೋಗ ರೂಪುಗೊಳ್ಳುತ್ತದೆ. ಈ ಯೋಗದಿಂದ 4 ರಾಶಿಯವರು ಅದ್ಭುತ ಲಾಭ ಗಳಿಸಲಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮೇಷ ರಾಶಿ :ಮೇಷ ರಾಶಿಯವರಿಗೆ ತ್ರಿಗ್ರಾಹಿ ಯೋಗದಿಂದ ಹೆಚ್ಚಿನ ಲಾಭವಾಗುತ್ತದೆ. ವೃತ್ತಿಜೀವನದಲ್ಲಿ ಉತ್ತಮ ಸಾಧನೆ ಇರುತ್ತದೆ. ಹೊಸ ವ್ಯಾಪಾರ ಆರಂಭಿಸಬಹುದು. ಉದ್ಯೋಗಸ್ಥರಿಗೆ ಬಡ್ತಿ ದೊರೆಯಬಹುದು. ಪೂರ್ವಿಕರ ಆಸ್ತಿಯಿಂದ ಲಾಭವಾಗಬಹುದು. ಹೂಡಿಕೆಗೂ ಇದು ಉತ್ತಮ ಸಮಯ. ಆದಾಯದ ಮೂಲಗಳ ಹೆಚ್ಚಳದಿಂದ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.
ಮಕರ ರಾಶಿ : ತ್ರಿಗ್ರಾಹಿ ಯೋಗವು ಮಕರ ರಾಶಿಯವರಿಗೆ ಕೂಡಾ ಅದ್ಭುತ ಯಶಸ್ಸನ್ನು ನೀಡುತ್ತದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ಈ ಯೋಗದ ಕಾರಣದಿಂದ ಹಠಾತ್ ಬಡ್ತಿ ಮತ್ತು ವೇತನ ಹೆಚ್ಚಾಗುವ ಸಾಧ್ಯತೆ ಇದೆ. ಅದೃಷ್ಟದ ಬೆಂಬಲದೊಂದಿಗೆ, ಆರ್ಥಿಕ ಲಾಭವಾಗಬಹುದು.
ಮಿಥುನ ರಾಶಿ : ತ್ರಿಗ್ರಾಹಿ ಯೋಗದ ಶುಭ ಪರಿಣಾಮದಿಂದಾಗಿ ಮಿಥುನ ರಾಶಿಯವರ ಜೀವನದಲ್ಲಿ ಹೊಸ ಬದಲಾವಣೆ ಕಂಡುಬರಲಿದೆ. ಹಣಕಾಸಿನ ಲಾಭದಿಂದಾಗಿ ಆರ್ಥಿಕ ಸ್ಥಿತಿಯು ಮೊದಲಿಗಿಂತ ಉತ್ತಮವಾಗಿರುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಉದ್ಯಮಿಗಳಿಗೂ ಸಾಕಷ್ಟು ಲಾಭವಾಗಲಿದೆ.
ಮೀನ ರಾಶಿ : ಶನಿಯ ರಾಶಿಯಲ್ಲಿ ನಿರ್ಮಾಣವಾಗುತ್ತಿರುವ ತ್ರಿಗ್ರಾಹಿ ಯೋಗವು ಮೀನ ರಾಶಿಯವರ ಆರ್ಥಿಕ ಸ್ಥಿತಿಉಅನ್ನು ಸುಧಾರಿಸುತ್ತದೆ. ಹೊಸ ಉದ್ಯೋಗ ಆಫರ್ ಬರಬಹುದು. ಸಾಲದಿಂದ ಮುಕ್ತಿ ಸಿಗಲಿದೆ. ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಮನೆ-ಕುಟುಂಬದಲ್ಲಿ ಸುಖ-ಸಮೃದ್ಧಿ ನೆಲೆಯಾಗುತ್ತದೆ. ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)