Sanjukta Parashar: ಈ ಲೇಡಿ IPS ಹೆಸರು ಕೇಳಿದ್ರೆ ಉಗ್ರರಲ್ಲಿ ನಡುಕ ಹುಟ್ಟುತ್ತಂತೆ, 15 ತಿಂಗ್ಳಲ್ಲಿ 16 ಉಗ್ರರ ಎನ್ಕೌಂಟರ್

Sanjukta Parashar: ಅಸ್ಸಾಂ ಮಹಿಳಾ IPS ಅಧಿಕಾರಿ ಸಂಜುಕ್ತಾ ಪರಾಶರ್ (Sanjukta Parashar) ಅವರನ್ನು ಶೌರ್ಯದ ಮತ್ತೊಂದು ಹೆಸರು ಎಂದರೆ ತಪ್ಪಾಗಲಾರದು. ಏಕೆಂದರೆ ಆ ಮಹಿಳಾ ಸಿಂಘಂ (Lady Singham) ಅಧಿಕಾರಿಯ ಹೆಸರು ಕೇಳಿದ್ರೆನೇ ಉಗ್ರರಲ್ಲಿ ನಡುಕ ಉಂಟಾಗುತ್ತಂತೆ. ಈ ಮಹಿಳಾ IPS ಅಧಿಕಾರಿಯ ವಿಶೇಷತೆ ಎಂದರೆ, ಈಕೆ ಕಾಡುಗಳಲ್ಲಿ AK-47 ಹಿಡಿದು ಸುತ್ತುತ್ತಾಳಂತೆ.

Sanjukta Parashar: ಅಸ್ಸಾಂ ಮಹಿಳಾ IPS ಅಧಿಕಾರಿ ಸಂಜುಕ್ತಾ ಪರಾಶರ್ (Sanjukta Parashar) ಅವರನ್ನು ಶೌರ್ಯದ ಮತ್ತೊಂದು ಹೆಸರು ಎಂದರೆ ತಪ್ಪಾಗಲಾರದು. ಏಕೆಂದರೆ ಆ ಮಹಿಳಾ ಸಿಂಘಂ (Lady Singham) ಅಧಿಕಾರಿಯ ಹೆಸರು ಕೇಳಿದ್ರೆನೇ ಉಗ್ರರಲ್ಲಿ ನಡುಕ ಉಂಟಾಗುತ್ತಂತೆ. ಈ ಮಹಿಳಾ IPS ಅಧಿಕಾರಿಯ ವಿಶೇಷತೆ ಎಂದರೆ, ಈಕೆ ಕಾಡುಗಳಲ್ಲಿ AK-47 ಹಿಡಿದು ಸುತ್ತುತ್ತಾಳಂತೆ. ಕಳೆದ 15 ತಿಂಗಳಿನಲ್ಲಿ ಈಕೆ ಮಾಡಿರುವ ಎನ್ಕೌಂಟರ್ (Encounter) ಗಳ ಸಂಖ್ಯೆ 16. ಸುಮಾರು 64 ಕ್ಕೂ ಹೆಚ್ಚು ಜನರನ್ನು ಇದುವರೆಗೆ ಬಂಧಿಸಿ ಹಲವು ಟನ್ ಲೆಕ್ಕಾಚಾರದಲ್ಲಿ ಸಿಡಿಮದ್ದು ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾಳೆ. ಅಸ್ಸಾಂನ ಬೋಡೊ ಉಗ್ರರ  ಮನದಲ್ಲಿ ನಡುಕ ಹುಟ್ಟಿಸಲು ಸಂಜುಕ್ತಾ ಪರಾಶರ್ ಒಂದು ಹೆಸರು ಸಾಕು.

 

ಇದನ್ನೂ ಓದಿ-Sputnik Light Vaccine: ದೇಶಕ್ಕೆ ಯಾವಾಗ ಸಿಗಲಿದೆ ಸಿಂಗಲ್ ಡೋಸ್ ಲಸಿಕೆ ಸ್ಪುಟ್ನಿಕ್? ಅದರ ಬೆಲೆ ಎಷ್ಟು?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /7

1. JNU ನಲ್ಲಿ ವ್ಯಾಸಂಗ - ದಿ ಬೆಟರ್ ಇಂಡಿಯಾ ವರದಿಯ ಪ್ರಕಾರ, ಸಂಜುಕ್ತಾ ಪರಾಶರ್ ಅಸ್ಸಾಂನಲ್ಲಿ ಜನಿಸಿದ್ದು, ತಮ್ಮ ಆರಂಭಿಕ ವ್ಯಾಸಂಗವನ್ನು ಅಲ್ಲಿಯೇ ನಡೆಸಿದ್ದಾರೆ.  12ನೇ ತರಗತಿಯ ಬಳಿಕ , ಸಂಯುಕ್ತಾ ದೆಹಲಿಯ ಇಂದ್ರಪ್ರಸ್ಥ ಕಾಲೇಜಿನಲ್ಲಿ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಇದರ ನಂತರ, ಅವರು ಜೆಎನ್‌ಯು (JNU) ಮತ್ತು ಎಂಫಿಲ್‌ನಿಂದ ಇಂಟರ್ನ್ಯಾಷನಲ್ ರಿಲೇಶನ್ಸ್ ನಲ್ಲಿ ಪಿಜಿ ಮತ್ತು ಯುಎಸ್ ವಿದೇಶಾಂಗ ನೀತಿಯಲ್ಲಿ ಪಿಎಚ್‌ಡಿ ಮಾಡಿದ್ದಾರೆ.

2 /7

2. 2006 ಬ್ಯಾಚ್ IPS ಅಧಿಕಾರಿ - ಸಂಜುಕ್ತಾ ಪರಾಶರ್ 2006 ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಅಖಿಲ ಭಾರತ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 85 ನೇ ಶ್ರೇಣಿಯನ್ನು ಪಡೆದಿದ್ದಾರೆ. ಇದರ ನಂತರ ಅವರು ಮೇಘಾಲಯ-ಅಸ್ಸಾಂ ಕೇಡರ್ (Assam-Meghalay Cadre) ಅನ್ನು ತಮ್ಮ ಸೇವೆಗೆ ಆಯ್ಕೆ ಮಾಡಿಕೊಂಡಿದ್ದಾರೆ. 

3 /7

3. 2008 ರಲ್ಲಿ ಮೊದಲ ಪೋಸ್ಟಿಂಗ್ - 2008 ರಲ್ಲಿ ಆಸಾಂನ ಮಾಕುಂನಲ್ಲಿ ಅವರು ಮೊಟ್ಟಮೊದಲ ಬಾರಿಗೆ ಸಹಾಯಕ ಕಮಾಂಡೆಂಟ್ ಆಗಿ ನೇಮಕಗೊಂಡಿದ್ದರು. ನಂತರ ಅವರನ್ನು ಉಡಲಗಿರಿಯಲ್ಲಿ ಬೋಡೊ ಉಗ್ರರನ್ನು (Bodo Militants) ಹಾಗೂ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರವನ್ನು ನಿಯಂತ್ರಿಸಲುಕಳುಹಿಸಲಾಯಿತು.

4 /7

4. AK-47 ಹಿಡಿದು ಸುತ್ತುತ್ತಾಳಂತೆ - ಸಂಜುಕ್ತಾ ಪರಾಶರ್, ಅಸ್ಸಾಂನ ಸೋನಿತ್ಪುರ್ ಜಿಲ್ಲೆಯಲ್ಲಿ ಎಸ್‌ಪಿಯಾಗಿದ್ದಾಗ, ಸಿಆರ್‌ಪಿಎಫ್ ಜವಾನರ ತಂಡವನ್ನು ಮುನ್ನಡೆಸಿದ್ದರು ಮತ್ತು ಅವರು ಎಕೆ - 47 ಹಿಡಿದು ಬೋಡೋ ಉಗ್ರರನ್ನು ಸದೆಬಡಿದಿದ್ದಾರೆ. ಈ ಕಾರ್ಯಾಚರಣೆಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ತನ್ನ ಇಡೀ ತಂಡದೊಂದಿಗೆ ಕೈಯಲ್ಲಿ ಎಕೆ - 47 ರೈಫಲ್‌ಗಳೊಂದಿಗೆ ಕಾಣಿಸಿಕೊಂಡಿದ್ದಾರೆ .

5 /7

5. ಸಂಜುಕ್ತಾ ಹೆಸರು ಕೇಳಿದ್ರೆನೇ ನಡುಗುತ್ತಾರಂತೆ ಉಗ್ರರು - ಉಗ್ರ ಸಂಘಟನೆಯಿಂದ ಸಂಜುಕ್ತಾ ಪರಾಶರ್‌ಗೆ ಹಲವು ಬಾರಿ ಪ್ರಾಣ ಬೆದರಿಕೆಗಳು ಬಂದಿವೆ, ಆದರೆ ಅವರು ಇದುವರೆಗೂ ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಭಯೋತ್ಪಾದಕರಿಗೆ ದುಃಸ್ವಪ್ನದಂತಿದ್ದಾರೆ  ಮತ್ತು ಆಕೆಯ ಹೆಸರು ಕೇಳಿದ್ರೆನೇ ಉಗ್ರರು ನಡುಗುತ್ತಾರಂತೆ.

6 /7

6. 15 ತಿಂಗಳಿನಲ್ಲಿ 15 ಎನ್ಕೌಂಟರ್ - ಸಂಜುಕ್ತಾ ಪರಾಶರ್ 2015 ರಲ್ಲಿ ಬೋಡೋ ವಿರೋಧಿ ಭಯೋತ್ಪಾದನಾ ಕಾರ್ಯಾಚರಣೆಯನ್ನು ಮುನ್ನಡೆಸಿದ್ದರು ಮತ್ತು ಅವರು ಕೇವಲ 15 ತಿಂಗಳಲ್ಲಿ 16 ಉಗ್ರರನ್ನು ಮಟ್ಟಹಾಕಿದ್ದರು. ಇದಲ್ಲದೇ ಆಕೆ 64 ಬೋಡೋ ಉಗ್ರರನ್ನು ಜೈಲಿಗಟ್ಟಿದ್ದಾರೆ. ಜೊತೆಗೆ ಅವರ ತಂಡ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಅವರ ತಂಡ 2014 ರಲ್ಲಿ 175 ಭಯೋತ್ಪಾದಕರನ್ನು ಮತ್ತು 2013 ರಲ್ಲಿ 172 ಭಯೋತ್ಪಾದಕರನ್ನು ಜೈಲಿಗಟ್ಟಿದೆ.

7 /7

7. ರಿಲೀಫ್ ಕ್ಯಾಂಪ್ ಗಳಲ್ಲಿ ಸಹಾಯ ಮಾಡುತ್ತಾರೆ - ಓರ್ವ ಕಠಿಣ ಪೊಲೀಸ್ ಅಧಿಕಾರಿಯ ಕರ್ತವ್ಯವನ್ನು ನಿರ್ವಹಿಸುವುದರ ಜೊತೆಗೆ, ಸಂಜುಕ್ತಾ ಪರಾಶರ್ ತನ್ನ ಹೆಚ್ಚಿನ ಸಮಯವನ್ನು ಕೆಲಸದಿಂದ ವಿರಾಮ ಸಿಕ್ಕಾಗ ಪರಿಹಾರ ಶಿಬಿರಗಳಲ್ಲಿ ಜನರಿಗೆ ಸಹಾಯ ಮಾಡುವಲ್ಲಿ ಕಳೆಯುತ್ತಾರೆ. ತಾವು ತುಂಬಾ ವಿನಮ್ರ ಹಾಗೂ ಲವಿಂಗ್ ಆಗಿರುವುದಾಗಿ ಹೇಳುವ ಸಂಜುಕ್ತಾ ಅಪರಾಧಿಗಳು ಮಾತ್ರ ತನಗೆ ಭಯಪಡುತ್ತಾರೆ ಎಂದು ಹೇಳುತ್ತಾರೆ.