Photos: ಪತಿ ಜೊತೆಗೆ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡ ಟಿಎಂಸಿ ಸಂಸದೆ ನುಸ್ರತ್ ಜಹಾನ್!

ಬೆಂಗಾಲಿ ನಟಿ ನುಸ್ರತ್ ಜಹಾನ್ ಇದೇ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದು ಇತ್ತೀಚಿಗೆ ಮುಖ್ಯಾಂಶಗಳಲ್ಲಿದ್ದಾರೆ. ಈಗ ಮೊದಲ ಬಾರಿಗೆ ಅವರು ಪತಿ ನಿಖಿಲ್ ಜೈನ್ ಅವರೊಂದಿಗೆ ಕೆಲವು ರೋಮ್ಯಾಂಟಿಕ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

  • Jun 27, 2019, 11:20 AM IST

ನವದೆಹಲಿ: ಟಿಎಂಸಿ ಪಕ್ಷದಿಂದ ಇದೇ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿರುವ  ಬೆಂಗಾಲಿ ನಟಿ ನುಸ್ರತ್ ಜಹಾನ್ ಇತ್ತೀಚೆಗಷ್ಟೇ ಕೋಲ್ಕತಾ ಮೂಲದ ಉದ್ಯಮಿ ನಿಖಿಲ್ ಜೈನ್‍ರನ್ನು ವರಿಸಿದ್ದರು.  ನುಸ್ರತ್‌ ಜಹಾನ್‌ ಮದುವೆ ಟರ್ಕಿಯಲ್ಲಿ ನೆರವೇರಿದ್ದು, ಅವರು ಉದ್ಯಮಿ ನಿಖಿಲ್‌ ಜೈನ್‌ರನ್ನು ವಿವಾಹವಾಗಿದ್ದಾರೆ. ಇದೀಗ, ಮದುವೆಯ ನಂತರ ಮೊದಲ ಬಾರಿಗೆ ಅವರು ಪತಿ ನಿಖಿಲ್ ಜೈನ್ ಅವರೊಂದಿಗೆ ಕೆಲವು ವಿಶೇಷ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಪತಿ ಜೊತೆಗೆ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಅವರ ಈ ಫೋಟೋಗಳು ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿವೆ. ಈ ವಿಶೇಷ ಚಿತ್ರಗಳನ್ನು ನೋಡಿ.

1 /5

2 /5

3 /5

4 /5

5 /5