ಈ ರಾಶಿಯವರನ್ನು ಮನಸಾರೆ ಹರಸುವಳು ಧನಲಕ್ಷ್ಮೀ ! ನೆಟ್ಟ ಗುರಿ, ಇಟ್ಟ ಹೆಜ್ಜೆ ಎಲ್ಲದರಲ್ಲೂ ಗೆಲುವು!

ಎಷ್ಟೇ ಕಷ್ಟಕರ ಕೆಲಸಕ್ಕೆ ಕೈ ಹಾಕಿದರೂ ಗೆಲುವು ನಿಮ್ಮದಾಗುವುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಗಳಿವೆ.

ಬೆಂಗಳೂರು : ಹಬ್ಬಗಳು ಮತ್ತು ಗ್ರಹಗಳ ಚಲನೆಯಲ್ಲಿನ ಬದಲಾವಣೆಗಳ ವಿಷಯದಲ್ಲಿ ಸೆಪ್ಟೆಂಬರ್ ತಿಂಗಳನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಈ ತಿಂಗಳು, ಮಂಗಳ, ಗುರು, ಸೂರ್ಯ ಸೇರಿದಂತೆ 5 ಗ್ರಹಗಳು ಸಂಚಾರ ಮತ್ತು ಚಲನೆಯನ್ನು ಬದಲಾಯಿಸಲಿವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಗ್ರಹಗಳ ಚಲನೆಯಲ್ಲಿನ ಈ ಬದಲಾವಣೆಯ ಪರಿಣಾಮ ಎಲ್ಲಾ ರಾಶಿಯವರ ಮೇಲೆ ಗೋಚರಿಸುತ್ತದೆ. ಇವುಗಳಲ್ಲಿ, 4 ರಾಶಿಯವರ ಜೀವನದಲ್ಲಿ ಧನಾತ್ಮಕ ಪರಿಣಾಮ ಬೀರುತ್ತದೆ. 

2 /6

ಯಾರ ಮೇಲೆ ಪರಿಣಾಮ : ಈ ಸಮಯದಲ್ಲಿ, ನಾಲ್ಕು ರಾಶಿಯವರು ಏನೇ ಕೆಲಸ ಮಾಡಿದರೂ ಜಯ ಖಂಡಿತಾ. ಎಷ್ಟೇ ಕಷ್ಟಕರ ಕೆಲಸಕ್ಕೆ ಕೈ ಹಾಕಿದರೂ ಗೆಲುವು ನಿಮ್ಮದಾಗುವುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಗಳಿವೆ.   

3 /6

ತುಲಾ ರಾಶಿ : ಸೆಪ್ಟೆಂಬರ್ ತಿಂಗಳು ತುಲಾ ರಾಶಿಯವರಿಗೆ ವೃತ್ತಿಜೀವನದಲ್ಲಿ ಬಹಳ ಮುಖ್ಯವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಹೊಸ ಉದ್ಯೋಗಾವಕಾಶಗಳು ದೊರೆಯಬಹುದು. ಉದ್ಯೋಗ ಬದಲಾಯಿಸುವ ಯೋಚನೆಯಲ್ಲಿರುವವರು ತಮ್ಮ ಇಷ್ಟಾರ್ಥವನ್ನು ಈಡೇರಿಸಿಕೊಳ್ಳಬಹುದು.

4 /6

ಮೇಷ ರಾಶಿ : ಸೆಪ್ಟೆಂಬರ್ 2023 ರ ಜಾತಕವು ಈ ರಾಶಿಯವರಿಗೆ ಅದೃಷ್ಟವನ್ನೇ ಹೊತ್ತು ತಂದಿದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಒಂಟಿ ಜನರಿಗೆ ಮದುವೆ ಪ್ರಸ್ತಾಪಗಳು ಬರಬಹುದು. ಶತ್ರುಗಳು ನಿಮ್ಮ ವಿರುದ್ಧ ಏನೇ ಪಿತೂರಿ ಮಾಡಿದರೂ ನೀವು ಅವರಿಗಿಂತ ಶ್ರೇಷ್ಠ ಎನ್ನುವುದು ಸಾಬೀತಾಗುತ್ತದೆ. ಗುರುವಿನ ಶುಭ ಪ್ರಭಾವವು ನಿಮ್ಮ ಎಲ್ಲಾ ಕೆಲಸವನ್ನು  ಯಶಸ್ವಿಗೊಳಿಸುತ್ತದೆ.   

5 /6

ಮಕರ ರಾಶಿ : ಅನೇಕ ವೈಯಕ್ತಿಕ ಸಾಧನೆಗಳನ್ನು ಸಾಧಿಸುತ್ತಾರೆ. ಮನಸ್ಸು ಆತ್ಮವಿಶ್ವಾಸದಿಂದ ತುಂಬಿರುತ್ತದೆ. ಸಂಪತ್ತಿನ ಮೂಲವು ಹೆಚ್ಚಾಗುತ್ತದೆ. ಅನೇಕ ಹೊಸ ಆದಾಯದ ಮೂಲಗಳು ಪ್ರಾರಂಭವಾಗಬಹುದು.   

6 /6

ವೃಷಭ ರಾಶಿ :ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುವ ಕಾರಣ ಆದಾಯವು ಹೆಚ್ಚಾಗುತ್ತದೆ.  ಅಗತ್ಯವಿರುವ ಅನೇಕ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಬಹುದು. ಮನೆಯಲ್ಲಿ ಶುಭ ಕಾರ್ಯಗಳು ನಡೆಯಬಹುದು.  (ಹಕ್ಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)