ದೇಶದ ಅತಿಉದ್ದದ ಗ್ರೀನ್‌ಫೀಲ್ಡ್ ಎಕ್ಸ್ ಪ್ರೆಸ್ ವೇ ಯೋಜನೆ ಶೀಘ್ರವೇ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ದೇಶದ ಅತಿಉದ್ದದ ಗ್ರೀನ್‌ಫೀಲ್ಡ್ ಎಕ್ಸ್ ಪ್ರೆಸ್ ವೇ ಯೋಜನೆ ಶೀಘ್ರವೇ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ದೆಹಲಿ-ಮುಂಬೈ ಎಕ್ಸ್ ಪ್ರೆಸ್ ವೇ ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ವಾಣಿಜ್ಯ ನಗರಿ ಮುಂಬೈ ನಡುವೆ ಸಂಪರ್ಕ ಕಲ್ಪಿಸಲಿದೆ. ಎಲ್ಲಾ ಅಡೆತಡೆಗಳ ನಡುವೆ ಶೀಘ್ರವೇ ಈ ಯೋಜನೆ ಪೂರ್ಣಗೊಳ್ಳುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಗೆ ತಿಳಿಸಿದ್ದಾರೆ.
ದೇಶದ 2 ಆರ್ಥಿಕ ಹಬ್‌ಗಳನ್ನು ಜೋಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ದೆಹಲಿ-ಮುಂಬೈ ಎಕ್ಸ್ ಪ್ರೆಸ್ ಹೆದ್ದಾರಿ(Delhi-Mumbai Expressway) ಯೋಜನೆ ರೂಪಿಸಿದ್ದು, ಇದು 2 ನಗರಗಳ ನಡುವಿನ ಪ್ರಯಾಣದ ಸಮಯವನ್ನು 24 ಗಂಟೆಯಿಂದ 12 ಗಂಟೆಗೆ ತಗ್ಗಿಸಲಿದೆ. ಈ ಯೋಜನೆಯ ಬಗೆಗಿನ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ದೇಶದ ಅತಿದೊಡ್ಡ ಯೋಜನೆಯು 90 ಸಾವಿರ ಕೋಟಿ ರೂ.ಗಳ ಬಜೆಟ್ ಹೊಂದಿದ್ದು, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರದ 5 ರಾಜ್ಯಗಳನ್ನು ಸಂಪರ್ಕಿಸುತ್ತದೆ. ವನ್ಯಜೀವಿ ಅಭಯಾರಣ್ಯಗಳ ಮೂಲಕ ಚಲಿಸುವ ಪ್ರಾಣಿಗಳ ಓವರ್‌ಪಾಸ್‌ಗಳನ್ನು ಹೊಂದಿರುವ ಏಷ್ಯಾದ ಮೊದಲ ಎಕ್ಸ್ ಪ್ರೆಸ್‌ವೇ ಇದಾಗಿದೆ.
ದೇಶದ ಅತಿಉದ್ದದ ಗ್ರೀನ್‌ಫೀಲ್ಡ್ ಎಕ್ಸ್ ಪ್ರೆಸ್ ವೇ ಯೋಜನೆ ಶೀಘ್ರವೇ ಪೂರ್ಣಗೊಳ್ಳಲಿದೆ. ಈ ಯೋಜನೆಯ ಗುಣಮಟ್ಟದ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ನೀತಿ ಮಾರ್ಗಸೂಚಿಗಳನ್ನು ನವೀಕರಿಸುವುದು ಸೇರಿ ಇನ್ನುಳಿದ ನಿರ್ದೇಶನಗಳನ್ನು ಪರಿಶೀಲಿಸಲು ಗುಣಮಟ್ಟದ ನಿಯಂತ್ರಣ ವಲಯ ಸ್ಥಾಪಿಸಲಾಗಿದೆ ಎಂದು ಗಡ್ಕರಿ ಹೇಳಿದ್ದಾರೆ. ಹಸಿರು ಇಂಧನ ಕೇಂದ್ರ ಸ್ಥಾಪಿಸುವುದರ ಹೊರತಾಗಿಯೂ ಎಕ್ಸ್ ಪ್ರೆಸ್ ವೇಯ ಎರಡೂ ಬದಿಗಳಲ್ಲಿ ಪ್ರತಿ 50 ಕಿ.ಮೀ ಅಂತರದಲ್ಲಿ ಯೋಜಿತ ರೀತಿಯಲ್ಲಿ ಎಲ್ಲಾ ರೀತಿಯ ಸೌಲಭ್ಯ ಕೇಂದ್ರಗಳನ್ನು ತೆರೆಯಲಾಗುತ್ತದೆ.
ಎರಡು ಪ್ರಮುಖ ಜನನಿಬಿಡ ಮಾರ್ಗಗಳನ್ನು ಸಂಪರ್ಕಿಸುವ ಈ ರಸ್ತೆಯು ನಗರ ಮತ್ತು ಹೆದ್ದಾರಿ ಸಂಚಾರವನ್ನು ವಿಭಜಿಸಲಿದೆ. ಇದರಿಂದ ಟ್ರಾಫಿಕ್ ಜಾಮ್ ಗೆ ಮುಕ್ತಿ ಸಿಗಲಿದ್ದು, ಪ್ರಯಾಣದ ಸಮಯವೂ ಅರ್ಧಕ್ಕೆ ಇಳಿಯುತ್ತದೆ.
2020-21ರಲ್ಲಿ ದೇಶದಲ್ಲಿ ದಿನಕ್ಕೆ 36.5 ಕಿ.ಮೀ ಹೆದ್ದಾರಿ ನಿರ್ಮಾಣವಾಗುತ್ತಿದೆ. ಇದು ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದಲ್ಲಿ ಅತ್ಯಂತ ವೇಗವಾಗಿ ನಡೆಸಿರುವ ಕಾಮಗಾರಿಯ ದಾಖಲೆಯಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ದೆಹಲಿ-ಮುಂಬೈ ಎಕ್ಸ್ ಪ್ರೆಸ್ ಹೆದ್ದಾರಿಯ ಒಟ್ಟು ಉದ್ದದಲ್ಲಿ 350 ಕಿ.ಮೀ ಈಗಾಗಲೇ ನಿರ್ಮಿಸಲಾಗಿದ್ದು, 825 ಕಿ.ಮೀ ನಿರ್ಮಾಣದ ಕಾರ್ಯಗಳು ಪ್ರಗತಿಯಲ್ಲಿವೆ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ದೆಹಲಿ ಮತ್ತು ಮುಂಬೈ ಸಂಪರ್ಕಿಸುವ ಈ ಗ್ರೀನ್‌ಫೀಲ್ಡ್ ಎಕ್ಸ್ ಪ್ರೆಸ್ ವೇ 8 ಪಥಗಳಿಂದ ಕೂಡಿದ್ದು, ಪೂರ್ವ-ಪಶ್ಚಿಮ ಕಾರಿಡಾರ್‌ನ ಒಂದು ಭಾಗವಾಗಿದೆ. 2023ರ ಜನವರಿ ವೇಳೆಗೆ ದೆಹಲಿ-ಮುಂಬೈ ಎಕ್ಸ್ ಪ್ರೆಸ್‌ವೇಯ ಸಂಪೂರ್ಣ ಕಾರಿಡಾರ್ ಅನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ. ಪೂರ್ಣಗೊಂಡ ಬಳಿಕ 1,350 ಕಿ.ಮೀ ಎಕ್ಸ್ ಪ್ರೆಸ್ ಹೆದ್ದಾರಿ ಆಗಲಿದ್ದು, ಇದು ದೇಶದ ಅತಿ ಉದ್ದದ ಎಕ್ಸ್ ಪ್ರೆಸ್ ಹೆದ್ದಾರಿಯಾಗಲಿದೆ.