ತಮಗಿಂತ ದೊಡ್ಡ ವಯಸ್ಸಿನ ಯುವತಿಯರನ್ನು ವರಿಸಿದ ಭಾರತೀಯ ಕ್ರಿಕೆಟಿಗರಿವರು

ತಮ್ಮ ವಯಸ್ಸಿಗಿಂತ ಕಡಿಮೆ ವಯಸ್ಸಿನ ಯುವತಿಯರನ್ನು ವರಿಸಿದ ಕ್ರಿಕೆಟಿಗರು ಯಾರು ನೋಡೋಣ.. 

ನವದೆಹಲಿ : ಪ್ರೀತಿಗೆ ಕಣ್ಣಿಲ್ಲ, ಪ್ರೀತಿಗೆ ಕಣ್ಣು ಬೇಕಿಲ್ಲ ಎಂದು ಹೇಳುತ್ತಾರೆ. ಯಾರ ಮೇಲಾದರೂ ಪ್ರೀತಿ ಮೂಡಿದಾಗ, ಆ ಪ್ರೀತಿ ಮುಖ್ಯವಾಗುತ್ತದೆಯೇ ಹೊರತು ಮೇಲು , ಕೀಳು, ಜಾತಿ, ವಯಸ್ಸು ಇದ್ಯಾವುದರ ಪರಿವೂ ಇರುವುದಿಲ್ಲ.  ಪ್ರೀತಿಯ ವಿಚಾರದಲ್ಲಿ ಟೀಂ ಇಂಡಿಯಾದ ಕ್ರಿಕೆಟಿಗರು ಕೂಡ ಯಾರಿಗೂ ಕಡಿಮೆಯೇನಿಲ್ಲ. ತಮ್ಮ ವಯಸ್ಸಿಗಿಂತ ಕಡಿಮೆ ವಯಸ್ಸಿನ ಯುವತಿಯರನ್ನು ವರಿಸಿದ ಕ್ರಿಕೆಟಿಗರು ಯಾರು ನೋಡೋಣ.. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಜಸ್ಪ್ರೀತ್ ಬುಮ್ರಾ ಅವರು 15 ಮಾರ್ಚ್ 2021 ರಂದು ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರನ್ನು ವಿವಾಹವಾದರು. ಬುಮ್ರಾ ಸಂಜನಾ ಅವರಿಗಿಂತ 2 ವರ್ಷ 7 ತಿಂಗಳು ಚಿಕ್ಕವರು. 

2 /5

ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಹಸಿನ್ ಜಹಾನ್ ಅವರನ್ನು ವಿವಾಹವಾಗಿದ್ದು, ಸದ್ಯ ಇಬ್ಬರೂ ವಿಚ್ಛೇದನ ಪಡೆದಿದ್ದಾರೆ. ಹಸಿನ್ ಜಹಾನ್ ಮೊಹಮ್ಮದ್ ಶಮಿಗಿಂತ ಸುಮಾರು 10 ವರ್ಷ ದೊಡ್ಡವರು. ವಿಚ್ಛೇದನದ ನಂತರ ಇಬ್ಬರೂ ಮರುಮದುವೆ ಮಾಡಿಕೊಂಡಿಲ್ಲ.

3 /5

ಟೀಮ್ ಇಂಡಿಯಾದ ' ಶಿಖರ್ ಧವನ್ ಮತ್ತು ಆಯೇಶಾ ಮುಖರ್ಜಿ 2012 ರಲ್ಲಿ ಸಪ್ತಪದಿ ತಿಳಿದಿದ್ದಾರೆ. ಆಯೇಷಾ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದರು. ಇವರಿಬ್ಬರ ಮಧ್ಯೆ, 10 ವರ್ಷಗಳ ಅಂತರವಿದೆ. ಅಷ್ಟೇ ಅಲ್ಲ, ಆಯೇಷಾ ಅವರ ಹಿರಿಯ ಮಗಳಿಗಿಂತ ಧವನ್ ಕೇವಲ 15 ವರ್ಷ ದೊಡ್ಡವರು. 2021ರಲ್ಲಿ, ಇಬ್ಬರೂ ವಿಚ್ಛೇದನದ ನಂತರ ಬೇರೆಯಾಗಲು ನಿರ್ಧರಿಸಿದ್ದಾರೆ.   

4 /5

ಸಚಿನ್ ತೆಂಡೂಲ್ಕರ್ ಅವರು ಅಂಜಲಿ ತೆಂಡೂಲ್ಕರ್ ಅವರೊಂದಿಗೆ ಪ್ರೇಮ ವಿವಾಹವಾಗಿದ್ದರು. ಅಂಜಲಿ ವೃತ್ತಿಯಲ್ಲಿ ವೈದ್ಯೆ. ಅಂಜಲಿ ಸಚಿನ್‌ಗಿಂತ 6 ವರ್ಷ ದೊಡ್ಡವರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಮಗನ ಹೆಸರು ಅರ್ಜುನ್ ಮತ್ತು ಮಗಳು ಸಾರಾ.  ತಂದೆಯಂತೆ ಅರ್ಜುನ್ ಕೂಡ ಕ್ರಿಕೆಟರ್ ಆಗುವ ಹಾದಿಯಲ್ಲಿದ್ದಾರೆ. 

5 /5

ಸುರೇಶ್ ರೈನಾ  ಏಪ್ರಿಲ್3  2015 ರಂದು ಪ್ರಿಯಾಂಕಾ ಚೌಧರಿ ಅವರನ್ನು ವಿವಾಹವಾದರು. ಪ್ರಿಯಾಂಕಾ 18 ಜೂನ್ 1986 ರಂದು ಜನಿಸಿದರೆ, ರೈನಾ 27 ನವೆಂಬರ್ 1986 ರಂದು ಜನಿಸಿದರು. ಇದರ ಪ್ರಕಾರ ಇಬ್ಬರ ವಯಸ್ಸಿನಲ್ಲೂ 5 ತಿಂಗಳು 9 ದಿನಗಳ ಅಂತರವಿದೆ.