ಭಾರತದ ಈ ಹಳ್ಳಿಯಲ್ಲಿದೆ 'ನಡಾಲ್ ಎಜುಕೇಷನಲ್ ಟೆನಿಸ್ ಸ್ಕೂಲ್'

Rafael Nadal: ಆಸ್ಟ್ರೇಲಿಯನ್ ಓಪನ್ 2022 ರಲ್ಲಿ ಗೆಲ್ಲುವ ಮೂಲಕ 21 ನೇ ಗ್ರ್ಯಾಂಡ್ ಸ್ಲಾಮ್ ಗೆದ್ದು ರಾಫೆಲ್ ನಡಾಲ್ ವಿಶ್ವದಾಖಲೆ ಮಾಡಿದ್ದಾರೆ.

ರಾಫೆಲ್ ನಡಾಲ್ (Rafael Nadal) ಅವರು ಮೆಲ್ಬೋರ್ನ್‌ನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ 2022 ನ ಐದು ಸೆಟ್‌ಗಳ ಪಂದ್ಯದಲ್ಲಿ ವಿಶ್ವದ ನಂ. 2 ಆಟಗಾರ ಡೇನಿಯಲ್ ಮೆಡ್ವೆಡೆವ್ ಅವರನ್ನು ಸೋಲಿಸಿದರು. ಈ ಮೂಲಕ ಕ್ರೀಡಾ ಇತಿಹಾಸದಲ್ಲಿ 21 ಗ್ರ್ಯಾಂಡ್ ಸ್ಲಾಮ್‌ಗಳನ್ನು (Grand Slam) ಗೆದ್ದ ಮೊದಲ ವ್ಯಕ್ತಿ ಎನಿಸಿಕೊಂಡರು. ನಡಾಲ್ ಅವರು ಭಾರತದೊಂದಿಗೆ ಸುದೀರ್ಘ ಸಂಪರ್ಕವನ್ನು ಹೊಂದಿದ್ದಾರೆ.  2010 ರಲ್ಲಿ ಆಂಧ್ರಪ್ರದೇಶದ ಅನಂತಪುರದ ಹಳ್ಳಿಯಲ್ಲಿ 'ನಡಾಲ್ ಎಜುಕೇಷನಲ್ ಟೆನಿಸ್ ಸ್ಕೂಲ್' (Nadal Educational Tennis School) ಅನ್ನು ಸ್ಥಾಪಿಸಿದರು. ಈ ಚಿತ್ರ ಸಂಗ್ರಹದಲ್ಲಿ, ನಾವು ಭಾರತದೊಂದಿಗಿನ ನಡಾಲ್ ಅವರ ನಂಟನ್ನು ನೋಡೋಣ.

1 /5

ಅನಂತಪುರದ ಟೆನಿಸ್ ಶಾಲೆಯನ್ನು 2010 ರಲ್ಲಿ ರಾಫೆಲ್ ನಡಾಲ್ ಅವರ ತಾಯಿ ಅನಾ ಮಾರಿಯಾ ಪರೇರಾ ಅವರೊಂದಿಗೆ ಉದ್ಘಾಟಿಸಿದರು. ಅವರು ನಡಾಲ್ ಫೌಂಡೇಶನ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.  (ಮೂಲ: ಟ್ವಿಟರ್)

2 /5

ರಾಫೆಲ್ ನಡಾಲ್ ಅವರ ಪತ್ನಿ ಮಾರಿಯಾ ಫ್ರಾನ್ಸಿಸ್ಕಾ ಪೆರೆಲ್ಲೊ ಅವರು ಈಗ ಫೌಂಡೇಶನ್‌ನ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಡಾಲ್ ಆಗಾಗ್ಗೆ ಈ ಕೇಂದ್ರಗಳಿಗೆ ಭೇಟಿ ನೀಡುತ್ತಾರೆ. ಅಲ್ಲದೆ ಮರಿಯಾ ಫ್ರಾನ್ಸಿಸ್ಕಾ ಪೆರೆಲ್ಲೊ ಸಹ ಅನಂತಪುರದ ಶಾಲೆಗೆ ಆಗಾಗ ಭೇಟಿ ನೀಡುತ್ತಾರೆ. (ಮೂಲ: ಟ್ವಿಟರ್)

3 /5

ರಾಫೆಲ್ ನಡಾಲ್ ಟೆನಿಸ್ ಶಾಲೆಯು ಸ್ಪೇನ್‌ನಲ್ಲಿ 23 ಶಾಖೆಗಳನ್ನು ಹೊಂದಿದೆ. ಭಾರತದಲ್ಲಿನ ಟೆನಿಸ್ ಶಾಲೆಯ ಹೊರತಾಗಿ, ರಾಫೆಲ್ ನಡಾಲ್ ಸ್ಪೇನ್‌ನಲ್ಲಿ ಇನ್ನೂ 23 ಕೇಂದ್ರಗಳನ್ನು ಪ್ರಾರಂಭಿಸಿದ್ದಾರೆ. ಎಲ್ಲಾ ಸಂದರ್ಭಗಳಲ್ಲಿ ಯುವಜನರ ವೈಯಕ್ತಿಕ ಮತ್ತು ಸಾಮಾಜಿಕ ಬೆಳವಣಿಗೆಯನ್ನು ಉತ್ತೇಜಿಸುತ್ತಾರೆ. (ಫೋಟೋ: ರಾಯಿಟರ್ಸ್)

4 /5

ರಾಫೆಲ್ ನಡಾಲ್ ಅವರು 2008 ರ ಚೆನ್ನೈ ಓಪನ್ ಚಾಂಪಿಯನ್ ಆಗಿದ್ದರು. ಅವರು 2007 ರಲ್ಲಿ ಚೆನ್ನೈನಲ್ಲಿ ಸೆಮಿಫೈನಲಿಸ್ಟ್ ಆಗಿದ್ದರು.  (ಫೋಟೋ: ರಾಯಿಟರ್ಸ್)

5 /5

ಭಾನುವಾರ (ಜನವರಿ 30) ಮೆಲ್ಬೋರ್ನ್‌ನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ 2022 ಕಿರೀಟವನ್ನು ಗೆದ್ದ ರಾಫೆಲ್ ನಡಾಲ್, ಟೆನಿಸ್ ಇತಿಹಾಸದಲ್ಲಿ 21 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಮೊದಲ ವ್ಯಕ್ತಿ ಎನಿಸಿಕೊಂಡರು.  (ಮೂಲ: ಟ್ವಿಟರ್)