Naivedya: ಇಷ್ಟದ ನೈವೇದ್ಯದಿಂದ ಪ್ರಸನ್ನರಾಗುತ್ತಾರೆ ದೇವಿ-ದೇವತೆಗೆಳು, ಯಾವ ದೇವರಿಗೆ ಯಾವ ನೈವೇದ್ಯ ಅರ್ಪಿಸಬೇಕು?

Naivedya: ದೇವರ ಆರಾಧನೆಯ ಮೇಲೆ ನೈವೇದ್ಯ ಅರ್ಪಿಸದೆ ಹೋದಲ್ಲಿ ಪೂಜೆ ಅಪೂರ್ಣವಾಗುತ್ತದೆ. ನೈವೇದ್ಯ  ಸಣ್ಣ ಬೆಲ್ಲದ ತುಣುಕೆ ಆಗಿರಲಿ ಅಥವಾ 56 ಬಗೆಯ ಖಾದ್ಯಗಳ ಭೋಗವೇ ಆಗಿರಲಿ, ಭಕ್ತಿಯಿಂದ ಅರ್ಪಿಸುವ ಸಣ್ಣ ವಿಷಯವನ್ನು ಕೂಡ ದೇವರು ಸ್ವೀಕರಿಸುತ್ತಾನೆ ಎಂದು ಹೇಳಲಾಗುತ್ತದೆ.

Naivedya: ದೇವರ ಆರಾಧನೆಯ ಮೇಲೆ ನೈವೇದ್ಯ ಅರ್ಪಿಸದೆ ಹೋದಲ್ಲಿ ಪೂಜೆ ಅಪೂರ್ಣವಾಗುತ್ತದೆ. ನೈವೇದ್ಯ  ಸಣ್ಣ ಬೆಲ್ಲದ ತುಣುಕೆ ಆಗಿರಲಿ ಅಥವಾ 56 ಬಗೆಯ ಖಾದ್ಯಗಳ ಭೋಗವೇ ಆಗಿರಲಿ, ಭಕ್ತಿಯಿಂದ ಅರ್ಪಿಸುವ ಸಣ್ಣ ವಿಷಯವನ್ನು ಕೂಡ ದೇವರು ಸ್ವೀಕರಿಸುತ್ತಾನೆ ಎಂದು ಹೇಳಲಾಗುತ್ತದೆ. ಆದರೆ ದೇವರ ಮೆಚ್ಚಿನ ಭೋಗವನ್ನು ದೇವರಿಗೆ ಅರ್ಪಿಸುವುದು ಒಳ್ಳೆಯದು. ಧರ್ಮ ಪುರಾಣಗಳಲ್ಲಿ, ಎಲ್ಲಾ ದೇವ-ದೇವತೆಗಳ  ಪ್ರೀತಿಯ ನೈವೇದ್ಯದ ಕುರಿತು ಉಲ್ಲೇಖಿಸಲಾಗಿದೆ. ಯಾವ ದೇವರನ್ನು ಯಾವ ನೈವೇದ್ಯ ಅರ್ಪಿಸಿ (Offer Naivedya) ಪ್ರಸನ್ನಗೊಳಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

 

(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ) 

 

ಇದನ್ನೂ ಓದಿ-Home Vastu: ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆಯೇ? ಈ 4 ಚಿಹ್ನೆಗಳೊಂದಿಗೆ ಸುಲಭವಾಗಿ ಕಂಡುಹಿಡಿಯಿರಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

1 /6

1. ಶ್ರೀಗಣೇಶ (Lord Ganesha)- ಶ್ರೀಗಣೇಶನಿಗೆ ಮೋದಕ ಹಾಗೂ ಲಾಡು ತುಂಬಾ ಇಷ್ಟ. ಗಣೇಶನಿಗೆ ಮೋತಿಚೂರ್ ಅಂದರೆ ಬುಂದಿ ಅಥವಾ ಬೇಸನ್ ಲಡ್ಡು ಅರ್ಪಿಸಿ. ನೀವು ಹಲವು ರೀತಿಯ ಮೋದಕಗಳನ್ನೂ ಕೂಡ ಅರ್ಪಿಸಬಹುದು.  

2 /6

2. ದೇವಾದಿದೇವ ಮಹಾದೇವ (Lord Shiva) - ಶಿವನಿಗೆ ಪಂಚಾಮೃತ ತುಂಬಾ ಇಷ್ಟ. ಇದನ್ನು ಹಾಲು, ಮೊಸರು, ತುಪ್ಪ, ಸಕ್ಕರೆ ಹಾಗೂ ಜೇನುತುಪ್ಪ ಬೆರೆಸಿ ತಯಾರಿಸಲಾಗುತ್ತದೆ. ಇದಲ್ಲದೆ ಶ್ವನಿಗೆ ಭಾಂಗ್ ಕೂಡ ಇಷ್ಟ ಎನ್ನಲಾಗುತ್ತದೆ.

3 /6

3. ಶ್ರೀವಿಷ್ಣು (Lord Vishnu) - ಶ್ರೀಹರಿ ಎಂದೇ ಕರೆಯಲಾಗುವ ವಿಷ್ಣು ದೇವರಿಗೆ ಪಾಯಸ ಅಥವಾ ರವೆಯಿಂದ ತಯಾರಿಸಲಾಗುವ ಶಿರಾ ಅರ್ಪಿಸಿ. ವಿಷ್ಣುವಿಗೆ ಅರ್ಪಿಸಿದ ನೈವೇದ್ಯವನ್ನು ಪ್ರಸಾದದ ರೂಪದಲ್ಲಿ ವಿತರಣೆ ಮಾಡುವಾಗ ಅದರಲ್ಲಿ ತುಳಸಿ ದಳ ಹಾಕುವುದನ್ನು ಮರೆಯಬೇಡಿ. ಈ ರೀತಿ ಮಾಡುವುದರಿಂದ ದೇವರು ನಿಮ್ಮ ಎಲ್ಲಾ ಮನೋಕಾಮನೆಗಳನ್ನು ಈಡೇರಿಸುತ್ತಾನೆ.

4 /6

4. ದುರ್ಗಾ ದೇವಿ (Goddess Durga)  - ಶಕ್ತಿಯ ಪ್ರತೀಕವಾಗಿರುವ ದೇವಿ ದುರ್ಗೆಗೆ ಬಿಳಿ ಬಣ್ಣದ ಮಿಠಾಯಿಯ ನೈವೇದ್ಯ ತೋರಿಸಿ. ಸಾಮಾನ್ಯವಾಗಿ ಹಾಲಿನಿಂದ ತಯಾರಿಸಲಾಗುವ ನೈವೇದ್ಯ ದೇವಿ ದುರ್ಗೆಗೆ ಹೆಚ್ಚು ಇಷ್ಟ. ಉದಾಹರಣೆಗೆ ಖೀರ್, ತೆಂಗಿನ ತುರಿಯ ಲಡ್ಡು, ಬರ್ಫಿ, ಮಾಲ್ಪುವಾ, ರವೆಯಿಂದ ತಯಾರಿಸಲಾಗುವ ಶೀರಾ ಇತ್ಯಾದಿ

5 /6

5. ದೇವಿ ಸರಸ್ವತಿ (Goddess Saraswati) - ಜ್ಞಾನ ದೇವತೆ ಸರಸ್ವತಿಗೂ ಕೂಡ ನೈವೆದ್ಯದಲ್ಲಿ ಬಿಳಿ ಬಣ್ಣದ ಖಾದ್ಯ ಪದಾರ್ಥವನ್ನು ಅರ್ಪಿಸಿ. ಪಂಚಾಮೃತ, ಹಾಲು, ಮೊಸರು, ಬೆಣ್ಣೆ, ಬಿಳಿ ಎಳ್ಳಿನ ಲಡ್ಡು, ವಸಂತ ಪಂಚಮಿಯ ಪೂಜೆಯ ವೇಳೆ ಸರಸ್ವತಿಗೆ ಧಾನ್ಯದ ನೈವೇದ್ಯ ಆರೋಪಿಸಲಾಗುತದೆ.

6 /6

6. ಶ್ರೀ ಆಂಜನೇಯ (Lord Hanuman) -ಆಂಜನೇಯನ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಚೋಲಾ ಅರ್ಪಿಸುವುದು ತುಂಬಾ ಮುಖ್ಯ. ನೈವೇದ್ಯದಲ್ಲಿ ಆತನಿಗೆ ಬೂಂದಿ ಅಥವಾ ಮೊತಿಚೂರ್ ಲಡ್ಡು ಅರ್ಪಿಸಿ. ಇದಲ್ಲದೆ ಹಲ್ವಾ, ಪಂಚಖಾದ್ಯಗಳ ಮೇವಾ, ಬೆಲ್ಲದಿಂದ ತಯಾರಿಸಲಾಗುವ ಲಡ್ಡು, ಸ್ವೀಟ್ ಪಾನ್ ಅರ್ಪಿಸುವುದು ಉತ್ತಮ.