One Nation, One Mobility Card ಬಗ್ಗೆ ನಿಮಗೆಷ್ಟು ಗೊತ್ತು?

National Common Mobility Card: ದೇಶದಲ್ಲಿ, ಒನ್ ನೇಷನ್, ಒನ್ ಮೊಬಿಲಿಟಿ ಕಾರ್ಡ್ ಅಥವಾ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಬಳಕೆ ಪ್ರಾರಂಭವಾಗಿದೆ. ಈ ಏಕೈಕ ಕಾರ್ಡ್‌ನಿಂದ ಜನರು ಅನೇಕ ಹಲವು ಸೌಲಭ್ಯಗಳನ್ನು ಪಡೆಯಲಿದ್ದಾರೆ. ಇದು ಗ್ರಾಹಕರಿಗೆ ಅವರ ವ್ಯಾಲೆಟ್ ನಲ್ಲಿ ಹಲವಾರು ಕಾರ್ಡ್ ಗಳನ್ನು ನಿರ್ವಹಿಸುವ ತಾಪತ್ರಯದಿಂದ  ಸ್ವಾತಂತ್ರ್ಯ ನೀಡಲಿದೆ.

ನವದೆಹಲಿ: National Common Mobility Card: ಇನ್ಮುಂದೆ ನಿಮಗೆ ದೆಹಲಿ ಮೆಟ್ರೋ ಸೇವೆಯ ಏರ್ಪೋರ್ಟ್ ಲೈನ್ ನಲ್ಲಿ ಪ್ರಯಾಣಿಸಲು ಮೆಟ್ರೋ ಕಾರ್ಡ್ ಅಥವಾ ಟೋಕನ್ ಖರೀದಿಸುವ ಅವಶ್ಯಕತೆ ಇಲ್ಲ. ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC) ಬಳಸಿಯೂ ಕೂಡ ನೀವು ಈ ಲೈನ್ ಮೇಲೆ ಪ್ರಯಾಣಿಸಬಹುದು. ವಾಸ್ತವಿಕವಾಗಿ ಇದೊಂದು ಸಾಮಾನ್ಯ ಕಾರ್ಡ್ ಅಲ್ಲವೇ ಅಲ್ಲ. ಏಕೆಂದರೆ ಇದನ್ನು ನೀವು ನಿಮ್ಮ ವ್ಯಾಲೆಟ್ ನಲ್ಲಿರಿಸಿದರೆ, ನಿಮಗೆ ಬೇರೆ ಡೆಬಿಟ್ (Debit Card) ಅಥವಾ ಕ್ರೆಡಿಟ್ ಕಾರ್ಡ್ ನಿಮ್ಮ ವ್ಯಾಲೆಟ್ ನಲ್ಲಿ ನಿರ್ವಹಿಸುವ ಅಥವಾ ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ.

 

ಇದನ್ನು ಓದಿ-World Bank ಹೆಸರಿನಲ್ಲಿ ಜಾರಿಯಾಗುತ್ತಿವೆ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್! ಬ್ಯಾಂಕ್ ಹೇಳಿದ್ದೇನು ?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಬಹುತೇಕ ಖಾಸಗಿ ಮತ್ತು ಸರ್ಕಾರಿ ಬ್ಯಾಂಕುಗಳು ಈಗ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ವೈಶಿಷ್ಟ್ಯವನ್ನು ಹೊಂದಿರುವ ಡೆಬಿಟ್-ಕ್ರೆಡಿಟ್ ಕಾರ್ಡ್‌ಗಳನ್ನು ಗ್ರಾಹಕರಿಗೆ ನೀಡುತ್ತಿವೆ. ರಾಷ್ಟ್ರೀಯ ಸಾಮಾನ್ಯ ಚಲನಶೀಲತೆ ಕಾರ್ಡ್(National Common Mobility Card) ಪಡೆಯಲು, ಗ್ರಾಹಕರು ತಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಬೇಕು. ಪ್ರಸ್ತುತ ಇವು 25 ಬ್ಯಾಂಕುಗಳಲ್ಲಿ ಲಭ್ಯವಿರುವುದರ ಜೊತೆಗೆ    ಪೇಟಿಎಂ ಪೇಮೆಂಟ್ಸ್ ಬ್ಯಾಂಕಿನಲ್ಲಿಯೂ ಕೂಡ ಲಭ್ಯವಾಗಲಿವೆ. ಈ ಕಾರ್ಡ್‌ನ ಒಂದು ವೈಶಿಷ್ಟ್ಯವೆಂದರೆ ಎಟಿಎಂನಲ್ಲಿ ಬಳಕೆಯ ಮೇಲೆ ಶೇ. 5 ರಷ್ಟು ಕ್ಯಾಶ್‌ಬ್ಯಾಕ್ ಪಡೆಯುವುದರ ಜೊತೆಗೆ, ವಿದೇಶ ಪ್ರವಾಸದ ಸಮಯದಲ್ಲಿ ವ್ಯಾಪಾರಿ ಮಳಿಗೆಗಳಲ್ಲಿ ಬಳಸಿ ನೀವು ಶೇ. 10 ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು

2 /6

ಕಳೆದ 18 ತಿಂಗಳುಗಳಲ್ಲಿ ಎಸ್‌ಬಿಐ, ಯುಕೊ ಬ್ಯಾಂಕ್, ಕೆನರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕುಗಳಿಂದ ಜಾರಿಮಾಡಲಾಗಿರುವ ರುಪೇ ಡೆಬಿಟ್ ಕಾರ್ಡ್ ಧಾರಕರಿಗೆ  ಎನ್‌ಸಿಎಂಸಿ  ಸ್ವೈಪ್ ಮೂಲಕ ಮೆಟ್ರೊದಲ್ಲಿ ಪ್ರಯಾಣಿಸಲು ಅವಕಾಶ ನೀಡುತ್ತದೆ. ಈ ಬಗ್ಗೆ ಹೇಳಿಕೆ ನೀಡಿರುವ DMRC ವಕ್ತಾರರು- ಈ ಸೌಲಭ್ಯವು 2022 ರ ವೇಳೆಗೆ ಇಡೀ ದೆಹಲಿ ಮೆಟ್ರೋ ನೆಟ್‌ವರ್ಕ್‌ನಲ್ಲಿ ಪ್ರಾರಂಭವಾಗಲಿದೆ ಎಂದಿದ್ದಾರೆ.

3 /6

ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಒಂದು ಇಂಟರ್ ಆಪರೇಟಿವ್ ಕಾರ್ಡ್ ಆಗಿದ್ದು, ಇದನ್ನು ಮಾರ್ಚ್ 4,2019 ರಲ್ಲಿ ಮೊದಲಬಾರಿಗೆ ಬಿಡುಗಡೆ ಮಾಡಲಾಗಿದೆ. ಇದನ್ನು ಟ್ರಾನ್ಸ್ಪೋರ್ಟ್ ಕಾರ್ಡ್ ರೂಪದಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ಈ ಕಾರ್ಡ್ ಅನ್ನು ಬಳಸಿ ಯಾತ್ರಿಗಳು ಯಾವುದೇ ಮಾಧ್ಯಮದ ಮೂಲಕ ಪ್ರಯಾಣ ಬೆಳೆಸಬಹುದಾದ ರೀತಿಯಲ್ಲಿ ಇದನ್ನು ಸಿದ್ಧಪಡಿಸಲಾಗಿದೆ. ಈ ಕಾರ್ಡ್ ಅನ್ನು ಬಳಸಿ ನೀವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಪಾವತಿ ಕೂಡ ಮಾಡಬಹುದು.

4 /6

ಕೇಂದ್ರ ನಗರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ರಾಷ್ಟ್ರೀಯ ಸಾಮಾನ್ಯ ಚಲನಶೀಲತೆ ಕಾರ್ಡ್ (NCMC) ಯನ್ನು'One Nation, One Card' ರೂಪದಲ್ಲಿ ಅಭಿವೃದ್ಧಿಪಡಿಸಿದೆ. ಇನ್ನೂ ಕೆಲವೇ ದಿನಗಳಲ್ಲಿ ನೀವು ನಿಮ್ಮ ರೂಪೇ ಕಾರ್ಡ್ ಗಳನ್ನು ನಿಮ್ಮ ವ್ಯಾಲೆಟ್ ನಲ್ಲಿ ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಏಕೆಂದರೆ ಎನ್‌ಎಫ್‌ಸಿ ಎನೇಬಲ್ಡ್ (ನಿಯರ್ ಫೀಲ್ಡ್ ಕಮ್ಯುನಿಕೇಷನ್) ಸ್ಮಾರ್ಟ್‌ಫೋನ್‌ನಲ್ಲಿ ನಿಮ್ಮ ರೂಪೆ ಕಾರ್ಡ್ ಆಪ್ ಬಳಸುವ ಮೂಲಕ ನೀವು ಪ್ರಯಾಣಿಸಬಹುದು.ಅಂದರೆ, ಇನ್ಮುಂದೆ ನಿಮ್ಮ ಸ್ಮಾರ್ಟ್ ಫೋನ್ ನಿಮ್ಮ ಪಾಲಿಗೆ ಯಾತ್ರೆಯ ಟಿಕೆಟ್ ಆಗಲಿದೆ.

5 /6

ಈ ಕುರಿತು ಹೇಳಿಕೆ ನೀಡಿರುವ ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ (NPCI), ಡಿಸೆಂಬರ್ 28, 2020 ರಿಂದ ನವದೆಹಲಿ-ದ್ವಾರಕಾ ಸೆಕ್ಟರ್ 21 ರೂಟ್ ನಲ್ಲಿ ಈ ಕಾರ್ಡ್ ಬಳಕೆಗೆ DMRC ಅನುಮತಿ ನೀಡಿದೆ ಎಂದು ತಿಳಿಸಿದೆ. 23 ಕಿ.ಮೀ ಉದ್ದದ ಏರ್ಪೋರ್ಟ್ ಎಕ್ಸ್ಪ್ರೆಸ್ ಲೈನ್ ಮೇಲೆಯೂ ಕೂಡ ನ್ಯಾಷನಲ್ ಕಾಮನ್ ಮೊಬಿಲಿಟಿ ಸ್ವೀಕರಿಸಲಾಗುವುದು. ಈ ಸೇವೆಯ ಆರಂಭದಿಂದ ಸುಮಾರು 1 ಕೋಟಿಗೂ ಅಧಿಕ ಕಾಂಟ್ಯಾಕ್ಟ್ ಲೆಸ್ ರೂಪೇ ಕಾರ್ಡ್ ಹೊಂದಿರುವ ಗ್ರಾಹಕರು ನೇರವಾಗಿ ಮೆಟ್ರೋ ರೈಲಿನಲ್ಲಿ ಪ್ರಯಾಣ ಬೆಳೆಸಬಹುದು. ಅವರು ಟೋಕನ್ ಅಥವಾ ಟಿಕೆಟ್ ಖರೀದಿಸುವ ಅವಶ್ಯಕತೆ ಇಲ್ಲ. ಅವರ ರೂಪೇ ಡೆಬಿಟ್ ಕಾರ್ಡ್ ಅವರ ಪಾಲಿಗೆ ಯಾತ್ರೆಯ ಟಿಕೆಟ್ ಆಗಿ ಕಾರ್ಯನಿರ್ವಹಿಸಲಿದೆ.

6 /6

ಈ ಮೊಬಿಲಿಟಿ ಕಾರ್ಡ್ ಯಾವುದೇ ಒಂದು ಬ್ಯಾಂಕಿನ ಡೆಬಿಟ್ ಕಾರ್ಡ್ ರೂಪದಲ್ಲಿಯೂ ಕೂಡ ಕಾರ್ಯನಿರ್ವಹಿಸಲಿದೆ. ಅಂದರೆ, ಈ ಕಾರ್ಡ್ ಅನ್ನು ಬಳಸಿ ನೀವು ATM ಗಳಲ್ಲಿ ಹಣ ವಿಥ್ ಡ್ರಾ ಕೂಡ ಮಾಡಬಹುದು. ಈ ಕಾರ್ಡ್ ಬಳಸಿ ನೀವು ಶಾಪಿಂಗ್ ಕೂಡ ಮಾಡಬಹುದು.