ನಂಬರ್ ಸೇವ್ ಮಾಡದೆಯೂ WhatsApp ಸಂದೇಶ ಕಳುಹಿಸಬಹುದು: ಹೇಗೆಂದು ತಿಳಿಯಿರಿ...

ಬಳಕೆದಾರರಿಗೆ ವಾಟ್ಸಾಪ್ ಅನೇಕ ವೈಶಿಷ್ಟ್ಯಗಳನ್ನು ನೀಡಿದೆ.

ತ್ವರಿತ ಸಂದೇಶ ಕಳುಹಿಸುವಿಕೆಗಾಗಿ ವಾಟ್ಸಾಪ್ ವಿಶ್ವದ ಅತ್ಯಂತ ಜನಪ್ರಿಯ ಅಪ್ಲಿಕೇಶನ್ ಆಗಿ ಹೊರಹೊಮ್ಮಿದೆ. ಈ ಜನಪ್ರಿಯ ಆ್ಯಪ್ ಮೂಲಕ ಸ್ನೇಹಿತರು ಮತ್ತು ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿರುವುದು ನಮಗೆ ತುಂಬಾ ಸುಲಭವಾಗಿದೆ. ತಮ್ಮ ಬಳಕೆದಾರರಿಗೆ ವಾಟ್ಸಾಪ್ ಅನೇಕ ವೈಶಿಷ್ಟ್ಯಗಳನ್ನು ನೀಡಿದೆ. ಆದರೆ ಬಹುತೇಕರಿಗೆ ವಿಶೇಷ ಫೀಚರ್ಸ್ ಗಳ ಬಗ್ಗೆ ಗೊತ್ತಿರುವುದಿಲ್ಲ. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ... 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /7

ಅನೇಕ ಬಾರಿ ಫೋನ್‌ನಲ್ಲಿ ನಂಬರ್ ಸೇವ್ ಮಾಡದೆಯೂ ಆ ಸಂಪರ್ಕಗಳಿಗೆ ನಾವು ಸಂದೇಶಗಳು, ಫೋಟೋಗಳು ಅಥವಾ ವೀಡಿಯೊಗಳನ್ನು ಕಳುಹಿಸಬೇಕಾದ ಸಂದರ್ಭ ಎದುರಾಗುತ್ತವೆ. ಆದರೆ ಈ ವಿಶೇಷ ವೈಶಿಷ್ಟ್ಯದ ಬಗ್ಗೆ ಮಾಹಿತಿ ಇರುವುದಿಲ್ಲ. ಅತ್ಯಂತ ಸುಲಭ ಮತ್ತು ಸರಳವಾಗಿ ಈ ರೀತಿ ನಾವು ಸಂದೇಶಗಳನ್ನು ಮತ್ತೊಬ್ಬರಿಗೆ ಕಳುಹಿಸಬಹುದಾಗಿದೆ.  

2 /7

ಯಾವುದೇ ಬಳಕೆದಾರರು ಐಒಎಸ್ ಮತ್ತು ಆಂಡ್ರಾಯ್ಡ್‌ನಲ್ಲಿ ಫೋನಿನಲ್ಲಿ ಸೇವ್ ಮಾಡದಿರುವ ನಂಬರ್ ಗಳಿಗೆ ವಾಟ್ಸಾಪ್ ಸಂದೇಶಗಳನ್ನು ಕಳುಹಿಸುವುದು ಹೇಗೆ..?

3 /7

ಮೊದಲು ನಿಮ್ಮ ಯಾವುದೇ ಐಒಎಸ್ ಮತ್ತು ಆಂಡ್ರಾಯ್ಡ್‌ ಫೋನ್ ಬ್ರೌಸರ್ ಓಪನ್ ಮಾಡಿರಿ. ಬಳಿಕ ಈ ಕೆಳಗಿನ ಲಿಂಕ್ ಅನ್ನು ಕಾಪಿ ಮಾಡಿ ಅಡ್ರೆಸ್ ಬಾರ್ ನಲ್ಲಿ ಪೇಸ್ಟ್ ಮಾಡಿ. ಲಿಂಕ್ ಇಲ್ಲಿದೆ ನೋಡಿ: ‘http://wa.me/xxxxxxxxxx’ or ‘http://api.whatsapp.com/send?phone=xxxxxxxxxxx’

4 /7

ಯಾವುದೇ ‘Xxxxxxxxxx’ ಫೋನ್ ನಂಬರ್ ಗೆ ನೀವು ಸಂದೇಶವನ್ನು ಕಳುಹಿಸಬೇಕಾದರೆ ನೀವು ದೇಶದ ಕೋಡ್‌ನೊಂದಿಗೆ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಉದಾ: ನೀವು ಈ ಸಂಖ್ಯೆ +919911111111 ಗೆ ಸಂದೇಶವನ್ನು ಕಳುಹಿಸಲು ಬಯಸಿದರೆ, ನೀವು ಅಡ್ರೆಸ್ ಬಾರ್ ನಲ್ಲಿ http://wa.me/919911111111 ಅನ್ನು ನಮೂದಿಸಬೇಕು. ಇಲ್ಲಿ ನೀಡಲಾದ 91 ಸಂಖ್ಯೆಯು ಭಾರತ ದೇಶದ ಸಂಕೇತವಾಗಿದೆ.

5 /7

ನೀವು ಅಡ್ರೆಸ್ ಬಾರ್ ನಲ್ಲಿ ಲಿಂಕ್ ಹಾಕಿದ ಬಳಿಕ WhatsApp web ಆಪ್ಶನ್ ಕ್ಲಿಕ್ ಮಾಡಿ.  

6 /7

ಬಳಿಕ ನೀವು ನಿಮ್ಮ ಮೊಬೈಲ್ ಸಂಖ್ಯೆಯ WhatsApp web ಪುಟವನ್ನು ತೆರೆಯಿರಿ.

7 /7

ಈಗ ನೀವು ನಂಬರ್ ಸೇವ್ ಮಾಡಿರದ ವ್ಯಕ್ತಿಗೆ ಸುಲಭವಾಗಿ ವಾಟ್ಸಾಪ್ ಸಂದೇಶವನ್ನು ಕಳುಹಿಸಬಹುದು.