ಕನಸಿನಲ್ಲಿ ಈ ಬಿಳಿ ವಸ್ತುಗಳು ಕಂಡರೆ, ಅಪಾರ ಸಂಪತ್ತಿನ ಒಡೆಯರಾಗುವುದು ಖಂಡಿತಾ ..!.

ಜ್ಯೋತಿಷ್ಯದ ಪ್ರಕಾರ,  ಈ ಕನಸುಗಳು ಭವಿಷ್ಯದಲ್ಲಿ ಸಂಭವಿಸುವ ಒಳ್ಳೆಯ ಮತ್ತು ಕೆಟ್ಟ ಘಟನೆಗಳನ್ನು ಸೂಚಿಸುತ್ತವೆ. 

ನವದೆಹಲಿ : ನಿದ್ರೆಯಲ್ಲಿ ಬೀಳುವ ಕನಸುಗಳಿಗೂ ಬಹಳಷ್ಟು ಅರ್ಥವಿದೆ. ಜ್ಯೋತಿಷ್ಯದ ಪ್ರಕಾರ,  ಈ ಕನಸುಗಳು ಭವಿಷ್ಯದಲ್ಲಿ ಸಂಭವಿಸುವ ಒಳ್ಳೆಯ ಮತ್ತು ಕೆಟ್ಟ ಘಟನೆಗಳನ್ನು ಸೂಚಿಸುತ್ತವೆ. ಕನಸುಗಳು ಮತ್ತು ಅವುಗಳ ಅರ್ಥಗಳನ್ನು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ. ಕನಸಿನಲ್ಲಿ ಈ ಬಿಳಿ ವಸ್ತುಗಳನ್ನು ಕಂಡರೆ ಅದು ಭಾರೀ ಅದೃಷ್ಟವನ್ನು ನೀಡುತ್ತದೆಯಂತೆ.  ಅಪಾರ ಸಂಪತ್ತಿನ ಮಾಲೀಕರಾಗುವ ಮುನ್ಸೂಚನೆಯನ್ನು ಈ ಕನಸುಗಳು ನೀಡುತ್ತವೆ ಎನ್ನಲಾಗಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಕನಸಿನಲ್ಲಿ ಬಿಳಿ ಸಿಂಹ ಅಥವಾ ಹುಲಿಯನ್ನು ನೋಡುವುದು ತುಂಬಾ ಮಂಗಳಕರ. ಯಾವುದೋ ದೊಡ್ಡ ವಿಷಯಗಳಲ್ಲಿ ಜಯ ಗಳಿಸುವ ಮುನ್ಸೂಚನೆಯನ್ನು ಇದು ನೀಡುತ್ತದೆ. ಇದಲ್ಲದೇ ವೃತ್ತಿಯಲ್ಲಿ ಬರುವ ಅಡೆತಡೆಗಳನ್ನು ನಿವಾರಿಸಿ ಉತ್ತಮ ಪ್ರಗತಿಯನ್ನು ನೀಡುತ್ತದೆ. 

2 /6

ಕನಸಿನಲ್ಲಿ ಬಿಳಿ ನವಿಲನ್ನು ನೋಡುವುದು ಎಂದರೆ ನಿಮ್ಮ ಜೀವನದಲ್ಲಿ ಅಪಾರ ಸಂಪತ್ತು ಮತ್ತು ಸಂತೋಷ ಬರಲಿದೆ ಎಂದರ್ಥ. ನಿಮ್ಮನ್ನು ಶ್ರೀಮಂತರನ್ನಾಗಿಸಲು ಈ ಕನಸು ಸಾಕು. ಅಲ್ಲದೆ, ಇದು ದೊಡ್ಡ ಸಾಧನೆ ಮಾಡುವ ಮುನ್ಸೂಚನೆಯೂ ಹೌದು. 

3 /6

ನಿಮ್ಮ ಕನಸಿನಲ್ಲಿ ಬಿಳಿ ಗೂಬೆಯನ್ನು ನೋಡಿದರೆ, ನಿಮಗೆ ಬಹಳಷ್ಟು ಹಣವನ್ನು ಪಡೆಯುವ ಅವಕಾಶ ಸಿಗುತ್ತದೆ ಎಂದರ್ಥ.  ಗೂಬೆಯು ಲಕ್ಷ್ಮಿ ದೇವಿಯ ವಾಹನವಾಗಿದೆ. ಈ ಕಾರಣದಿಂದಾಗಿ,  ಬಿಳಿ ಗುಬೆಯ ಕನಸು ಕಾಣುವುದೆಂದರೆ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗಲಿದೆ ಎನ್ನುವುದರ ಸ್ಪಷ್ಟ ಸೂಚನೆಯಾಗಿರುತ್ತದೆ. 

4 /6

 ಕನಸಿನಲ್ಲಿ ಬಿಳಿ ಹಂಸವನ್ನು ನೋಡುವುದು ಎಂದರೆ ಭವ್ಯವಾದ ವೈಭವವನ್ನು ಪಡೆಯಲಿದ್ದೀರಿ ಎಂದರ್ಥ

5 /6

ಕನಸಿನಲ್ಲಿ ಬಿಳಿ ಆನೆಯನ್ನು ನೋಡಿದರೆ, ಜೀವನದಲ್ಲಿ ರಾಜಯೋಗದ ಆರಂಭವನ್ನು ಸೂಚಿಸುತ್ತದೆ. ಅಂತಹ ಕನಸು ಅಪಾರ ಸಂಪತ್ತು, ಗೌರವ ಮತ್ತು ದೊಡ್ಡ ಯಶಸ್ಸನ್ನು ಹೊತ್ತು  ತರುತ್ತದೆ. 

6 /6

ಕನಸಿನಲ್ಲಿ ಬಿಳಿ ಕುದುರೆಯನ್ನು ನೋಡುವುದು ವೃತ್ತಿ-ವ್ಯವಹಾರದಲ್ಲಿ ಉತ್ತಮ ಯಶಸ್ಸು ಸಿಗುವ ಸಂಕೇತ. ಇದು ಜೀವನವನ್ನು ಬದಲಾಯಿಸುವ ಸಾಧನೆಯಾಗಬಹುದು.