ಅತ್ಯಂತ ದುಬಾರಿ ಗಿಫ್ಟ್ ಪಡೆದ ಸ್ಟಾರ್ ಕಿಡ್ ಗಳಿವರು ..!

ಬಿ-ಟೌನ್ ತಾರೆಯರು ತಮ್ಮ ಮಕ್ಕಳಿಗೆ ಆಗಾಗ ದುಬಾರಿ ಉಡುಗೊರೆಗಳನ್ನು ನೀಡುತ್ತಿರುತ್ತಾರೆ. 

ಬೆಂಗಳೂರು : ಬಾಲಿವುಡ್ ತಾರೆಯರು ಐಷಾರಾಮಿ ಜೀವನ ನಡೆಸುತ್ತಾರೆ.  ತಮ್ಮ ಮಕ್ಕಳಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ನೀಡಲು ಪ್ರಯತ್ನಿಸುತ್ತಾರೆ. ಬಿ-ಟೌನ್ ತಾರೆಯರು ತಮ್ಮ ಮಕ್ಕಳಿಗೆ ಆಗಾಗ ದುಬಾರಿ ಉಡುಗೊರೆಗಳನ್ನು ನೀಡುತ್ತಿರುತ್ತಾರೆ. ಹೀಗೆ ತಮ್ಮ ಹೆತ್ತವರಿಂದ ದುಬಾರಿ ಗಿಫ್ಟ್ ಗಳನ್ನು ಪಡೆದ ತಾರೆಯರ ಮಕ್ಕಳು ಯಾರು ನೋಡೋಣ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಶಾರುಖ್ ಖಾನ್ ಮಕ್ಕಳಾದ ಆರ್ಯನ್ ಮತ್ತು ಸುಹಾನಾ ಖಾನ್ ತುಂಬಾ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಶಾರುಖ್ ತಮ್ಮ ಮಕ್ಕಳಿಗೆ 78 ಲಕ್ಷ ರೂಪಾಯಿ ಮೌಲ್ಯದ ಆಡಿ ಎ6 ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ . ಇದಲ್ಲದೆ, ಅವರು ತಮ್ಮ ಕಿರಿಯ ಮಗ ಅಬ್ರಾಮ್‌ಗೆ ಸಾಬು ಸಿರಿಲ್ ವಿನ್ಯಾಸಗೊಳಿಸಿದ ಭವ್ಯವಾದ  ಟ್ರೀ ಹೌಸ್ ಅನ್ನು  ಉಡುಗೊರೆಯಾಗಿ ನೀಡಿದ್ದಾರೆ.  

2 /5

ಆರಾಧ್ಯ ಬಚ್ಚನ್ ಅಭಿಷೇಕ್ ಮತ್ತು ಐಶ್ವರ್ಯಾ ದಂಪತಿಯ ಪುತ್ರಿ. ಮಾಧ್ಯಮ ವರದಿಗಳ ಪ್ರಕಾರ, ಇಬ್ಬರೂ ಆರಾಧ್ಯ ಅವರ ಮೊದಲ ಹುಟ್ಟುಹಬ್ಬದಂದು ಬಿಎಂಡಬ್ಲ್ಯು ಮಿನಿ ಕೂಪರ್ ಎಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರ ಬೆಲೆ ಸುಮಾರು 33 ಲಕ್ಷ ರೂ. ಇದಲ್ಲದೇ ನಾಲ್ಕು ವರ್ಷ ತುಂಬಿದ ಖುಷಿಯಲ್ಲಿ ಆರಾಧ್ಯ ಅವರಿಗೆ 1.58 ಕೋಟಿ ಮೌಲ್ಯದ ಆಡಿ 8 ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

3 /5

ತೈಮೂರ್ ಅಲಿ ಖಾನ್‌ಗೆ ಸೈಫ್ ಅಲಿ ಖಾನ್ ಮತ್ತು ಕರೀನಾ ತಮ್ಮ ಮಗ 1.30 ಕೋಟಿ ಮೌಲ್ಯದ ಐಷಾರಾಮಿ ಕೆಂಪು ಜೀಪ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

4 /5

ಸಂಜಯ್ ದತ್ ಮತ್ತು ಅವರ ಮೊದಲ ಪತ್ನಿ ರಿಚಾ ಶರ್ಮಾ ಅವರ ಮಗಳ ಹೆಸರು ತ್ರಿಶಾಲಾ. ಸಂಜಯ್ ದತ್ ಅವರು ತಮ್ಮ ಮಗಳ ಹುಟ್ಟುಹಬ್ಬದಂದು ಕೋಟ್ಯಂತರ ಮೌಲ್ಯದ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

5 /5

ಆದಿರಾ ಚೋಪ್ರಾ, ರಾಣಿ ಮುಖರ್ಜಿ ಮತ್ತು ಆದಿತ್ಯ ಚೋಪ್ರಾ ದಂಪತಿಯ ಪುತ್ರಿ. ಮಾಧ್ಯಮ ವರದಿಗಳ ಪ್ರಕಾರ, ಆದಿತ್ಯ ಮತ್ತು ರಾಣಿ ತಮ್ಮ ಮಗಳಿಗೆ ಎರಡು ಬಂಗಲೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದರೆ, ಅವುಗಳ ಬೆಲೆಯ ಮಾಹಿತಿ ಲಭ್ಯವಾಗಿಲ್ಲ.