ಏಪ್ರಿಲ್ 11, ರಿಂದ, ಶನಿಯ ದಶಮ ದೃಷ್ಟಿಯು ಕುಂಭದಿಂದ ವೃಶ್ಚಿಕ ರಾಶಿಯ ಮೇಲೆ ಬೀಳುತ್ತಿದೆ. ಶನಿಯ ದೃಷ್ಟಿಯ ಕಾರಣದಿಂದಲೇ ಈ ರಾಶಿಯವರು ಬೇಕಾಗಿದ್ದನ್ನೆಲ್ಲಾ ಪಡೆಯುತ್ತಾರೆ.
ಬೆಂಗಳೂರು : ಶನಿದೇವನು ಜನವರಿ 17 ರಂದು ಕುಂಭ ರಾಶಿಯಲ್ಲಿ ಸಂಕ್ರಮಿಸಿದ್ದಾನೆ. ಇನ್ನು ಎರಡೂವರೆ ವರ್ಷ ಶನಿ ದೇವ ಇದೇ ರಾಶಿಯಲ್ಲಿ ಇರಲಿದ್ದಾನೆ. ಇಲ್ಲಿಂದಲೇ ಶನಿಯ ದಶಮ ದೃಷ್ಟಿ ವೃಶ್ಚಿಕ ರಾಶಿಯ ಮೇಲೆ ಬೀಳುತ್ತಿದೆ. ಶುಕ್ರ ಗ್ರಹವು ವೃಶ್ಚಿಕ ರಾಶಿಯ ಮೇಲೆ ಏಳನೇ ಅಂಶವನ್ನು ಹೊಂದಿದೆ. ಇದರಿಂದಾಗಿ ಮಾಲವ್ಯ ಮತ್ತು ಶಶ ರಾಜಯೋಗ ರೂಪುಗೊಳ್ಳುತ್ತಿದೆ. ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ಶನಿಯ ದಶಮ ದೃಷ್ಟಿಯ ಶುಭ ಫಲಗಳು ಕೆಲವು ರಾಶಿಯವರ ಜೀವನದ ಮೇಲೆ ಕಂಡು ಬರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಜಾತಕದಲ್ಲಿ ಶನಿ ದೇವರ ಸ್ಥಾನ ಬಹಳ ಮುಖ್ಯ,. ಶನಿ ಮಹಾತ್ಮ ಯಾವ ರಾಶಿಯಲ್ಲಿದ್ದಾನೆ ಎನ್ನುವುದು ನಮ್ಮ ಜೀವನದ ಮೇಲೆ ಬಹು ದೊಡ್ಡ ಪರಿಣಾಮವನ್ನು ಬೀರುತ್ತದೆ. ಶನಿಯ ಶುಭ ದೃಷ್ಟಿ ವ್ಯಕ್ತಿಯ ಮೇಲೆ ಬಿದ್ದರೆ, ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತವೆ ಎಂದು ಹೇಳಲಾಗುತ್ತದೆ. ಒಂದು ವೇಳೆ ಶನಿಯ ಕೆಟ್ಟ ದೃಷ್ಟಿ ಬಿದ್ದರೆ ಸಾಲು ಸಾಲು ಸಂಕಷ್ಟಗಳನ್ನು ಎದುರಿಸಬೇಕಾಗಬಹುದು. ಇದೀಗ ಶನಿಯ ದಶಮ ದೃಷ್ಟಿಯ ಶುಭ ಫಲ ಕೆಲವು ರಾಶಿಯವರಿಗೆ ಸಿಗಲಿದೆ.
ಏಪ್ರಿಲ್ 11, ರಿಂದ, ಶನಿಯ ದಶಮ ದೃಷ್ಟಿಯು ಕುಂಭದಿಂದ ವೃಶ್ಚಿಕ ರಾಶಿಯ ಮೇಲೆ ಬೀಳುತ್ತಿದೆ. ಇದರ ಪರಿಣಾಮ ಶನಿಯ 3 ರಾಶಿಗಳ ಜನರ ಮೇಲೆ ಬಹಳ ಶುಭ ಪರಿಣಾಮವೇ ಗೋಚರಿಸಲಿದೆ. ಶನಿಯ ದೃಷ್ಟಿಯ ಕಾರಣದಿಂದಲೇ ಈ ರಾಶಿಯವರು ಬೇಕಾಗಿದ್ದನ್ನೆಲ್ಲಾ ಪಡೆಯುತ್ತಾರೆ.
ವೃಷಭ ರಾಶಿ : ಶನಿಯ ದಶಮ ದೃಷ್ಟಿಯು ವೃಷಭ ರಾಶಿಯ ಕರ್ಮದ ಮನೆಯ ಮೇಲೆ ಬೀಳುತ್ತಿದೆ. ಇದರಿಂದಾಗಿ ಈ ರಾಶಿಯವರು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಪಡೆಯುತ್ತಾರೆ. ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
ಸಿಂಹ ರಾಶಿ- ಸಿಂಹ ರಾಶಿಯವರಿಗೆ ಕೂಡಾ ಶನಿಯ ದಶಮ ದೃಷ್ಟಿಯ ಲಾಭ ಸಿಗಲಿದೆ. ಜೀವಣದಲ್ಲಿ ಏನೇ ಸವಾಲುಗಳು ಎದುರಾದರೂ ಅವುಗಳನ್ನು ಮೀರಿ ಗೆಲುವು ಸಾಧಿಸುತ್ತೀರಿ. ಯಾವ್ ಕೆಲಸಕ್ಕೆ ಕೈ ಹಾಕಿದರೂ ಗೆಲುವು ನಿಮ್ಮದೇ. ಕಲಾ ಕ್ಷೇತ್ರಕ್ಕೆ ಸಂಬಂಧಿಸಿದವರಗೆ ಹೆಚ್ಚಿನ ಲಾಭವಾಗಲಿದೆ.
ಕುಂಭ ರಾಶಿ - ಕುಂಭ ರಾಶಿಯವರಿಗೆ ಶನಿಯ ದಶಮ ದೃಷ್ಟಿಯು ತುಂಬಾ ಶುಭಕರವಾಗಿರುತ್ತದೆ. ಈ ರಾಶಿಯವರ ಜಾತಕದಲ್ಲಿ ಎರಡನೇ ಹಂತದ ಏಳೂವರೆ ಶನಿ ದೆಸೆ ನಡೆಯುತ್ತಿದೆ. ಆದರೂ ಈ ರಾಶಿಯವರ ಮೇಲೆ ಶನಿ ಮಹಾತ್ಮನ ಕೃಪಾ ಕಟಾಕ್ಷ ಇರುತ್ತದೆ. ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ. ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)