Mercury Rise 2023: ನಾಳೆ ಬುಧ ಉದಯ, 4 ರಾಶಿಗಳ ಜನರ ಮಲಗಿರುವ ಭಾಗ್ಯ ಎಚ್ಚೆತ್ತುಕೊಳ್ಳಲಿದೆ, ಧನಲಾಭದ ಜೊತೆಗೆ ಪದೋನ್ನತಿ ಅವಕಾಶ!

ನಾಳೆ ಅಂದರೆ ಜುಲೈ 14 ರಂದು ಕರ್ಕ ರಾಶಿಯಲ್ಲಿ ಬುಧನ ಉದಯ ನೆರವೇರಲಿದೆ. ಇದು ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಆದರೆ, ಕೆಲ ರಾಶಿಗಳ ಪಾಲಿಗೆ ಇದು ನೌಕರಿಯಲ್ಲಿ ಬಡ್ತಿ ಹಾಗೂ ವ್ಯಾಪಾರದಲ್ಲಿ ಅಪಾರ ಯಶಸ್ಸು ದಯಪಾಲಿಸಲಿದೆ. ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ (Mercury Rise) ಬನ್ನಿ, 
 

ಬೆಂಗಳೂರು: ವೈದಿಕ ಪಂಚಾಗದ ಪ್ರಕಾರ ಜುಲೈ 14, 2023 ರಂದು ಗ್ರಹಗಳ ರಾಜಕುಮಾರ ಬುಧ ಕರ್ಕ ರಾಶಿಯಲ್ಲಿ ಉದಯಿಸಲಿದ್ದಾನೆ. ಹಾಗೆ ನೋಡಿದರೆ ಕರ್ಕ ರಾಶಿ ಚಂದ್ರನ ರಾಶಿ. ಹೀಗಾಗಿ ಹಲವು ರಾಶಿಗಳ ಜನರಿಗೆ ಇದರಿಂದ ವಿಶೇಷ ಲಾಭ ಸಿಗಲಿದೆ. ಬುಧ ಬುದ್ಧಿ ಹಾಗೂ ತಾರ್ಕಿಕ ಶಕ್ತಿಯ ಕಾರಕ ಗ್ರಹ (Mercury Rise) ಹಾಗೂ ಜಾತಕದ ತೃತೀಯ ಹಾಗೂ ಷಷ್ಟಮ ಭಾವಕ್ಕೆ ಅಧಿಪತಿ. ಹೀಗಿರುವಾಗ ಬುದ್ಧನ ಕರ್ಕ ರಾಶಿ (Spiritual News In Kannada) ಉದಯ ಹಲವು ರಾಶಿಗಳ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲಿದೆ. ಇನ್ನುಳಿದಂತೆ ಕೆಲ ರಾಶಿಗಳ ಜಾತಕದವರಿಗೆ ಇದು ನಕಾರಾತ್ಮಕ ಪ್ರಭಾವವನ್ನು ಬೀರಲಿದೆ. ಬುಧನ ಉದಯದಿಂದ ಯಾವ ರಾಶಿಗಳ ಜನರ ಮಲಗಿರುವ ಭಾಗ್ಯ ಎಚ್ಚೆತ್ತುಕೊಳ್ಳಲಿದೆ ತಿಳಿದುಕೊಳ್ಳೋಣ ಬನ್ನಿ, 
 

ಇದನ್ನೂ ಓದಿ-ಐವತ್ತು ವರ್ಷಗಳ ಬಳಿಕ ಯುವಾವಸ್ಥೆಯ ಗುರು ಹಾಗೂ ಮಂಗಳರಿಂದ ನವಪಂಚಮ ರಾಜಯೋಗ ನಿರ್ಮಾಣ, ಯಾರಿಗೆ ಲಾಭ?

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ವೈದಿಕ ಪಂಚಾಗದ ಪ್ರಕಾರ ಜುಲೈ 14, 2023 ರಂದು ಗ್ರಹಗಳ ರಾಜಕುಮಾರ ಬುಧ ಕರ್ಕ ರಾಶಿಯಲ್ಲಿ ಉದಯಿಸಲಿದ್ದಾನೆ. ಹಾಗೆ ನೋಡಿದರೆ ಕರ್ಕ ರಾಶಿ ಚಂದ್ರನ ರಾಶಿ. ಹೀಗಾಗಿ ಹಲವು ರಾಶಿಗಳ ಜನರಿಗೆ ಇದರಿಂದ ವಿಶೇಷ ಲಾಭ ಸಿಗಲಿದೆ. ಬುಧ ಬುದ್ಧಿ ಹಾಗೂ ತಾರ್ಕಿಕ ಶಕ್ತಿಯ ಕಾರಕ ಗ್ರಹ. ಹಾಗೂ ಜಾತಕದ ತೃತೀಯ ಹಾಗೂ ಷಷ್ಟಮ ಭಾವಕ್ಕೆ ಅಧಿಪತಿ. ಹೀಗಿರುವಾಗ ಬುದ್ಧನ ಕರ್ಕ ರಾಶಿ ಉದಯ ಹಲವು ರಾಶಿಗಳ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲಿದೆ. ಇನ್ನುಳಿದಂತೆ ಕೆಲ ರಾಶಿಗಳ ಜಾತಕದವರಿಗೆ ಇದು ನಕಾರಾತ್ಮಕ ಪ್ರಭಾವವನ್ನು ಬೀರಲಿದೆ. ಬುಧನ ಉದಯದಿಂದ ಯಾವ ರಾಶಿಗಳ ಜನರ ಮಲಗಿರುವ ಭಾಗ್ಯ ಎಚ್ಚೆತ್ತುಕೊಳ್ಳಲಿದೆ ತಿಳಿದುಕೊಳ್ಳೋಣ ಬನ್ನಿ,   

2 /5

ಮೇಷ ರಾಶಿ: ಬುಧನ ಈ ಉದಯ ಮೇಷ ರಾಶಿಯ ಜಾತಕದವರ ಮೇಲೆ ಸಕಾರಾತ್ಮಕ ಬದಲಾವಣೆಯನ್ನು ತರಲಿದೆ. ಏಕೆಂದರೆ ನಿಮ್ಮ ಜಾತಕದ ಚತುರ್ಥ ಭಾವದಲ್ಲಿ ಬುಧನ ಈ ಉದಯ ನೆರವೇರುತ್ತಿದೆ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯುವಲ್ಲಿ ಯಶಸ್ವಿಯಾಗುವಿರಿ. ವೃತ್ತಿ ಜೀವನದ ಕುರಿತು ಹೇಳುವುದಾದರೆ, ನಿಮಗೆ ನೌಕರಿಯಲ್ಲಿ ಲಾಭ ಸಿಗಲಿದೆ ಈ ಅವಧಿಯಲ್ಲಿ ನಿಮಗೆ ಪದೋನ್ನತಿಯ ಭಾಗ್ಯ ಸಿಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿಯೂ ಕೂಡ ನಿಮಗೆ ಭರಪೂರ ಲಾಭ ಸಿಗಲಿದೆ. ನೀವು ನಿಮ್ಮ ಎದುರಾಳಿಗಳಿಗೆ ಕಠಿಣ ಸವಾಲಾಗಿ ಪರಿಣಮಿಸುವಿರಿ. ಆರ್ಥಿಕ ಸ್ಥಿತಿಯ ಕುರಿತು ಹೇಳುವುದಾದರೆ, ನಿಮಗೆ ಅಧಿಕ ಧನಲಾಭ ಉಂಟಾಗಲಿದ್ದು, ಖರ್ಚು ಕೂಡ ಅಧಿಕವಾಗಲಿದೆ.    

3 /5

ವೃಷಭ ರಾಶಿ: ಬುಧನ ಈ ಉದಯದಿಂದ ವೃಷಭ ರಾಶಿಯ ಜಾತಕದವರ ಜೀವನದಲ್ಲಿ ಖುಷಿ ತುಂಬಿ ತುಳುಕಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ತೃತೀಯ ಭಾವದಲ್ಲಿ ಬುಧನ ಈ ಉದಯ ನೆರವೇರಲಿದೆ. ಕಾರ್ಯಕ್ಷೇತ್ರದಲ್ಲಿ ನಿಮಗೆ ಪ್ರಶಂಸೆ ವ್ಯಕ್ತವಾಗಲಿದೆ. ಹೊಸ ನೌಕರಿಯ ಹುಡುಕಾಟದಲ್ಲಿ ತೊಡಗಿರುವವರ ಹುಡುಕಾಟಕ್ಕೆ ತೆರೆ ಬೀಳಲಿದೆ. ವ್ಯಾಪಾರದಲ್ಲಿ ಹೂಡಿಕೆ ಮಾಡುವುದು ಲಾಭದಾಯಕ ಸಿದ್ಧ ಸಾಬೀತಾಗಲಿದೆ. ಅಪಾರ ಧನಲಾಭದ ಯೋಗ ಗೋಚರಿಸುತ್ತಿದೆ. ವೈವಾಹಿಕ ಜೀವನದಲ್ಲಿ ಖುಷಿಗಳ ಆಗಮನವಾಗಲಿದೆ. ಆರೋಗ್ಯ ಕೂಡ ಉತ್ತಮವಾಗಿರಲಿದೆ.  

4 /5

ಕನ್ಯಾ ರಾಶಿ- ಕನ್ಯಾ ರಾಶಿಯ ಜಾತಕದವರ ಏಕಾದಶ ಭಾವದಲ್ಲಿ ಬುಧನ ಉದಯ ನೆರವೇರಲಿದೆ. ಹೀಗಾಗಿ ಕನ್ಯಾ ಜಾತಕದ ಜನರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಸುಖ-ಸಮೃದ್ಧಿ ಹೆಚ್ಚಾಗಿ ನಿಮ್ಮ ಎಲ್ಲಾ ಆಸೆ ಆಕಾಂಕ್ಷೆಗಳು ಈಡೇರಲಿವೆ. ಆರ್ಥಿಕ ಸ್ಥಿತಿ ಪ್ರಬಲವಾಗಿಯಲಿದೆ. ವಿದೇಶಿ ಹೂಡಿಕೆಯಿಂದ ಲಾಭ ನಿಮ್ಮದಾಗಲಿದೆ. ನೌಕರಿಯಲ್ಲಿ ಹೊಸ ಅವಕಾಶಗಳನ್ನು ಹುಡುಕಾಡುತ್ತಿರುವವರಿಗೆ ಯಶಸ್ಸು ಪ್ರಾಪ್ತಿಯಾಗಲಿದೆ. ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಲಾಭ ನೀಡಲಿದೆ.  

5 /5

ಕುಂಭ ರಾಶಿ: ಬುಧನ ಈ ಉದಯದಿಂದ ನಿಮಗೆ ನಿಮ್ಮ ಪರಿಶ್ರಮದ ಸಂಪೂರ್ಣ ಲಾಭ ಸಿಗಲಿದೆ. ಏಕೆಂದರೆ ಬುಧನ ಈ ಉದಯ ನಿಮ್ಮ ಜಾತಕದ ಷಷ್ಟಮ ಭಾವದಲ್ಲಿ ನೆರವೇರುತ್ತಿದೆ. ಆದರೆ, ಮಕ್ಕಳ ಭವಿಷ್ಯದ ಕುರಿತು ಸ್ವಲ್ಪ ಚಿಂತೆ ನಿಮ್ಮನ್ನು ಕಾಡಲಿದೆ. ಪಿತ್ರಾರ್ಜಿತ ಆಸ್ತಿಯಿಂದ ಆಕಸ್ಮಿಕ ಧನಲಾಭ ಉಂಟಾಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಸಣ್ಣ ಏರಿಳಿತಕ್ಕೆ ನೀವು ಸಾಕ್ಷಿಯಾಗುವಿರಿ. ಆದರೆ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ನಿಮ್ಮ ಪಾಲಿಗೆ ಲಾಭದ ವಹಿವಾಟು ಸಾಬೀತಾಗುವ ಸಾಧ್ಯತೆ ಇದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)