Guess the Actor : ಒಂದು ಕಾಲದಲ್ಲಿ ಕುಸ್ತಿ ಚಾಂಪಿಯನ್.. ಈಗ ಈ ಹುಡುಗ ಸೂಪರ್‌ ಸ್ಟಾರ್‌..! ಯಾರು ಅಂತ ಗೊತ್ತಾಯ್ತಾ..?

Guess the Hero : ಚಿತ್ರರಂಗಕ್ಕೆ ಬರುವ ಮುನ್ನ ಕುಸ್ತಿಯಲ್ಲಿ ರಾಜ್ಯಮಟ್ಟದ ಚಾಂಪಿಯನ್ ಆಗಿದ್ದರು. ಈ ವಿಚಾರ ಸ್ವತಃ ಅವರ ಅಭಿಮಾನಿಗಳಿಗೆ ಗೊತ್ತಿಲ್ಲ ಅನಿಸುತ್ತದೆ.. ಹೀರೋಯಿಸಂ ಚಿತ್ರಗಳ ಹೊರತಾಗಿಯೂ ಕಂಟೆಂಟ್ ಇಷ್ಟವಾದರೆ ಕ್ಯಾರೆಕ್ಟರ್ ರೋಲ್ ಮಾಡಲು ಈ ನಟ ಸದಾ ಸಿದ್ಧ. ನಾವು ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಅಂತ ನಿಮಗೆ ತಿಳಿಯಿತಾ..? .. ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ..
 

1 /7

ಈ ಮೇಲಿನ ಫೋಟೋದಲ್ಲಿರುವ ಬಾಲಕ ಈಗ ಭಾರತೀಯ ಚಿತ್ರರಂಗ ಖ್ಯಾತ ನಟರಲ್ಲಿ ಒಬ್ಬರು. ಹಲವು ಸೂಪರ್ ಹಿಟ್ ಚಿತ್ರಗಳ ಮೂಲಕ ದಕ್ಷಿಣದ ಪ್ರೇಕ್ಷಕರಿಗೆ ಹತ್ತಿರವಾದರು. ಒಂದೇ ಸಿನಿರಂಗಕ್ಕೆ ಸಿಮಿತವಾಗಿರದೇ ಸೌತ್‌ ಸಿನಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ..

2 /7

ದಶಕಗಳಿಂದ ಚಿತ್ರರಂಗದಲ್ಲಿ ಅಗ್ರ ನಟನಾಗಿ ಹೊರಹೊಮ್ಮುತ್ತಿದ್ದಾರೆ. 64ರ ಹರೆಯದಲ್ಲೂ ಹೀರೋ ಆಗಿ ಸತತ ಗೆಲುವು ಸಾಧಿಸುವ ಮೂಲಕ ಯುವ ನಾಯಕರಿಗೆ ಪೈಪೋಟಿ ನೀಡುತ್ತಿದ್ದಾರೆ. ಆದರೆ ಚಿತ್ರರಂಗಕ್ಕೆ ಬರುವ ಮುನ್ನ ಕುಸ್ತಿಯಲ್ಲಿ ರಾಜ್ಯಮಟ್ಟದ ಚಾಂಪಿಯನ್ ಆಗಿದ್ದರು. ಅವರೇ ಮಲಯಾಳಿ ಸ್ಟಾರ್ ಹೀರೋ ಮೋಹನ್ ಲಾಲ್.

3 /7

ಹೌದು.. ಮೋಹನ್ ಲಾಲ್ ಅವರು 1970 ರಲ್ಲಿ ತಮ್ಮ ʼತಿರನೋತ್ತಂʼ ಚಿತ್ರದ ಮೂಲಕ ಭಾರತೀಯ ಚಲನಚಿತ್ರ ಜಗತ್ತನ್ನು ಪ್ರವೇಶಿಸಿದರು. ಬೆಳ್ಳಿತೆರೆಗೆ ಖಳನಾಯಕನಾಗಿ ಪಾದಾರ್ಪಣೆ ಮಾಡಿದ ಮೋಹನ್ ಲಾಲ್, ತಮ್ಮ ನೋಟದಿಂದಲೇ ಸಿನಿರಸಿಕರ ಹೃದಯದಲ್ಲಿ ಸ್ಥಾನ ಪಡೆದರು. 

4 /7

ಮೋಹನ್ ಲಾಲ್ ಮಲಯಾಳಂನಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ, ಎರಡು ಬಾರಿ ಅತ್ಯುತ್ತಮ ನಟ ಸೇರಿದಂತೆ ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮಲಯಾಳಂ ಅಲ್ಲದೆ ತಮಿಳು, ಹಿಂದಿ, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.

5 /7

ವಿಲನ್ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮೋಹನ್ ಲಾಲ್ ನಂತರ ನಾಯಕ ಮತ್ತು ಹಾಸ್ಯ ಪಾತ್ರಗಳಲ್ಲಿ ನಟಿಸಿದರು. 80-90ರ ದಶಕದಲ್ಲಿ ಸೌತ್ ಇಂಡಸ್ಟ್ರಿಯ ಟಾಪ್ ಹೀರೋಗಳಲ್ಲಿ ಒಬ್ಬರಾಗಿ ಖ್ಯಾತಿ ಹೊಂದಿದರು.  

6 /7

ಮೋಹನ್ ಲಾಲ್ ನಾಲ್ಕು ದಶಕಗಳ ತಮ್ಮ ವೃತ್ತಿ ಜೀವನದಲ್ಲಿ ರೂ.350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ, ಯಂಗ್ ಟೈಗರ್ ಎನ್‌ಟಿಆರ್ ಅಭಿನಯದ ಜನತಾ ಗ್ಯಾರೇಜ್ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.   

7 /7

2015 ರಲ್ಲಿ ಬಿಡುಗಡೆಯಾದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಟನೆಯ ಮೈತ್ರಿ ಸಿನಿಮಾದ ಮೂಲಕ ಮೋಹನ್‌ ಲಾಲ್‌ ಅವರು ಸ್ಯಾಂಡಲ್‌ವುಡ್‌ಗೂ ಸಹ ಕಾಲಿಟ್ಟರು. ಈ ಚಿತ್ರದ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಹತ್ತಿರವಾದರು.