ಇಲ್ಲೊಂದು ಬೇಕರಿಯಲ್ಲಿ ಕಳ್ಳತನ ನಡೆದಿತ್ತು. ಕಳ್ಳನನ್ನು ಹಿಡಿಯಲು ಬೇಕರಿ ಮಾಲೀಕ ಜಬರ್ದಸ್ತ್ ಉಪಾಯವನ್ನೇ ಮಾಡಿದ್ದಾರೆ.
ಅಮೆರಿಕ : ಇಲ್ಲೊಂದು ಬೇಕರಿಯಲ್ಲಿ ಕಳ್ಳತನ ನಡೆದಿತ್ತು. ಕಳ್ಳನನ್ನು ಹಿಡಿಯಲು ಬೇಕರಿ ಮಾಲೀಕ ಜಬರ್ದಸ್ತ್ ಉಪಾಯವನ್ನೇ ಮಾಡಿದ್ದಾರೆ. ಹೌದು ಕಳ್ಳ ಬೇಕರಿಯಲ್ಲಿ ಕಳ್ಳತನ ಮಾಡಿವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗುತ್ತು, ಕಳ್ಳನನ್ನು ಹಿಡಿಯಲು ಬೇಕರಿ ಮಾಲೀಕನಿಗೆ ಇಷ್ಟು ಸಾಕಾಗಿತ್ತು. ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳನ ಪೋಟೋವನ್ನು ಬಿಸ್ಕೆಟ್ ಮೇಲೆ ಹಾಕಲಾಗುತ್ತದೆ. ಹಾಗೂ ಈ ಬಿಸ್ಕೆಟ್ ನಲ್ಲಿರುವ ವ್ಯಕ್ತಿಯು ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ಗ್ರಾಹಕರಿಗೆ ಸೂಚಿಸಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಅಮೆರಿಕಾದ Milwaukee, Wisconsin ನಲ್ಲಿ ಕ್ಯಾನ್ ಪೊರಾ ಹೆಸರಿನ ಬೇಕರಿಯಿದೆ. ಕೆಲ ದಿನಗಳ ಹಿಂದೆ ಈ ಬೇಕರಿಗೆ ನುಗ್ಗಿದ ಕಳ್ಳ, ಬೇಕರಿಯಲ್ಲಿದ್ದ ಹಣ ಮತ್ತು ವಸ್ತುಗಳನ್ನು ದೋಚಿ ಪರಾರಿಯಾಗುತ್ತಾನೆ. ಆದರೆ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುತ್ತದೆ.
ಕಳ್ಳನನ್ನು ಹಿಡಿಯುವುದು ಹೇಗೆ ಎಂದು ಬೇಕರಿ ಮಾಲೀಕ ಯೋಚಿಸುತ್ತಾನೆ. ಕೊನೆಗೆ ಆತನಿಗೆ ಹೊಳೆದ ಉಪಾಯದ ಪ್ರಕಾರ ಕಳ್ಳನನ್ನು ಹಿಡಿಯುವ ಯೋಜನೆ ರೂಪಿಸುತ್ತಾನೆ. ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳನ ಫೋಟೋವನ್ನು ತನ್ನ ಬೇಕರಿಯಲ್ಲಿ ಮಾರಾಟ ಮಾಡುವ ಬಿಸ್ಕೆಟ್ ಮೇಲೆ ಪ್ರಿಂಟ್ ಹಾಕಿಸುತ್ತಾನೆ. ಈ ಬಗ್ಗೆ ಬೇಕರಿಯ ಫೇಸ್ ವಬುಕ್ ಪೇಜ್ ನಲ್ಲೂ ಶೇರ್ ಮಾಡುತ್ತಾನೆ. ತನ್ನ ಬೇಕರಿಯಲ್ಲಿ ಆದ ಕಳ್ಳತನದ ಬಗ್ಗೆ ವಿವರವಾಗಿ ಪೋಸ್ಟ್ ಬರೆಯುತ್ತಾನೆ.
ಬೇಕರಿ ಮಾಲೀಕ ಈ ಪೋಸ್ಟ್ ಹಾಕುತ್ತಿದ್ದಂತೆ, ಸುಮಾರು ಜನ ಆ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ. ಅನೇಕರು ಬೇಕರಿ ಮಾಲೀಕನ ಉಪಾಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಂತೂ ಇಂತೂ ಬೇಕರಿ ಮಾಲೀಕನ ಉಪಾಯ ಫಲ ಕೊಟ್ಟಿದೆ. ಕಳ್ಳನನ್ನು ಹಿಡಿಯಲಾಗಿದೆ.