Pitru Paksha Mahalaya Amavasya: ಹಿಂದೂ ಧರ್ಮದಲ್ಲಿ ಪಿತೃ ಪಕ್ಷದಲ್ಲಿ ಬರುವ ಅಮಾವಾಸ್ಯೆಗೆ ತುಂಬಾ ಮಹತ್ವವಿದೆ. ಪೂರ್ವಜರ ಮರಣದ ಸಮಯ ತಿಳಿದಿಲ್ಲದವರು ಈ ದಿನ ಅವರ ಶ್ರಾದ್ಧವನ್ನು ಮಾಡಬಹುದು. ಹಾಗಾಗಿ, ಇದನ್ನು ಸರ್ವಾಪಿತೃ ಅಮಾವಾಸ್ಯೆ ಎಂತಲೂ ಕರೆಯಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಪಿತೃ ಪಕ್ಷದಲ್ಲಿ ಬರುವ ಅಮವಾಸ್ಯೆ ದಿನಾಂಕವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಇದನ್ನು ಸರ್ವ ಪಿತೃ ಅಮಾವಾಸ್ಯೆ ಎಂದೂ ಕರೆಯುತ್ತಾರೆ.
ಇಂದು ಮಹಾಲಯ ಅಮಾವಾಸ್ಯೆ, ಶನಿವಾರದಂದು ಅಮಾವಾಸ್ಯೆ ತಿಥಿ ಬಂದರೆ ಅದನ್ನು ಶನಿಶ್ಚರಿ ಅಮಾವಾಸ್ಯೆ ಎಂತಲೂ ಕರೆಯುತ್ತಾರೆ.
ಪಿತೃ ಪಕ್ಷದಲ್ಲಿ ಬರುವ ಈ ಅಮಾವಾಸ್ಯೆಯ ದಿನ ತರ್ಪಣ ಬಿಡುವುದು, ಪಿಂಡದಾನ ಮಾಡುವುದರಿಂದ ಪಿತೃ ದೋಷ ನಿವಾರಣೆಯಾಗುತ್ತದೆ.
2023ರ ಸರ್ವ ಪಿತೃ ಅಮಾವಾಸ್ಯೆಯು 13 ಅಕ್ಟೋಬರ್ ರಂದು ರಾತ್ರಿ 09:50 ಕ್ಕೆ ಪ್ರಾರಂಭವಾಗಿ ಮರುದಿನ ಅಕ್ಟೋಬರ್ 14 ರಂದು ರಾತ್ರಿ 11:24 ಕ್ಕೆ ಕೊನೆಗೊಳ್ಳುತ್ತದೆ. ಈ ದಿನದಂದು ಶುಭ ಮುಹೂರ್ತದಲ್ಲಿ ಪೂಜಿಸುವುದರಿಂದ ಪೂರ್ವಜರ ಹಾಗೂ ಶನಿದೇವರ ಆಶೀರ್ವಾದ ಪಡೆಯಬಹುದು ಎಂದು ನಂಬಲಾಗಿದೆ.
ಶನಿ ಅಮಾವಾಸ್ಯೆಯ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡಿ. ತಾಮ್ರದ ಪಾತ್ರೆಯಲ್ಲಿ ಪವಿತ್ರ ನೀರನ್ನು ತೆಗೆದುಕೊಂಡು ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ.
ಇಂದು ಮಹಾಲಯ ಅಮಾವಾಸ್ಯೆ, ಶನಿ ಅಮಾವಾಸ್ಯೆ ದಿನ ನಿಮ್ಮ ಪಿತೃಗಳಿಗೆ ತರ್ಪಣ ನೀಡಿ, ಪಿಂಡ ದಾನ ಮಾಡಿ.
ಶನಿ ಸಾಡೇ ಸಾತಿ, ಶನಿ ಧೈಯಾ ಪ್ರಭಾವವನ್ನು ಎದುರಿಸುತ್ತಿರುವವರು ಶನಿಶ್ಚರಿ ಅಮಾವಾಸ್ಯೆಯ ಈ ದಿನ ತಪ್ಪದೇ ಅರಳಿ ಮರಕ್ಕೆ ಪೂಜೆ ಮಾಡಿ.
ಶನಿ ಅಮಾವಾಸ್ಯೆಯ ದಿನದಂದು ಶನಿ ದೇವರಿಗೆ ಸಾಸಿವೆ ಎಣ್ಣೆ ಮತ್ತು ಕಪ್ಪು ಎಳ್ಳನ್ನು ಅರ್ಪಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.
ಸರ್ವಪಿತೃ ಅಮಾವಾಸ್ಯೆಯ ಈ ದಿನ ಶನಿಶ್ಚರಿ ಅಮಾವಾಸ್ಯೆಯೂ ಹೌದು. ಇಂದು ಶನಿ ಚಾಲೀಸವನ್ನು ಪಠಿಸುವುದರಿಂದ ಶನಿದೇವನ ಆಶೀರ್ವಾದ ಪಡೆಯಬಹುದು.
ಇಂದು ಅಮಾವಾಸ್ಯೆಯ ದಿನ ಪಿತೃಗಳಿಗೆ ಪಿಂಡದಾನ ಮಾಡಿ ಉಪವಾಸ ಆಚರಿಸಿ, ಬಡವರು ಮತ್ತು ನಿರ್ಗತಿಕರಿಗೆ ನಿಮ್ಮ ಕೈಲಾದದ್ದನ್ನು ದಾನ ಮಾಡಿ. ಈ ರೀತಿ ಮಾಡುವುದರಿಂದ ನಿಮ್ಮ ಪೂರ್ವಜರು ಸಂತುಷ್ಟಗೊಳ್ಳುವುದರ ಜೊತೆಗೆ, ಶನಿ ಮಹಾತ್ಮನೂ ಸಂತೋಷಗೊಳ್ಳುತ್ತಾನೆ ಎಂದು ನಂಬಲಾಗಿದೆ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.