ಯಾವುದೇ ವಸ್ತುವನ್ನು ಇನ್ನೊಬ್ಬರಿಗೆ ನೀಡುವ ಮೊದಲು ಕೆಲವು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ.ಇಲ್ಲವಾದರೆ ಇನ್ನೊಬ್ಬರಿಗೆ ಒಳ್ಳೆಯದು ಮಾಡಲು ಹೋಗಿ ನೀವು ನಷ್ಟವನ್ನು ಅನುಭವಿಸಬೇಕಾಗಬಹುದು.
ಬೆಂಗಳೂರು : ಹಿಂದೂ ಧರ್ಮದಲ್ಲಿ ದಾನವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ.ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.ದಾನ ಮಾಡುವುದರಿಂದ ಹಿಂದೆ ಮಾಡಿದ ಪಾಪಗಳೂ ನಾಶವಾಗುತ್ತವೆ ಎಂದು ಹೇಳಲಾಗುತ್ತದೆ. ಆದರೆ ಕೆಲವು ವಸ್ತುಗಳನ್ನು ದಾನ ಮಾಡುವುದು ನಿಮ್ಮ ಜೀವನದ ಸಂತೋಷ ಮತ್ತು ಶಾಂತಿಯನ್ನು ಕಸಿದುಕೊಳ್ಳಬಹುದು.ಬಡತನಕ್ಕೆ ಕಾರಣವಾಗಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಹಿಂದೂ ಧರ್ಮದಲ್ಲಿ,ಪೊರಕೆಯು ಸಂಪತ್ತಿನ ಅಧಿ ದೇವತೆಯಾದ ಲಕ್ಷ್ಮಿ ದೇವಿಗೆ ಸಂಬಂಧಿಸಿದೆ.ನಿಮ್ಮ ಮನೆ ಪೊರಕೆಯನ್ನು ಯಾವುದೇ ಕಾರಣಕ್ಕೂ ಇನ್ನೊಬ್ಬರಿಗೆ ನೀಡಬೇಡಿ.ಬೇರೆಯವರಿಗೆ ಹೊಸ ಪೊರಕೆ ಖರೀದಿಸಿ ಕೊಡುವುದು ಕೂಡಾ ಶ್ರೇಯಸ್ಕರ ಅಲ್ಲ.
ಸ್ಟೀಲ್ ಪಾತ್ರೆಗಳನ್ನು ಇನ್ನೊಬ್ಬರಿಗೆ ನೀಡಬಾರದು. ದಾನವಾಗಿ,ಉಡುಗೊರೆಯಾಗಿ ಅಥವಾ ಹಳೆಯದು ಎನ್ನುವ ಕಾರಣಕ್ಕೆ ಹೀಗೆ ಯಾವುದೇ ಕಾರಣಕ್ಕೂ ಸ್ಟೀಲ್ ಪಾತ್ರೆಗಳನ್ನು ಬೇರೆಯವರಿಗೆ ನೀಡಬಾರದು.ಮನೆಯ ಸಂತೋಷ, ಶಾಂತಿ ಮತ್ತು ಸಮೃದ್ಧಿ ದೂರವಾಗುತ್ತದೆ.
ಚಾಕು,ಕತ್ತರಿ ಮುಂತಾದ ಹರಿತವಾದ ವಸ್ತುಗಳನ್ನು ಕೂಡಾ ದಾನ ಮಾಡಬಾರದು. ಈ ವಸ್ತುಗಳನ್ನು ದಾನ ಮಾಡುವುದರಿಂದ ಸಂಕಟ ಹೆಚ್ಚುತ್ತದೆ.ಅಲ್ಲದೆ ನೀವು ಈ ವಸ್ತುವನ್ನು ಯಾರಿಗೆ ನೀಡುತಿರೋ ಅವರೊಂದಿಗಿನ ಸಂಬಂಧದಲ್ಲಿ ಬಿರುಕು ಮೂಡುತ್ತದೆ.
ಬಳಸಿದ ಎಣ್ಣೆಯನ್ನು ಯಾವತೂ ಇನ್ನೊಬ್ಬರಿಗೆ ನೀಡಬೇಡಿ.ಬಳಸಿದ ಎಣ್ಣೆಯನ್ನು ಬೇರೆಯವರಿಗೆ ನೀಡಿದರೆ ಶನಿದೇವನ ಅಸಮಾಧಾನಕ್ಕೆ ಕಾರಣವಾಗಬಹುದು.ಶನಿ ದೇವನ ಅವಕೃಪೆಗೆ ಕಾರಣವಾದರೆ ಮತ್ತೆ ಬರೀ ಕಷ್ಟಗಳನ್ನೇ ನೋಡಬೇಕಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ, ZEE NEWS ಅದನ್ನು ಖಚಿತಪಡಿಸುವುದಿಲ್ಲ.