Death while playing cricket: ಆಸ್ಟ್ರೇಲಿಯನ್ ಬ್ಯಾಟ್ಸ್ಮನ್ ಫಿಲಿಪ್ ಹ್ಯೂಸ್ 27 ನವೆಂಬರ್ 2014 ರಂದು ಪಂದ್ಯದ ವೇಳೆ ತಲೆಗೆ ಬೌನ್ಸರ್ ಬಡಿದು ಸಾವನ್ನಪ್ಪಿದ್ದರು. ದಕ್ಷಿಣ ಆಸ್ಟ್ರೇಲಿಯಾ ಮತ್ತು ನ್ಯೂ ಸೌತ್ ವೇಲ್ಸ್ ನಡುವೆ ಸಿಡ್ನಿಯಲ್ಲಿ ಈ ಪಂದ್ಯ ನಡೆಯುತ್ತಿತ್ತು. ಫಿಲಿಪ್ ಹ್ಯೂಸ್ ಮಾತ್ರವಲ್ಲ, ಇನ್ನೂ 5 ಆಟಗಾರರು ಆಟದ ಸಮಯದಲ್ಲಿ ಜಗತ್ತಿಗೆ ವಿದಾಯ ಹೇಳಿದ್ದಾರೆ. ಅವರ ಬಗ್ಗೆ ತಿಳಿದುಕೊಳ್ಳೋಣ.
ಬೌಲರ್ ಶಾನ್ ಅಬಾಟ್ ಬೌಲ್ಡ್ ಮಾಡಿದ ಬೌನ್ಸರ್ ನೇರವಾಗಿ ಹ್ಯೂಸ್ ತಲೆಗೆ ಬಡಿದ ಪರಿಣಾಮ ಹ್ಯೂಸ್ ತತ್ತರಿಸಿ ನೆಲಕ್ಕೆ ಬಿದ್ದರು. ಈ ಆಘಾತದ ನಂತರ, ಹ್ಯೂಸ್ 3 ದಿನಗಳ ಕಾಲ ಕೋಮಾದಲ್ಲಿಯೇ ಇದ್ದರು. ಆದರೆ ನವೆಂಬರ್ 27 ರಂದು ಕೊನೆಯುಸಿರೆಳದರು. ಆ ಸಮಯದಲ್ಲಿ ಫಿಲಿಪ್ ಹ್ಯೂಸ್ ಕೇವಲ 26 ವರ್ಷ ವಯಸ್ಸಿನವನಾಗಿದ್ದರು.
ಮೇ 6, 2021 ರಂದು ಇಂಗ್ಲೆಂಡ್ನಲ್ಲಿಯೂ ಒಂದು ದುರಂತ ಘಟನೆ ಸಂಭವಿಸಿದೆ. ನೆಟ್ ಅಭ್ಯಾಸದ ಸಮಯದಲ್ಲಿ 24 ವರ್ಷದ ಕ್ರಿಕೆಟಿಗ ಜೋಶುವಾ ಡೌನಿ ಹಠಾತ್ ಹೃದಯಾಘಾತದಿಂದ ನಿಧನರಾದರು. ಅವರು ಒಲಿಂಪಿಕ್ ಜಿಮ್ನಾಸ್ಟ್ಗಳಾದ ಬೆಕಿ ಡೌನಿ ಮತ್ತು ಎಲ್ಲೀ ಡೌನಿ ಅವರ ಸಹೋದರ.
ಭಾರತ ಕ್ರಿಕೆಟ್ ತಂಡದ ಆಟಗಾರ ರಮಣ್ ಲಂಬಾ ಅವರು ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದಾಗ ಚೆಂಡು ಅವರ ತಲೆಗೆ ತಗುಲಿ ಅಲ್ಲಿಯೇ ಮೂರ್ಛೆ ಹೋಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜಗತ್ತಿಗೆ ವಿದಾಯ ಹೇಳಿದರು. ಅವರ ವಯಸ್ಸು 38 ವರ್ಷವಾಗಿತ್ತು.
ಇಂಗ್ಲೆಂಡಿನ ರಿಚರ್ಡ್ ಬ್ಯೂಮಾಂಟ್ 2012ರಲ್ಲಿ ಆಟದ ಮೈದಾನದಲ್ಲಿ ಹೃದಯಾಘಾತದಿಂದ ಜಗತ್ತಿಗೆ ವಿದಾಯ ಹೇಳಿದ್ದರು. ಆಗ ಅವರ ವಯಸ್ಸು ಕೇವಲ 33 ವರ್ಷ.
ಪಾಕಿಸ್ತಾನಿ ಕ್ರಿಕೆಟಿಗ ಜುಲ್ಫಿಕರ್ ಭಟ್ಟಿ ಕೇವಲ 22 ನೇ ವಯಸ್ಸಿನಲ್ಲಿ ಅಪಘಾತಕ್ಕೆ ಬಲಿಯಾದರು. ಅವರು ದೇಶೀಯ ಪಂದ್ಯವೊಂದರಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಅವರ ಎದೆಗೆ ಚೆಂಡು ಬಡಿದ ಪರಿಣಾಮ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆ ತಲುಪುತ್ತಿದ್ದಂತೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಫೆಬ್ರವರಿ 17, 2021 ರಂದು, ಆಟಗಾರ ಬಾಬು ನಲವಾಡೆ ಎಂಬವರು ಪುಣೆಯಲ್ಲಿ ಪಂದ್ಯವನ್ನು ಆಡುವಾಗ ಹೃದಯಾಘಾತದಿಂದ ನಿಧನರಾದರು. ಅವರ ವಯಸ್ಸು 47 ವರ್ಷವಾಗಿತ್ತು. ತಕ್ಷಣ ಅವರನ್ನು ವೈದ್ಯರ ಬಳಿಗೆ ಕರೆದೊಯ್ದರೂ ಸಹ ಪ್ರಯೋಜನವಾಗಿರಲಿಲ್ಲ.