Ileana D'Cruz boyfriend : ಕನ್ನಡದ ಹುಡುಗ ಹುಡುಗಿ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದ ನಟಿ ಇಲಿಯಾನಾ ಇದೀಗ ತಾಯಿಯಾಗುತ್ತಿದ್ದಾರೆ. ಹೌದು. ಸ್ವತಃ ಈ ವಿಚಾರವನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬೇಬಿ ಬಂಬ್ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ. ಅದ್ರೆ, ಇಲಿಯಾನಾ ಅವರಿಗೆ ಮದುವೆಯಾಗಿತ್ತಾ..? ಹಾಗಿದ್ರೆ ಗಂಡ ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
Ileana husband name : ಬಿಟೌನ್ ಬೆಡಗಿ ಇಲಿಯಾನಾ ಡಿಕ್ರೂಜ್ ತಮ್ಮ ಅಭಿಮಾನಿಗಳ ಜೊತೆ ಖುಷಿ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ತಾವು ತಾಯಿಯಾಗುತ್ತಿರುವ ವಿಚಾರವನ್ನು ಬೇಬಿ ಬಂಬ್ ಫೋಟೋ ಹಂಚಿಕೊಳ್ಳುವ ಮೂಲಕ ತಿಳಿಸಿರುವ ಸುಂದರಿಗೆ ಅವರ ಅಭಿಮಾನಿಗಳು ಸೇರಿದಂತೆ ಚಲನಚಿತ್ರ ನಟರು, ಸ್ನೇಹಿತರು ಶುಭ ಕೋರುತ್ತಿದ್ದಾರೆ. ಇದರ ಬೆನ್ನಲ್ಲೆ ಇಲಿಯಾನಾ ಪತಿಯಾರು ಯಾವಾಗ ಮದುವೆ ಆದ್ರು ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.
ಈ ವರ್ಷದ ಏಪ್ರಿಲ್‌ನಲ್ಲಿ ಇಲಿಯಾನಾ ಡಿಕ್ರೂಜ್ ಅವರ ಫೋಟೋ ನೋಡಿ ಗರ್ಭಿಣಿಯಾಗಿದ್ದಾರೆ ಎಂಬುವುದಾಗಿ ನೆಟ್ಟಿಗರು ಸುದ್ದಿ ಹಬ್ಬಿಸಿದ್ದರು.
ಇದೀಗ ಸ್ವತಃ ಇಲಿಯಾನಾ ಬೇಬಿ ಬಂಪ್ ಫೋಟೋ ಹಂಚಿಕೊಂಡು ತಾವು ತಾಯಿಯಾಗುತ್ತಿರುವುದಾಗಿ ಸ್ಪಷ್ಟ ಪಡಿಸಿದ್ದಾರೆ.
ಇನ್‌ಸ್ಟಾ ಸ್ಟೇಟಸ್‌ನಲ್ಲಿ ʼಮಮಾʼ ಎಂದು ಶೀರ್ಷಿಕೆ ಬರೆದುಕೊಂಡು ತಾವು ಪ್ರಗ್ನೆಂಟ್ ಆಗಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
ಇದರ ಬೆನ್ನಲ್ಲೆ ಇಲಿಯಾನಾ ಮದುವೆಯಾಗಿದ್ದು ಯಾವಾಗ, ಅವರ ಪತಿ ಯಾರು ಎಂಬುವ ಪ್ರಶ್ನೆ ಹುಟ್ಟಿಕೊಂಡಿದೆ.
ಇಲಿಯಾನಾ ಹಲವು ವರ್ಷಗಳ ಹಿಂದೆ ಆಸ್ಟ್ರೇಲಿಯಾದ ಛಾಯಾಗ್ರಾಹಕ ಆಂಡ್ರ್ಯೂ ನೀಬೋನ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂಬ ವದಂತಿ ಹರಡಿತ್ತು. ಇಬ್ಬರೂ 2019 ರಲ್ಲಿ ಬೇರ್ಪಟ್ಟರು.
ನಂತರ ಅವರು ಕತ್ರಿನಾ ಕೈಫ್ ಅವರ ಸಹೋದರ ಸೆಬಾಸ್ಟಿಯನ್ ಕೈಫ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
ಅಲ್ಲದೆ, ಇಬ್ಬರು ಕತ್ರಿನಾ, ವಿಕ್ಕಿ ಮತ್ತು ಇತರರೊಂದಿಗೆ ಮಾಲ್ಡೀವ್ಸ್‌ಗೆ ಪ್ರಯಾಣ ಬೆಳೆಸಿದರು. ಈ ಕುರಿತು ಫೋಟೋಗಳು ವೈರಲ್ ಆಗಿದ್ದವು.
ಆದರೂ ಇಲಿಯಾನಾ ತನ್ನ ಪ್ರೇಮ ಜೀವನದ ಬಗ್ಗೆ ಇದೂವರೆಗು ಎಲ್ಲೂ ಮಾತನಾಡಿಲ್ಲ, ದಾಂಪತ್ಯ ಜೀವನದ ಕುರಿತು ಎಲ್ಲೂ ಹೇಳಿಲ್ಲ.