ಮಾನ್ಸೂನ್‌ನಲ್ಲಿ ಒಮ್ಮೆಯಾದರೂ ಕರ್ನಾಟಕದ ಈ 5 ಸ್ಥಳಗಳಿಗೆ ಭೇಟಿ ನೀಡಲೇಬೇಕು

                                      

Top 5 places to visit in Karnataka in Monsoon: ಮಾನ್ಸೂನ್ ಬಂತೆಂದರೆ ಏನೋ ಒಂದು ರೀತಿಯ ಉಲ್ಲಾಸ ಪ್ರತಿಯೊಬ್ಬರ ಮನದಲ್ಲಿಯೂ ಮೂಡುತ್ತದೆ. ಈ ಋತುವಿನಲ್ಲಿ ಪ್ರಕೃತಿಯನ್ನು ಆನಂದಿಸುವ ಖುಷಿ ಅದನ್ನು ಅನುಭವಿಸಿದವರಿಗಷ್ಟೇ ಗೊತ್ತು. ಈ ಫೋಟೋ ಗ್ಯಾಲರಿಯಲ್ಲಿ  ಮಾನ್ಸೂನ್‌ನಲ್ಲಿ ಕರ್ನಾಟಕದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ತಾಣಗಳ ಬಗ್ಗೆ ತಿಳಿಯೋಣ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಪ್ರವಾಸ ಕೆಲವರ ಹವ್ಯಾಸವಾದರೆ, ಇನ್ನೂ ಕೆಲವರಲ್ಲಿ ಮೂಡ್ ಚೇಂಜ್ ಮಾಡಬಲ್ಲ ಮ್ಯಾಜಿಕ್. ಈ ಮಾನ್ಸೂನ್‌ನಲ್ಲಿ ನೀವು ಪ್ರವಾಸಕ್ಕಾಗಿ ಪ್ಲಾನ್ ಮಾಡುತ್ತಿದ್ದರೆ ಕರ್ನಾಟಕದಲ್ಲಿರುವ ಈ 5 ತಾಣಗಳಿಗೆ ತಪ್ಪದೇ ಭೇಟಿ ನೀಡಿ. ಆ ಸ್ಥಳಗಳು ಯಾವುವೆಂದರೆ... 

2 /6

ಹಚ್ಚ ಹಸಿರಿನ ಬೆಟ್ಟಗಳಿಂದ ಕೂಡಿದ ಕೂರ್ಗ್:  ಕೂರ್ಗ್ ಕಾಫಿ-ಉತ್ಪಾದಿಸುವ ಪ್ರಸಿದ್ಧ ಗಿರಿಧಾಮ. ಕೂರ್ಗ್‌ನ ಹಚ್ಚ ಹಸಿರಿನ ಬೆಟ್ಟಗಳಿಗೆ ಮನಸೋಲದವರೇ ಇಲ್ಲ. ನೀವು ಮಾನ್ಸೂನ್‌ನಲ್ಲಿ ಮಡಿಕೇರಿ, ಕೂರ್ಗ್ ಗೆ ಭೇಟಿ ನೀಡಬಹುದು. 

3 /6

ಜಲಪಾತಗಳ ನಾಡು ಆಗುಂಬೆ:  ಜಲಪಾತಗಳ ನಾಡು ಆಗುಂಬೆ ಯು ತನ್ನ ರಮಣೀಯ ಸೌಂದರ್ಯ ಮತ್ತು ಜೀವವೈವಿಧ್ಯಕ್ಕೆ ಹೆಸರುವಾಸಿಯಾಗಿದೆ. ದಕ್ಷಿಣದ ಚಿರಾಪುಂಜಿ ಎಂತಲೇ ಖ್ಯಾತಿ ಪಡೆದಿರುವ ಆಗುಂಬೆ ಸಹ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. 

4 /6

ಹಂಪಿ:  ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹಂಪಿಯನ್ನು ಅವಶೇಷಗಳ ನಗರ ಎಂದು ಕರೆಯಲಾಗುತ್ತದೆ. ಇತಿಹಾಸವನ್ನು ಆನಂದಿಸುವ ಪ್ರವಾಸಿಗರು ಕರ್ನಾಟಕದ ಆಳವಾದ ಕಣಿವೆಗಳು ಮತ್ತು ಬೆಟ್ಟಗಳಲ್ಲಿ ಅಡಗಿರುವ ಈ ಸ್ಥಳಕ್ಕೆ ಭೇಟಿ ನೀಡಬಹುದು. 

5 /6

ದಾಂಡೇಲಿ ವನ್ಯಜೀವಿ ಅಭಯಾರಣ್ಯ:  ನೀವು ಸಫಾರಿ ಪ್ರಿಯರಾಗಿದ್ದರೆ ಮಾನ್ಸೂನ್‌ನಲ್ಲಿ ದಾಂಡೇಲಿ ವನ್ಯಜೀವಿ ಅಭಯಾರಣ್ಯಕ್ಕೆ ಭೇಟಿ ನೀಡಬಹುದು. ಸುಮಾರು 334.52 ಚದರ ಮೈಲಿಗಳಷ್ಟು ದೊಡ್ಡದಾಗಿರುವ ಈ ತಾಣವನ್ನು ಪ್ರಕೃತಿ ಪ್ರೇಮಿಗಳು ರಿಪೂರ್ಣ ರಜೆಯ ತಾಣವೆಂದು ಭಾವಿಸುತ್ತಾರೆ. 

6 /6

ನಂದಿ ಹಿಲ್ಸ್:  ಬೆಂಗಳೂರಿಗೆ ತುಂಬಾ ಸಮೀಪದಲ್ಲಿರುವ ನಂದಿ ಹಿಲ್ಸ್ ಕೆಲವರಿಗೆ ವಾರಾಂತ್ಯದ ತಾಣವೂ ಹೌದು. ನೀವು ಈ ಮಾನ್ಸೂನ್‌ನಲ್ಲಿ ಒಂದು ದಿನದ ಪ್ರವಾಸಕ್ಕಾಗಿ ಪ್ಲಾನ್ ಮಾಡುತ್ತಿದ್ದರೆ ಇದೂ ಕೂಡ ಒಂದು ಅತ್ಯುತ್ತಮ ಆಯ್ಕೆಯಾಗಿದೆ.