ಪೂನಂ ಪಾಂಡೆ ಸೇರಿದಂತೆ ಅತೀ ಚಿಕ್ಕ ವಯಸ್ಸಿನಲ್ಲೇ ಅಗಲಿದ ನಟಿಯರು ಇವರೇ.!


Poonam pandey death : ಈ ಸಿನಿಜಗತ್ತು ಒಂಥರಾ ಮಾಯಾಲೋಕ ಇದ್ದಂಗೆ. ಇಲ್ಲಿ ಕೆಲವರು ಕಡಿಮೆ ಸಮಯದಲ್ಲಿ ದೊಡ್ಡ ಹೆಸರು ಗಳಿಸುತ್ತಾರೆ. ಇಂತಹ ಸ್ಟಾರ್ ಸ್ಟೇಟಸ್ ಅನುಭವಿಸಿದವರ ಹಠಾತ್ ಸಾವುನ್ನು ಅಭಿಮಾನಿಗಳು ಇಂದಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಧ್ಯ ಬಾಲಿವುಡ್‌ ತಾರೆ ಪೂನಂ ಪಾಂಡೆ ಹಠಾತ್ ನಿಧನ ಚಿತ್ರರಂಗದ ಜೊತೆಗೆ ಅವರ ಅಭಿಮಾನಿಗಳನ್ನೂ ದಿಗ್ಭ್ರಮೆಗೊಳಿಸಿದೆ. ಬನ್ನಿ ಇದೇ ರೀತಿ ಕಿರಿಯ ವಯಸ್ಸಿನಲ್ಲೇ ಅಗಲಿದ ನಾಯಕಿಯರು ಯಾರೆಂದು ಒಮ್ಮೆ ನೋಡಿ.
 

1 /7

Poonam Pandey : ಜನಪ್ರಿಯ ನಟಿ, ಮಾಡೆಲ್ ಪೂನಂ ಪಾಂಡೆ ಇಂದು ನಿಧನರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಟಿ ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ್ದಾರೆ ಎಂದು ಆಕೆಯ ಆಪ್ತರು ಹೇಳಿದ್ದಾರೆ. ಅದೇನೇ ಇರಲಿ, ಉಜ್ವಲ ಭವಿಷ್ಯವನ್ನು ಹೊಂದಿದ್ದ ಪೂನಂ ಹಠಾತ್ ಸಾವು ಎಲ್ಲರನ್ನೂ ಬೆಚ್ಚಿ ಬೀಳಿಸುವಂತೆ ಮಾಡಿದೆ.  

2 /7

Jiah khan: ರಾಮ್ ಗೋಪಾಲ್ ವರ್ಮಾ ಅವರ ʼತಿಶಿತ್ʼ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಜನಪ್ರಿಯತೆ ಗಳಿಸಿದ ಜಿಯಾ, ನಂತರ ಖಿನ್ನತೆಗೆ ಒಳಗಾಗಿ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು.  

3 /7

Aarthi agarwal: ನಾಯಕಿ ಆರತಿ ಅಗರ್ವಾಲ್ ಕೂಡ 2014 ರಲ್ಲಿ 31 ವರ್ಷದ ಅತ್ಯಂತ ಕಿರಿಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ತೂಕ ಹೆಚ್ಚಳದ ನಂತರ ಲಿಪೊ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಈ ವೇಳೆ ಅವರು ಸಾವನ್ನಪ್ಪಿದ್ದರು. ಕಾರ್ಡಿಯಾಕ್ ಅರೆಸ್ಟ್ ನಿಂದ ಸಾವನ್ನಪ್ಪಿದ್ದಾಗಿ ಅವರ ಆಪ್ತರು ತಿಳಿಸಿದ್ದಾರೆ.  

4 /7

Soundarya: ಸೌತ್ ಚಿತ್ರರಂಗವನ್ನು ಆಳಿದ ನಟಿ ಸೌಂದರ್ಯ ಅವರು 2004 ರಲ್ಲಿ ಬಿಜೆಪಿ ಪರವಾಗಿ ಚುನಾವಣಾ ಪ್ರಚಾರಕ್ಕಾಗಿ ಕಾರ್ಗೋ ಹೆಲಿಕಾಪ್ಟರ್ ತೆರಳುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ನಿಧನರಾದರು ಆಗ ಅವರಿಗೆ ಕೇವಲ 32 ವರ್ಷ ವಯಸ್ಸಾಗಿತ್ತು.  

5 /7

Silk smitha: ಐಟಂ ಸಾಂಗ್‌ಗಳ ಮೂಲಕ ಕನ್ನಡ, ತೆಲುಗು, ತಮಿಳು ಸೇರಿದಂತೆ ಭಾರತೀಯ ಚಿತ್ರರಂಗದ ನೆಚ್ಚಿನ ತಾರೆಯಾಗಿ ನಟಿ ಸಿಲ್ಕ್ ಸ್ಮಿತಾ ಗುರುತಿಸಿಕೊಂಡಿದ್ದರು. ಖಿನ್ನತೆಗೆ ಒಳಗಾಗಿ 36ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ.   

6 /7

Divya bharti: ದಿವ್ಯ ಭಾರತಿ 1993 ರಲ್ಲಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಸ್ಟಾರ್ ಹೀರೋಯಿನ್ ಮಿಂಚಿದರು. 19ನೇ ವಯಸ್ಸಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದರು. ಇಂದಿಗೂ ಅವರ ಸಾವಿಗೆ ನಿಖರ ಕಾರಣವಿಲ್ಲ. ಕನ್ನಡ, ತಮಿಳು, ತೆಲುಗು, ಸೇರಿದಂತೆ ಹಲವಾರು ಭಾಷೆಗಳ ಸಿನಿಮಾದಲ್ಲಿ ನಟಿಸಿ ಜನಪ್ರೀಯತೆ ಗಳಿಸಿದ್ದರು.  

7 /7

Mahanati savitri : ದಕ್ಷಿಣದ ಸಿನಿ ಪ್ರೇಕ್ಷಕರಿಂದ ಮಹಾನಟಿ ಎಂಬ ಕೀರ್ತಿಗೆ ಪಾತ್ರರಾಗಿದ್ದ ಸಾವಿತ್ರಿ ಅವರು ತಮ್ಮ 45ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು. 1935 ರಲ್ಲಿ ಜನಿಸಿದ ಸಾವಿತ್ರಿ 1981 ರಲ್ಲಿ ನಿಧನರಾದರು. ಸತ್ತು ನಾಲ್ಕು ದಶಕಗಳು ಕಳೆದರೂ ಇಂದಿಗೂ ಅವರು ಜನಮನದಲ್ಲಿದ್ದಾರೆ.