5 year FD rates: ನೀವು ಯಾವುದೇ ಅಪಾಯವಿಲ್ಲದೆ, ಸ್ಥಿರ ಆದಾಯದೊಂದಿಗೆ ತೆರಿಗೆ ಉಳಿಸುವ ಆಯ್ಕೆಯನ್ನು ಹುಡುಕುತ್ತಿದ್ದರೆ, 5 ವರ್ಷದ ಬ್ಯಾಂಕ್ ಎಫ್‌ಡಿಗಳು ಉತ್ತಮ ಆಯ್ಕೆಯಾಗಬಹುದು.
ನವದೆಹಲಿ : 5 year FD rates: ನೀವು ಯಾವುದೇ ಅಪಾಯವಿಲ್ಲದೆ, ಸ್ಥಿರ ಆದಾಯದೊಂದಿಗೆ ತೆರಿಗೆ ಉಳಿಸುವ ಆಯ್ಕೆಯನ್ನು ಹುಡುಕುತ್ತಿದ್ದರೆ, 5 ವರ್ಷದ ಬ್ಯಾಂಕ್ ಎಫ್‌ಡಿಗಳು ಉತ್ತಮ ಆಯ್ಕೆಯಾಗಬಹುದು. 5 ವರ್ಷದ ತೆರಿಗೆ ಉಳಿತಾಯ ಎಫ್‌ಡಿ ಮೇಲೆ ಎಸ್‌ಬಿಐ ಎಫ್‌ಡಿಗಿಂತ ಹೆಚ್ಚಿನ ಬಡ್ಡಿಯನ್ನು ನೀಡುವ ಅನೇಕ ಸಣ್ಣ ಬ್ಯಾಂಕುಗಳಿವೆ. ಈ ಬ್ಯಾಂಕುಗಳು 6.50 ಶೇಕಡಾ ವರೆಗೆ ಬಡ್ಡಿ ನೀಡುತ್ತಿವೆ. ಅಂತಹ 5 ಸಣ್ಣ ಬ್ಯಾಂಕುಗಳ ಇತ್ತೀಚಿನ FD ದರಗಳನ್ನು ತಿಳಿದುಕೊಳ್ಳೋಣ ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಐದು ವರ್ಷಗಳ ಎಫ್‌ಡಿಗಳ ಮೇಲೆ 2 ಕೋಟಿ ರೂ.ಗಿಂತ ಕಡಿಮೆ ಠೇವಣಿಗಳ ಮೇಲೆ ವಾರ್ಷಿಕ ಶೇಕಡಾ 6.25 ರ ಬಡ್ಡಿದರವನ್ನು ನೀಡುತ್ತಿದೆ. ಬ್ಯಾಂಕಿನ ಈ ಬಡ್ಡಿದರಗಳು 16 ಆಗಸ್ಟ್ 2021 ರಿಂದ ಅನ್ವಯವಾಗುತ್ತವೆ. ಇದರಲ್ಲಿ, ಹಿರಿಯ ನಾಗರಿಕರು 0.50 ಶೇಕಡಾ ಹೆಚ್ಚು ಬಡ್ಡಿಯನ್ನು ಪಡೆಯುತ್ತಾರೆ.
ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಐದು ವರ್ಷಗಳ ಎಫ್‌ಡಿ ಮೇಲೆ 6.25 ಶೇಕಡಾ ವಾರ್ಷಿಕ ಬಡ್ಡಿಯನ್ನು ನೀಡುತ್ತಿದೆ . ಈ ಬಡ್ಡಿ ದರಗಳು 9 ಆಗಸ್ಟ್ 2021 ರಿಂದ ರೂ 2 ಕೋಟಿಗಿಂತ ಕಡಿಮೆ ಠೇವಣಿಗಳಿಗೆ ಅನ್ವಯವಾಗುತ್ತವೆ. ಈ ಬ್ಯಾಂಕ್ ಹಿರಿಯ ನಾಗರಿಕರಿಗೆ 0.25 ಶೇಕಡಾ ಹೆಚ್ಚು ಬಡ್ಡಿಯನ್ನು ನೀಡುತ್ತಿದೆ.
ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಗ್ರಾಹಕರಿಗೆ 5 ವರ್ಷಗಳ FD ಗಳ ಮೇಲೆ 6.50 ಶೇಕಡಾ ವಾರ್ಷಿಕ ಬಡ್ಡಿಯನ್ನು ನೀಡುತ್ತಿದೆ. ಹಿರಿಯ ನಾಗರಿಕರು 7 ಶೇಕಡಾ ಬಡ್ಡಿಯನ್ನು ಪಡೆಯುತ್ತಾರೆ. ಈ ಬಡ್ಡಿ ದರಗಳು ಮೇ 7 2021 ರಿಂದ ರೂ 2 ಕೋಟಿಗಿಂತ ಕಡಿಮೆ ಠೇವಣಿಗಳಿಗೆ ಅನ್ವಯವಾಗುತ್ತದೆ.
ಉತ್ಕರ್ಶ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗ್ರಾಹಕರಿಗೆ 5 ವರ್ಷಗಳ FD ಗಳ ಮೇಲೆ 6% ವಾರ್ಷಿಕ ಬಡ್ಡಿಯನ್ನು ನೀಡುತ್ತಿದೆ. ಹಿರಿಯ ನಾಗರಿಕರಿಗೆ ಶೇ. 6.50. ಬಡ್ಡಿ ಸಿಗುತ್ತದೆ. ಈ ಬಡ್ಡಿ ದರಗಳು 1 ಜುಲೈ 2021 ರಿಂದ ರೂ 2 ಕೋಟಿಗಿಂತ ಕಡಿಮೆ ಠೇವಣಿಗಳಿಗೆ ಅನ್ವಯವಾಗುತ್ತವೆ.
ನಾರ್ತ್ ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 5 ವರ್ಷಗಳ ಎಫ್‌ಡಿಗಳಿಗೆ 6.25 ಶೇಕಡಾ ವಾರ್ಷಿಕ ಬಡ್ಡಿಯನ್ನು ನೀಡುತ್ತಿದೆ. ಹಿರಿಯ ನಾಗರಿಕರು 6.75 ಶೇಕಡಾ ವಾರ್ಷಿಕ ಬಡ್ಡಿಯನ್ನು ಪಡೆಯುತ್ತಾರೆ. ಈ ಬಡ್ಡಿ ದರಗಳು ಏಪ್ರಿಲ್ 17 2021 ರಿಂದ 2 ಕೋಟಿ ರೂ.ಗಳ ಠೇವಣಿಗಳಿಗೆ ಅನ್ವಯವಾಗುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 5 ವರ್ಷಗಳ FD ಗಳ ಮೇಲೆ 5.50 ಶೇಕಡಾ ವಾರ್ಷಿಕ ಬಡ್ಡಿಯನ್ನು ನೀಡುತ್ತಿದೆ. ಹಿರಿಯ ನಾಗರಿಕರು 6.20 ಶೇಕಡಾ ಬಡ್ಡಿಯನ್ನು ಪಡೆಯುತ್ತಾರೆ. ಈ ಬಡ್ಡಿ ದರಗಳು 8 ಜನವರಿ 2021 ರಿಂದ ರೂ 2 ಕೋಟಿಗಿಂತ ಕಡಿಮೆ ಠೇವಣಿಗಳಿಗೆ ಅನ್ವಯವಾಗುತ್ತವೆ.