ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಜಗನಾಥ ಸ್ವಾಮಿಗೆ ದ್ರೌಪದಿ ಮುರ್ಮು ಪೂಜೆ

ದ್ರೌಪದಿ ಮುರ್ಮು ಜಾರ್ಖಂಡ್‌ನ ಮೊದಲ ಏಕೈಕ ಗವರ್ನರ್ ಆಗಿದ್ದರು. ರಾಜ್ಯಪಾಲೆಯಾಗಿ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ್ದರು. 

ಬಿಜೆಪಿ ನೇತೃತ್ವದ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ  ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಲಾಗಿದೆ. ದ್ರೌಪದಿ ಮುರ್ಮು ಈ ಹಿಂದೆ ಜಾರ್ಖಂಡ್‌ನ ರಾಜ್ಯಪಾಲರೂ ಆಗಿದ್ದಾರೆ. ಒಡಿಶಾ ಮೂಲದವರಾಗಿರುವ ದ್ರೌಪದಿ ಮುರ್ಮು ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ದ್ರೌಪದಿ ಮುರ್ಮು ಜಾರ್ಖಂಡ್‌ನ ಮೊದಲ ಏಕೈಕ ಗವರ್ನರ್ ಆಗಿದ್ದರು. ರಾಜ್ಯಪಾಲೆಯಾಗಿ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ್ದರು. ದ್ರೌಪದಿ ಮುರ್ಮು ಅವರು ತಮ್ಮ ಐದು ವರ್ಷಗಳ ಅವಧಿಯ ನಂತರವೂ ರಾಜ್ಯಪಾಲ ಹುದ್ದೆಯನ್ನು ಮುಂದುವರೆಸಿದ್ದರು. ಅವರ ಅಧಿಕಾರಾವಧಿಯು 17 ಮೇ 2021 ರಂದು ಕೊನೆಗೊಂಡಿತ್ತು.

2 /5

ಪ್ರಥಮ ಬಾರಿಗೆ ಆದಿವಾಸಿ ಮಹಿಳೆಗೆ ಆದ್ಯತೆ ನೀಡಲಾಗುತ್ತಿದೆ. ದ್ರೌಪದಿ ಮುರ್ಮು ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿದ್ದಾರೆ. ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳು ಜಂಟಿ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರನ್ನು ಕಣಕ್ಕಿಳಿಸಿವೆ.  

3 /5

ಮತ್ತೊಂದೆಡೆ, ಎನ್‌ಡಿಎಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಇಂದು ರಾಯರಂಗಪುರದ ಜಗನ್ನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಿಜೆಪಿ ಜೊತೆಗೆ ಇತರ ಮೈತ್ರಿ ಪಕ್ಷಗಳು ಕೂಡಾ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿವೆ.

4 /5

ದ್ರೌಪದಿ ಮುರ್ಮು 18 ಮೇ 2015 ರಂದು ಜಾರ್ಖಂಡ್‌ನ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲು ಒಡಿಶಾದಲ್ಲಿ ಎರಡು ಬಾರಿ ಶಾಸಕರಾಗಿ ಮತ್ತು ಒಮ್ಮೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಗವರ್ನರ್ ಆಗಿ ಅವರ ಐದು ವರ್ಷಗಳ ಅವಧಿಯು 18 ಮೇ 2020 ರಂದು ಕೊನೆಗೊಂಡಿತ್ತು.   

5 /5

ತಮ್ಮ ಅಧಿಕಾರಾವಧಿಯಲ್ಲಿ ದ್ರೌಪದಿ ಮುರ್ಮು  ಎಂದಿಗೂ ವಿವಾದಗಳಿಗೆ ಸಿಲುಕಿಲ್ಲ. ಅವರು ಬುಡಕಟ್ಟು ವ್ಯವಹಾರಗಳು, ಶಿಕ್ಷಣ, ಕಾನೂನು ಮತ್ತು ಸುವ್ಯವಸ್ಥೆ, ಜಾರ್ಖಂಡ್‌ನ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಯಾವಾಗಲೂ ಜಾಗರೂಕರಾಗಿದ್ದರು.