ಲಕ್ಷದ್ವೀಪದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕೇ? ಹಾಗಿದ್ದರೆ ಈಗಲೇ ಬುಕ್ ಮಾಡಿ IRCTC ಕ್ರೂಸ್ ಪ್ಯಾಕೇಜ್

IRCTC ಯ ಈ ಐಷಾರಾಮಿ ಕ್ರೂಸ್ ಪ್ರವಾಸವು ಅಕ್ಟೋಬರ್ 19 ರಿಂದ ಆರಂಭವಾಗುತ್ತದೆ.

ನವದೆಹಲಿ : IRCTC Lakshadweep Leisure Cruise Tour: ಐಆರ್‌ಸಿಟಿಸಿ ಭಾರತದ ಪ್ರಥಮ ಸ್ವದೇಶಿ ಕ್ರೂಸರ್ ಲೈನರ್ ಆರಂಭಿಸುವ ಬಗ್ಗೆ ಇತ್ತೀಚೆಗಷ್ಟೇ ಪ್ರಕಟಿಸಿತ್ತು. ಇದಕ್ಕಾಗಿ ಖಾಸಗಿ ಕಂಪನಿಯೊಂದರ ಜೊತೆ, ಒಪ್ಪಂದವನ್ನು ಕೂಡಾ ಮಾಡಿಕೊಂಡಿದೆ. ಇದರೊಂದಿಗೆ ಲಕ್ಷದ್ವೀಪದ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ನೀಡುತ್ತಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

IRCTC ಯ ಈ ಐಷಾರಾಮಿ ಕ್ರೂಸ್ ಪ್ರವಾಸವು ಅಕ್ಟೋಬರ್ 19 ರಿಂದ ಆರಂಭವಾಗುತ್ತದೆ. 4 ರಾತ್ರಿಗಳು ಮತ್ತು 5 ದಿನಗಳ ಈ ಪ್ರವಾಸದ ಆರಂಭಿಕ ಬೆಲೆಯನ್ನು 46,950 ರೂ. ಎಂದು ನಿಗದಿ ಪಡಿಸಲಾಗಿದೆ. ಇದಕ್ಕಾಗಿ, ಪ್ರವಾಸಿಗರು ಕೋಲ್ಕತ್ತಾದಿಂದ ವಿಮಾನ ಏರಬೇಕಾಗುತ್ತದೆ. ವಿಮಾನದಲ್ಲಿ ಕೊಚ್ಚಿನ್‌ಗೆ ತಲುಪಿಸಲಾಗುತ್ತದೆ. ಅಲ್ಲಿಂದಲೇ ಪ್ರಯಾಣ ಆರಂಭವಾಗುತ್ತದೆ. ಹಿಂದಿರುಗಲು, ಮುಂಬೈನಿಂದ ಕೋಲ್ಕತ್ತಾಗೆ ವಿಮಾನ ಸೌಲಭ್ಯವಿರುತ್ತದೆ.   

2 /5

ಐಆರ್‌ಸಿಟಿಸಿಯ ಲಕ್ಷದ್ವೀಪ ವಿಹಾರ ಕ್ರೂಸ್ ಟೂರ್ ಪ್ಯಾಕೇಜ್‌ನಲ್ಲಿ, ಕೊಚ್ಚಿಯ ಡಚ್ ಅರಮನೆ, ಕೊಚ್ಚಿನ್ ಕೋಟೆ, ಕೇರಳದ ಬೀಚ್, ಲಕ್ಷದ್ವೀಪದ ಕದ್ಮತ್ ದ್ವೀಪ, ಮುಂಬೈನ ಇಂಡಿಯಾ ಗೇಟ್ ಮತ್ತು ಸಿದ್ಧಿ ವಿನಾಯಕ ದೇವಸ್ಥಾನ ಮುಂತಾದ ಸ್ಥಳಗಳಿಗೆ ಭೇಟಿ ನೀಡಲು ಅವಕಾಶ ಸಿಗುತ್ತದೆ. ಈ ಪ್ರವಾಸದ ಸಮಯದಲ್ಲಿ, ಪ್ರವಾಸಿಗರು ಲಕ್ಷದ್ವೀಪದ ಸಮುದ್ರಗಳನ್ನು ಆನಂದಿಸಬಹುದು. ಇದರ ಹೊರತಾಗಿ, ಕಾರ್ಡೆಲಿಯಾ ಕ್ರೂಸ್‌ನಲ್ಲಿ ಎಲ್ಲಾ ಮನರಂಜನೆಯ ಸಾಧನಗಳನ್ನು ಆನಂದಿಸಬಹುದು.  

3 /5

ಈ IRCTC ಪ್ಯಾಕೇಜ್‌ನಲ್ಲಿ, ಕೋಲ್ಕತ್ತಾದಿಂದ ಕೊಚ್ಚಿಗೆ ಮತ್ತು ಮುಂಬೈನಿಂದ ಕೋಲ್ಕತ್ತಾಗೆ ವಿಮಾನ ಪ್ರಯಾಣವಿರುತ್ತದೆ. ಇದಲ್ಲದೇ, ಕೊಚ್ಚಿಯಲ್ಲಿ ಒಂದು ರಾತ್ರಿ ಹೋಟೆಲ್ ವಾಸ್ತವ್ಯ ಮಾಡಬೇಕಾಗುತ್ತದೆ. ಪ್ರಯಾಣದ ಸಮಯದಲ್ಲಿ ನಿಯಮಿತ ಆಹಾರ, ಬೋರ್ಡ್ ಎಂಟರ್ಟೈನ್ಮೆಂಟ್, ಲೈವ್ ಮ್ಯೂಸಿಕ್, ಡಿಜೆ ಪಾರ್ಟಿ, ಬಾಲಿವುಡ್ ಶೋ ಇತ್ಯಾದಿ ಸೌಲಭ್ಯಗಳು ಲಭ್ಯವಿರುತ್ತವೆ.   

4 /5

IRCTC ಯ ಈ ಪ್ಯಾಕೇಜಿನಲ್ಲಿ, ನೀವು ಲಕ್ಷದ್ವೀಪ ದ್ವೀಪಕ್ಕೆ ಭೇಟಿ ನೀಡಲು ಪ್ರತ್ಯೇಕವಾಗಿ ಖರ್ಚು ಮಾಡಬೇಕಾಗುತ್ತದೆ. ಇದಲ್ಲದೇ, ಕಾರ್ಡೆಲಿಯಾ ಕ್ರೂಸ್‌ನಲ್ಲಿ ನೀವು ಆಲ್ಕೋಹಾಲ್, ಪ್ರೀಮಿಯಂ ರೆಸ್ಟೋರೆಂಟ್‌ಗಳಲ್ಲಿ ಊಟ, ಆನ್‌ಬೋರ್ಡ್ ಶಾಪಿಂಗ್, ಸ್ಪಾ-ಸಲೂನ್ ಇತ್ಯಾದಿಗಳಿಗಾಗಿ ಸ್ವಂತವಾಗಿ ಖರ್ಚು ಮಾಡಬೇಕಾಗುತ್ತದೆ.

5 /5

IRCTC ಯ ಲಕ್ಷದ್ವೀಪ ಪ್ಯಾಕೇಜ್‌ಗಾಗಿ, ಪ್ರವಾಸಕ್ಕೆ 21 ದಿನಗಳ ಮೊದಲು ನೀವು ಬುಕಿಂಗ್ ಅನ್ನು ರದ್ದುಗೊಳಿಸಿದರೆ, ಪ್ಯಾಕೇಜ್ ಬೆಲೆಯ 30 ಪ್ರತಿಶತವನ್ನು ಶುಲ್ಕವಾಗಿ ಪಾವತಿಸಬೇಕಾಗುತ್ತದೆ. 21 ರಿಂದ 15 ದಿನಗಳ ನಡುವೆ ರದ್ದು ಮಾಡಿದರೆ, ನಂತರ 55 ಪ್ರತಿಶತ ಮತ್ತು ನೀವು 14 ರಿಂದ 8 ದಿನಗಳ ನಡುವೆ ರದ್ದುಗೊಳಿಸಿದರೆ, ನಂತರ 80 ಪ್ರತಿಶತದಷ್ಟು ದಂಡವನ್ನು ವಿಧಿಸಬೇಕಾಗುತ್ತದೆ. 8 ದಿನಗಳೊಳಗೆ ಪ್ಯಾಕೇಜ್ ಅನ್ನು ರದ್ದುಗೊಳಿಸಿದರೆ ನಿಮಗೆ ಯಾವುದೇ ಮರುಪಾವತಿ ಸಿಗುವುದಿಲ್ಲ