Tata's best selling carʼs: ಈ ಪಂಚ್ SUVಯು 1.2-ಲೀಟರ್ ಸಾಮರ್ಥ್ಯದ ಪೆಟ್ರೋಲ್ ಮತ್ತು CNG ಎಂಜಿನ್ ಒಳಗೊಂಡಿದ್ದು, ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮೆಟಿಕ್ ಗೇರ್ಬಾಕ್ಸ್ನ್ನು ಹೊಂದಿದೆ. ಪೆಟ್ರೋಲ್ ಚಾಲಿತ ಮಾದರಿಗಳು 18.8 ರಿಂದ 20.09 KMPL, CNG ಚಾಲಿತ ರೂಪಾಂತರಗಳು 26.99 KM/KG ಮೈಲೇಜ್ ನೀಡುತ್ತವೆ.
Tata Punch EV: ಭಾರತದಲ್ಲಿ ಟಾಟಾ ಮೋಟಾರ್ಸ್ ಸುರಕ್ಷಿತ ವಾಹನಗಳ ತಯಾರಿಕೆಗೆ ಹೆಸರುವಾಸಿಯಾಗಿದೆ. ಕಳೆದ ತಿಂಗಳು ಅಂದರೆ ಜೂನ್ನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯ ಜನಪ್ರಿಯ ಮೈಕ್ರೋ SUV 'ಪಂಚ್' ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಕಾರಾಗಿ ಹೊರಹೊಮ್ಮಿದೆ. ಈ ವರ್ಷದ ಮೊದಲಾರ್ಧ ೩ ತಿಂಗಳಲ್ಲಿಯೂ ಈ ಕಾರು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ. ಜೂನ್ನಲ್ಲಿ 18,238 ಯುನಿಟ್, ಮಾರ್ಚ್ನಲ್ಲಿ 17,547 ಹಾಗೂ ಏಪ್ರಿಲ್ನಲ್ಲಿ 19,158 ಯುನಿಟ್ ಪಂಚ್ SUVಗಳ ಮಾರಾಟವಾಗಿದೆ. 26 ಕಿಮೀ ಮೈಲೇಜ್ ನೀಡುವ ಈ ಕಾರು ಕೇವಲ 6 ಲಕ್ಷ ರೂ.ಗೆ ಸಿಗುತ್ತದೆ. ಇದರ ಮತ್ತಷ್ಟು ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ದೇಶೀಯವಾಗಿ ಟಾಟಾ ಪಂಚ್ ಮೈಕ್ರೋ-SUV ಇಂಧನ ಹಾಗೂ ವಿದ್ಯುತ್ ಚಾಲಿತ ಆಯ್ಕೆಯಲ್ಲಿ ಖರೀದಿಗೆ ಸಿಗುತ್ತದೆ. ಇಂಧನ ಚಾಲಿತ ಪಂಚ್ ಕಾರು 6.13 ಲಕ್ಷದಿಂದ 10.20 ಲಕ್ಷ ರೂ. ಎಕ್ಸ್ ಶೋರೂಂ ಬೆಲೆ ಹೊಂದಿದೆ. ಪ್ಯೂರ್ & ಅಡ್ವೆಂಚರ್ ಸೇರಿದಂತೆ ವಿವಿಧ ರೂಪಾಂತರ (ವೇರಿಯೆಂಟ್)ಗಳ ಆಯ್ಕೆಗಳಿವೆ. ಅಟಾಮಿಕ್ ಆರೆಂಜ್, ಟ್ರಾಪಿಕಲ್ ಮಿಸ್ಟ್, ಡೇಟೋನಾ ಗ್ರೇ ಒಳಗೊಂಡಂತೆ ವಿವಿಧ ಬಣ್ಣಗಳಲ್ಲಿ ಈ ಕಾರು ಲಭ್ಯವಿದೆ.
ಈ ಪಂಚ್ SUVಯು 1.2-ಲೀಟರ್ ಸಾಮರ್ಥ್ಯದ ಪೆಟ್ರೋಲ್ & CNG ಎಂಜಿನ್ ಒಳಗೊಂಡಿದ್ದು, ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮೆಟಿಕ್ ಗೇರ್ಬಾಕ್ಸ್ ಹೊಂದಿದೆ. ಪೆಟ್ರೋಲ್ ಚಾಲಿತ ಮಾದರಿಗಳು 18.8 ರಿಂದ 20.09 KMPL, CNG ಚಾಲಿತ ರೂಪಾಂತರಗಳು 26.99 KM/KG ಮೈಲೇಜ್ ನೀಡುತ್ತವೆ.
ನೂತನ ಟಾಟಾ ಪಂಚ್ ಕಾರಿನಲ್ಲಿ 5 ಮಂದಿ ಆರಾಮವಾಗಿ ದೂರದ ಊರುಗಳಿಗೆ ಪ್ರಯಾಣಿಸಬಹುದು. ಹೆಚ್ಚಿನ ಲಗೇಜ್ ಸಾಗಿಸಲು ದೊಡ್ಡದಾದ ಬೂಟ್ ಸ್ಪೇಸ್ ಸಹ ಹೊಂದಿದೆ. ಈ ಕಾರು 7-ಇಂಚಿನ ಟಚ್ಸ್ಕ್ರೀನ್ ಡಿಸ್ಪ್ಲೇ, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಫ್ರಂಟ್ ಏರ್ಬ್ಯಾಗ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು ರೇರ್-ವ್ಯೂ ಕ್ಯಾಮೆರಾವನ್ನು ಸಹ ಹೊಂದಿದೆ.
ಟಾಟಾ ಪಂಚ್ ಇವಿ 10.99 ಲಕ್ಷದಿಂದ 15.49 ಲಕ್ಷ ರೂ. (ಎಕ್ಸ್ ಶೋರೂಂ) ಬೆಲೆ ಇದೆ. ಸ್ಮಾರ್ಟ್, ಸ್ಮಾರ್ಟ್ ಪ್ಲಸ್, ಅಡ್ವೆಂಚರ್, ಎಂಪವರ್ಡ್ ಸೇರಿದಂತೆ ಹಲವು ರೂಪಾಂತರಗಳಲ್ಲಿ ಇದು ದೊರೆಯುತ್ತದೆ. ಸ್ಮಾರ್ಟ್ ಸಿಂಗಲ್ ಟೋನ್, ಫಿಯರ್ಲೆಸ್ ರೆಡ್ ಡುಯಲ್ ಟೋನ್, ಡೇಟೋನಾ ಗ್ರೇ ಡುಯಲ್ ಟೋನ್ ಒಳಗೊಂಡಂತೆ 1 ಮೊನೊಟೋನ್ ಹಾಗೂ 5 ಡುಯಲ್ ಟೋನ್ ಬಣ್ಣಗಳನ್ನು ಇದು ಹೊಂದಿದೆ.
ನೂತನ ಪಂಚ್ ಇವಿ 25 ಮತ್ತು 35 KWH ಬ್ಯಾಟರಿ ಆಯ್ಕೆಯನ್ನು ಹೊಂದಿದ್ದು, ಸಂಪೂರ್ಣ ಚಾರ್ಜ್ನಲ್ಲಿ ಕ್ರಮವಾಗಿ 315 ರಿಂದ 421KM ಓಡುತ್ತದೆ. ಇದರ ಬ್ಯಾಟರಿ ಪ್ಯಾಕ್ ಡಿಸಿ ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ ಶೇ.10-80% ಚಾರ್ಜ್ ಆಗುವುದಕ್ಕೆ 56 ನಿಮಿಷ ತೆಗೆದುಕೊಳ್ಳುತ್ತದೆ. ಈ ಎಲೆಕ್ಟ್ರಿಕ್ ಕಾರಿನಲ್ಲಿ 5 ಜನರು ಓಡಾಡಬಹುದು.
ಟಾಟಾ ಪಂಚ್ ಇವಿ 10.25-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಫುಲ್-ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಸನ್ರೂಫ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6 ಏರ್ಬ್ಯಾಗ್, ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಅನ್ನು ಸಹ ಒಳಗೊಂಡಿದೆ.