ನಟಿ ಖುಷ್ಬೂ ಗಿಂತ ಸಖತ್‌ ಸುಂದರಿ ಅವರ ಮಗಳು..! ಎಲ್ಲಿದ್ದಾಳೆ.. ಹೇಗಿದ್ದಾಳೆ ಗೊತ್ತೆ..?

Kushboo Daughter : ಬಹುಭಾಷಾ ನಟಿ ಖುಷ್ಬು ಸುಂದರ್‌ ಬಗ್ಗೆ ಹೆಚ್ಚಾಗಿ ಹೇಳುವ ಅಗತ್ಯವಿಲ್ಲ.. ʼರಣಧೀರʼ ಚಿತ್ರದ ಮೂಲಕ ಕನ್ನಡ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ನಟಿ ಸಿನಿರಸಿಕರ ಮನಗೆದ್ದರು. ಇಂದಿಗೂ ಈ ಚೆಲುವೆಗೆ ಸಖತ್‌ ಡಿಮ್ಯಾಂಡ್‌ ಇದೆ.. ಆದರೆ ಇದು ವರೆಗೆ ಒಂದೇ ಒಂದು ಸಿನಿಮಾ ಮಾಡದ ಅವರ ಪುತ್ರಿಗೆ ಫುಲ್‌ ಕ್ರೇಜ್‌ ಇದೆ..

1 /6

1988 ʼರಣಧೀರʼ ಸಿನಿಮಾದ ಮೂಲಕ ಖುಷ್ಬೂ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡಿದರು. ತೆಲುಗು, ಮಲಯಾಳಂ, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಯ ಚಲನಚಿತ್ರಗಳ ಜೊತೆಗೆ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಅವರು, 100ಕ್ಕೂ ಹೆಚ್ಚು ಕಾಲಿವುಡ್‌ ಚಿತ್ರಗಳಲ್ಲಿಯೇ ಕಾಣಿಸಿಕೊಂಡಿದ್ದಾರೆ.

2 /6

ಇನ್ನು ಖುಷ್ಬೂ ನಟ ಸುಂದರ್ ಅವರನ್ನು 2000ರಲ್ಲಿ ಮದುವೆ ಆದರು. ಅವರಿಗೆ ಅವಂತಿಕಾ (Avantika Sundar) ಹಾಗೂ ಆನಂದಿತಾ ಎಂಬ ಇಬ್ಬರು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಿರಿಯ ಮಗಳು ಆನಂದಿತಾ ಉದ್ಯಮಿ, ಎರಡನೇ ಮಗಳು ಅವಂತಿಕಾ ಸಿನಿ ಇಂಡ್ರಸ್ಟ್ರಿಗೆ ಎಂಟ್ರೀ ರೆಡಿಯಾಗಿದ್ದಾರೆ.

3 /6

ಅವಂತಿಕಾ ಸುಂದರ್ ಅಮ್ಮನಂತೆ ಅಪರೂಪದ ಸುಂದರಿ. ಅವರು ಸಿನಿಮಾ ರಂಗಕ್ಕೆ ಇನ್ನೂ ಎಂಟ್ರಿ ಕೊಟ್ಟಿಲ್ಲ. ಆದ್ರೆ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಶೂಟ್‌ ಮೂಲಕ ಸಖತ್‌ ಕ್ರೇಜ್‌ ಗಿಟ್ಟಿಸಿಕೊಂಡಿದ್ದಾರೆ. ಚೆಲುವೆಯ ಸೌಂದರ್ಯಕ್ಕೆ ಸಾಕಷ್ಟು ಜನ ಫ್ಯಾನ್ಸ್‌ ಫಾಲೋಯಿಂಗ್‌ ಇದೆ.

4 /6

2022ರಲ್ಲಿ ಅವಂತಿಕಾ ನಟನಾ ತರಬೇತಿ ಪಡೆದು ಸಿನಿರಂಗಕ್ಕೆ ಪ್ರವೇಶ ಮಾಡಲು ರೆಡಿಯಾಗಿದ್ದಾರೆ. ಲಂಡನ್‌ನ ಖ್ಯಾತ ನಟನಾ ಶಾಲೆಯಲ್ಲಿ ತರಬೇತಿ ಪಡೆದಿದ್ದಾರೆ. ಆದರೆ ಇನ್ನೂ ಸಿನಿ ರಂಗಕ್ಕೆ ಪ್ರವೇಶ ಮಾಡಿಲ್ಲ. ಅದಕ್ಕೆ ಕಾರಣವೂ ಇದೆ.

5 /6

ಅವಂತಿಕಾ ಸ್ಟ್ರಗಲ್ ಈಗ ಪ್ರಾರಂಭವಾಗಿದೆ. ಎಲ್ಲವನ್ನೂ ಅವಳಾಗೆ ಪಡೆದುಕೊಳ್ಳಬೇಕು. ನಾವು ಅವಳನ್ನು ಲಾಂಚ್ ಮಾಡಲ್ಲ, ಎಲ್ಲಿಯೂ ಅವಳ ಹೆಸರು ಶಿಫಾರಸ್ಸು ಮಾಡಲ್ಲ ಅಂತ ಮಗಳು ಕಷ್ಟ ಪಟ್ಟು ಬೆಳೆಯಬೇಕು ಅಂತ ಖುಷ್ಬೂ ಹೇಳಿದ್ದಾರೆ.

6 /6

ಇನ್ನು ಖುಷ್ಬೂ 1988ರಲ್ಲಿ ʼರಣಧೀರʼ ಮತ್ತು ʼಅಂಜದ ಗಂಡುʼ ಸಿನಿಮಾದ ಮೂಲಕ ಕನ್ನಡ ಸಿನಿ ಲೋಕಕ್ಕೆ ಕಾಲಿಟ್ಟರು. ಮೊದಲ ಚಿತ್ರದಲ್ಲೇ ಕನ್ನಡ ಸಿನಿ ರಸಿಕರ ಮನಗೆದ್ದರು. ರವಿಚಂದ್ರನ್ ಮತ್ತು ಖುಷ್ಬೂ ಕಾಂಬಿನೇಷನ್ ಸಿನಿಮಾಗಳಂದ್ರೆ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿತ್ತು.