Healthy Lifestyle: ಆರೋಗ್ಯಕರ ಜೀವನಶೈಲಿಗೆ ಈ ಸಿಂಪಲ್‌ ಸಲಹೆಗಳನ್ನು ಪಾಲಿಸಿರಿ

Tips for a Healthy Lifestyle: ಸ್ಟ್ರಾಬೆರಿಯಲ್ಲಿ ನಾರಿನಂಶ ಹೇರಳವಾಗಿದೆ. ಇದರಿಂದ ಇದನ್ನು ಸೇವಿಸಿದ ತಕ್ಷಣ ಗ್ಲೂಕೋಸ ಆಗಿ ಪರಿವರ್ತನೆಯಾಗಿ ರಕ್ತಕ್ಕೆ ಬಿಡುಗಡೆಯಾಗುವ ಪ್ರಕ್ರಿಯೆ ನಿಧಾನವಾಗುತ್ತದೆ. ಹೀಗಾಗಿ ರಕ್ತದಲ್ಲಿನ ಸಕ್ಕರೆಯಂಶದ ಏರಿಳಿತ ಆಗದಂತೆ ಕಾಪಾಡಿಕೊಳ್ಳಬಹುದು. 

Tips for a Healthy Lifestyle: ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಅನೇಕರು ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಒತ್ತಡಮಯ ಜೀವನಶೈಲಿಯಿಂದ ಇಂದು ಅನೇಕರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. Health Is Wealth ಅನ್ನೋ ರೀತಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಪ್ರತಿಯೊಬ್ಬರು ಆರೋಗ್ಯಕ ಜೀವನಶೈಲಿ ಹೊಂದಲು ಕೆಲವು ಸರಳ ಸಲಹೆಗಳನ್ನು ಪಾಲಿಸಬೇಕು. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮಲಗುವ ಮೊದಲು ನೀರು ಕುಡಿಯಿರಿ. ಇದರಿಂದ ಇಡಿ ರಾತ್ರಿ ದೇಹದ ಚಯಾಪಚಯ ಕ್ರಿಯೆಗೆ ಬೇಕಾದ ನೀರು ಸಿಗುತ್ತದೆ. ಇದಲ್ಲದೆ ಹೃದಯಾಘಾತದಂತಹ ಅಪಾಯವೂ ತಪ್ಪುವ ಸಾಧ್ಯತೆಗಳಿವೆ.

2 /5

ನಾರಿನಂಶ ಹೆಚ್ಚಿರುವ ಒಣದ್ರಾಕ್ಷಿ ತಿನ್ನುವುದರಿಂದ ಪಚನಾಂಗಗಳ ಮೇಲೆ ಪೂರಕ ಪರಿಣಾಮ ಉಂಟಾಗುತ್ತದೆ. ನೆನೆಸಿದ ಕಪ್ಪುದ್ರಾಕ್ಷಿಯು ಮಲಬದ್ಧತೆಯನ್ನು ನಿವಾರಿಸಿ, ಹೊಟ್ಟೆಯನ್ನು ಶುದ್ಧವಾಗಿಡುತ್ತದೆ. ಅಸಿಡಿಟಿಯನ್ನು ದೂರ ಮಾಡಿ, ಹೊಟ್ಟೆಯ ತೊಂದರೆಗಳನ್ನು ತಹಬದಿಗೆ ತರುತ್ತದೆ.

3 /5

ಬೇಸಿಗೆಯಲ್ಲಿ ಬಿಸಿಯಿಂದಾಗಿ ಪಿತ್ತವು ಅತಿಯಾಗದಂತೆ ದ್ರಾಕ್ಷಿ, ಮಾವು ಸೇವಿಸಬೇಕು. ತಂಪಾಗಿ ಗಾಳಿ ಬೀಸುವ, ನೆರಳಿರುವ, ಉದ್ಯಾನ, ನದಿ ಮುಂತಾದ ಪ್ರದೇಶಗಳ ವಿವಾಹ, ಮಾನಸಿಕ ಉಲ್ಲಾಸ, ಬದುಕಿನಲ್ಲಿ ಉತ್ಸಾಹ ತುಂಬುವ ಚಟುವಟಿಕೆಗಳು ವಸಂತದಲ್ಲಿ ಆರೋಗ್ಯವನ್ನು ಕಾಪಾಡುತ್ತವೆ. 

4 /5

ಮೆಗ್ನೀಶಿಯಂ ಮತ್ತು ಸತುವಿನ ಕೊರತೆಯು ಮಾನಸಿಕ ಒತ್ತಡವನ್ನು ಹೆಚ್ಚಿಸಬಲ್ಲದು. ಈ ಕೊರತೆಯನ್ನು ಸುಲಭವಾಗಿ ನೀಗಿಸುವುದು ಬೀಜಗಳು. ಗೋಡಂಬಿಯಲ್ಲಿ ಅಧಿಕ ಪ್ರಮಾಣದಲ್ಲಿ ಜಿಂಕ್‌ ಅಂಶವಿದೆ. ಕುಂಬಳಕಾಯಿ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಗ್ನೀಶಿಯಂ ಅಂಶವಿದೆ. ಹೀಗಾಗಿ ಹಲವು ರೀತಿಯ ಬೀಜಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಒತ್ತಡ ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. 

5 /5

ಸ್ಟ್ರಾಬೆರಿಯಲ್ಲಿ ನಾರಿನಂಶ ಹೇರಳವಾಗಿದೆ. ಇದರಿಂದ ಇದನ್ನು ಸೇವಿಸಿದ ತಕ್ಷಣ ಗ್ಲೂಕೋಸ ಆಗಿ ಪರಿವರ್ತನೆಯಾಗಿ ರಕ್ತಕ್ಕೆ ಬಿಡುಗಡೆಯಾಗುವ ಪ್ರಕ್ರಿಯೆ ನಿಧಾನವಾಗುತ್ತದೆ. ಹೀಗಾಗಿ ರಕ್ತದಲ್ಲಿನ ಸಕ್ಕರೆಯಂಶದ ಏರಿಳಿತ ಆಗದಂತೆ ಕಾಪಾಡಿಕೊಳ್ಳಬಹುದು.