Vitamin C Rich Foods: ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಲು ವಿಟಮಿನ್ ಸಿ ಬಹಳ ಮುಖ್ಯ. ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವುದರಿಂದ ವೈರಲ್ ರೋಗಗಳ ಅಪಾಯ ಹೆಚ್ಚಾಗುತ್ತದೆ. ಇದನ್ನು ತಪ್ಪಿಸಲು ವಿಟಮಿನ್ ಸಿ ಸಮೃದ್ಧ ಆಹಾರಗಳ ಸೇವನೆ ತುಂಬಾ ಅಗತ್ಯ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಆರೋಗ್ಯ ತಜ್ಞರ ಪ್ರಕಾರ, ಆರೋಗ್ಯವಂತ ದೇಹಕ್ಕೆ ವಿಟಮಿನ್ ಸಿ ತುಂಬಾ ಅಗತ್ಯ. ಆರೋಗ್ಯವಂತ ವಯಸ್ಕ ಪುರುಷನಿಗೆ ದಿನಕ್ಕೆ 90 ಮಿಗ್ರಾಂ ನಷ್ಟು ವಿಟಮಿನ್ ಸಿ ಅಗತ್ಯವಿದ್ದರೆ, ಆರೋಗ್ಯವಂತ ಮಹಿಳೆಗೆ ಪ್ರತಿದಿನ 75 ಮಿಗ್ರಾಂ ಅಗತ್ಯವಿದೆ. ಹಾಗಾಗಿ ನಮ್ಮ ದಿನ ನಿತ್ಯದ ಆಹಾರದಲ್ಲಿ ವಿಟಮಿನ್ ಸಿ ಸಮೃದ್ಧ ಹಣ್ಣು-ತರಕಾರಿಗಳ ಸೇವನೆ ಬಹಳ ಅಗತ್ಯ. ಕಿತ್ತಳೆಗಿಂತ ಹೆಚ್ಚಿನ ವಿಟಮಿನ್ ಸಿ ಕಂಡುಬರುವ ಅನೇಕ ನೈಸರ್ಗಿಕ ಮೂಲಗಳಿವೆ. ಅವುಗಳೆಂದರೆ...
ಪೌಷ್ಟಿಕಾಂಶ ಭರಿತ ಕಿವಿ ಹಣ್ಣಿನಲ್ಲಿ ನಾರಿಣಾಂಶ ಹೇರಳವಾಗಿದ್ದು ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಗೊಳಿಸುತ್ತದೆ. ಒಂದು ಸಣ್ಣ ಗಾತ್ರದ ಕಿವಿ ಹಣ್ಣಿನಲ್ಲಿ 137 ಮಿಗ್ರಾಂ ವಿಟಮಿನ್ ಸಿ ಕಂಡು ಬರುತ್ತದೆ.
ಬಹಳ ಸುಲಭವಾಗಿ ಲಭ್ಯವಿರುವ ಹಣ್ಣುಗಳಲ್ಲಿ ಪರಂಗಿ ಹಣ್ಣು ಕೂಡ ಒಂದು. ಇದರಲ್ಲಿ ಕಂಡು ಬರುವ ಉತ್ಕರ್ಷಣ ನಿರೋಧಕವು ಹಲವು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಒಂದು ಕಪ್ ಪರಂಗಿ ಹಣ್ಣಿನಲ್ಲಿ 88 ಮಿಗ್ರಾಂ ವಿಟಮಿನ್ ಸಿ ಇರುತ್ತದೆ.
ಭಾರತೀಯ ಅಡುಗೆ ಮನೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಹಣ್ಣು ದಪ್ಪ ಮೆಣಸಿನ ಕಾಯಿ. ಇದು ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಆರೋಗ್ಯಕ್ಕೂ ಪ್ರಯೋಜನಕಾರಿ. ಒಂದು ಮಧ್ಯಮ ಗಾತ್ರದ ದಪ್ಪ ಮೆಣಸಿನ ಕಾಯಿಯಲ್ಲಿ 152 ಗ್ರಾಂ ವಿಟಮಿನ್ ಸಿ ಸಿಗುತ್ತದೆ.
ರುಚಿಕರ ಹಣ್ಣುಗಳಲ್ಲಿ ಒಂದಾದ ಸೀಬೆ ಹಣ್ಣಿನಲ್ಲಿ ಹಲವು ಪೋಷಕಾಂಶಗ್ಲೌ ಕಂಡುಬರುತ್ತವೆ. ಒಂದು ಮಧ್ಯಮ ಗಾತ್ರದ ಸೀಬೆ ಹಣ್ಣಿನಲ್ಲಿ ಸುಮಾರು 125 ಗ್ರಾಂ ವಿಟಮಿನ್ ಸಿ ಪಡೆಯಬಹುದು.
ತುಂಬಾ ರಸಭರಿತವಾದ ಹಣ್ಣು ಅನಾನಸ್. ಇದರಲ್ಲಿರುವ ಜೀರ್ಣಕಾರಿ ಕಿಣ್ವಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ಕಪ್ ಕತ್ತರಿಸಿದ ಅನಾನಸ್ನಲ್ಲಿ 79 ಮಿಗ್ರಾಂ ವಿಟಮಿನ್ ಸಿ ಲಭ್ಯವಾಗಲಿದೆ ಎಂದು ಹೇಳಲಾಗುತ್ತದೆ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.