Smartphones: 20 ಸಾವಿರದೊಳಗಿನ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಇಲ್ಲಿವೆ ನೋಡಿ

ಬಜೆಟ್ ಬೆಲೆಯಲ್ಲಿ ಬ್ಯಾಟರಿ, ಕ್ಯಾಮರಾ ಮತ್ತು ಮೆಮೊರಿಯಂತಹ ಅತ್ಯಗತ್ಯ ವೈಶಿಷ್ಟ್ಯಗಳಲ್ಲಿ ಅತ್ಯುತ್ತಮವಾದ ಸ್ಮಾರ್ಟ್‌ಫೋನ್‌ ಖರೀದಿಸಿ.

ಬ್ಯಾಟರಿ, ಕ್ಯಾಮರಾ ಮತ್ತು ಮೆಮೊರಿಯಂತಹ ಅತ್ಯಗತ್ಯ ವೈಶಿಷ್ಟ್ಯಗಳಲ್ಲಿ ಅತ್ಯುತ್ತಮವಾದ ಸ್ಮಾರ್ಟ್‌ಫೋನ್‌ ಖರೀದಿಸುವುದು ಬಹುತೇಕರ ಆಸೆಯಾಗಿರುತ್ತದೆ. ಬಜೆಟ್ ಬೆಲೆಯಲ್ಲಿ ಫೋನ್ ಖರೀದಿಸಬೇಕೆಂದು ಅನೇಕರು ಯೋಚಿಸುತ್ತಿರುತ್ತಾರೆ. ಒಳ್ಳೆಯ ಫೋನ್ ಖರೀದಿಸುವುದು ಎಂದರೆ ಜೇಬಿಗೆ ಸ್ವಲ್ಪ ಕತ್ತರಿ ಬೀಳುತ್ತದೆ. ಸಾಕಷ್ಟು ಹಣ ಖರ್ಚು ಮಾಡುವುದು ನೋವುಂಟು ಮಾಡುತ್ತದೆ. ನೀವು ಕೂಡ ಇದರ ಬಗ್ಗೆ ಚಿಂತಿತರಾಗಿದ್ದರೆ ಜಾಸ್ತಿ ಯೋಚಿಸಬೇಡಿ. ಏಕೆಂದರೆ ನಿಮ್ಮ ಬಜೆಟ್ ಗೆ ತಕ್ಕುದಾದ 5 ಸ್ಮಾರ್ಟ್‌ಫೋನ್‌ಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡುತ್ತೇವೆ. ಇವುಗಳ ವೈಶಿಷ್ಟ್ಯಗಳು ಅದ್ಭುತವಾಗಿವೆ ಮತ್ತು ಅವುಗಳ ಬೆಲೆ 20 ಸಾವಿರ ರೂ.ಗಿಂತಲೂ ಕಡಿಮೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

Samsung Galaxy M32: ಈ ಸ್ಮಾರ್ಟ್‌ಫೋನ್‌ 6,000mAh ಬ್ಯಾಟರಿ ಮತ್ತು 64MP ಕ್ಯಾಮೆರಾ ಹೊಂದಿದ್ದು, 25W ಫಾಸ್ಟ್ ಚಾರ್ಜಿಂಗ್ ಬೆಂಬಲವಿದೆ. ಇದು ಕೇವಲ 14,999 ರೂ.ಗೆ ನಿಮಗೆ ಸಿಗುತ್ತದೆ. 64GB ಸ್ಟೋರೇಜ್ ಹೊಂದಿರುವ ಈ ಫೋನ್ ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ.

2 /5

Realme Narzo 30 5G: ಈ 5G ರಿಯಾಲಿಟಿಯ ಸ್ಮಾರ್ಟ್ ಫೋನಿನ ರೂಪಾಂತರವನ್ನು ನೀವು 16,999 ರೂ.ಗೆ ಖರೀದಿಸಬಹುದು. ಇದು 128GB ಆಂತರಿಕ ಸ್ಟೋರೇಜ್ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ. 6.5-ಇಂಚಿನ ಫುಲ್ HD + ಡಿಸ್ಪ್ಲೇ ಮತ್ತು 5000mAh ಬ್ಯಾಟರಿ ಹಾಗೂ 18W ತ್ವರಿತ ಚಾರ್ಜಿಂಗ್ ಬೆಂಬಲದೊಂದಿಗೆ ಲಭ್ಯವಿದೆ.

3 /5

Vivo Y33s: 50MP ಕ್ಯಾಮೆರಾ ಹೊಂದಿರುವ ಈ ವಿವೋ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 11ರಲ್ಲಿ ಕಾರ್ಯನಿರ್ವಹಿಸುತ್ತದೆ. 6.58-ಇಂಚಿನ ಫುಲ್ HD + LCD ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಫೋನ್ 16MP ಫ್ರಂಟ್ ಕ್ಯಾಮೆರಾ, 5000mAh ಬ್ಯಾಟರಿ ಮತ್ತು 18W ಫಾಸ್ಟ್ ಚಾರ್ಜಿಂಗ್ ಬೆಂಬಲ ಸೌಲಭ್ಯವನ್ನು ಹೊಂದಿದೆ. ವಿವೋದ ಈ ಫೋನ್ ಬೆಲೆ ಕೇವಲ 17,990 ರೂ.

4 /5

iQOO Z3 5G: ಇದು 19,990 ರೂ.ಗಳಲ್ಲಿ ಲಭ್ಯವಿರುವ ಅತ್ಯುತ್ತಮ ಫೋನ್ ಆಗಿದೆ. ಈ ಫೋನ್ 64MP ಕ್ಯಾಮೆರಾ, 16MP ಮುಂಭಾಗದ ಕ್ಯಾಮೆರಾ, 128GB ಮೆಮೊರಿ ಮತ್ತು 4400mAh ಬ್ಯಾಟರಿಯೊಂದಿಗೆ ಬರುತ್ತದೆ. ಇದು ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಇದರ ಎಫ್‌ಎಚ್‌ಡಿ + ಡಿಸ್‌ಪ್ಲೇ 6,58 ಇಂಚು ಇದೆ.  

5 /5

redmi note 10 pro max: ಈ ಪಟ್ಟಿಯಲ್ಲಿರುವ ಅತ್ಯಂತ ದುಬಾರಿ ಫೋನ್ ಇದಾಗಿದೆ. ಇದರ ಬೆಲೆ 19,999 ರೂ. ಈ ಫೋನ್ ಕ್ವಾಡ್ ಕ್ಯಾಮೆರಾ ಸೆಟಪ್ ನೊಂದಿಗೆ ಬರುತ್ತದೆ ಮತ್ತು ಇದರ ಮುಖ್ಯ ಕ್ಯಾಮರಾ 108MP ಇದೆ. ಈ ಫೋನ್ 16MP ಫ್ರಂಟ್ ಕ್ಯಾಮೆರಾ, 5020mAh ಬ್ಯಾಟರಿ ಮತ್ತು 33W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.