ಇಂದಿನಿಂದ ಈ ರಾಶಿಯವರ ಏಳಿಗೆ ಆರಂಭ ! ತಿಜೋರಿ ತುಂಬುತ್ತಾನೆ ಬುಧ

Budh Margi 2023 effect : ಗ್ರಹಗಳ ಜಗತ್ತಿನಲ್ಲಿ, ಬುಧ ಗ್ರಹವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಅವನು ಗಣಿತ, ತರ್ಕ, ಸಂಭಾಷಣೆ, ವ್ಯವಹಾರದ ಅಂಶ. 

ಬೆಂಗಳೂರು : ಮೇ 15 ರಂದು ಅಂದರೆ ಇಂದು ರಾತ್ರಿ  8.30 ಕ್ಕೆ ಬುಧ  ಮೇಷ ರಾಶಿಯಲ್ಲಿ ನೇರ ನಡೆಗೆ ಮರಳುತ್ತಾನೆ. ಇದರರ್ಥ 5 ರಾಶಿಯವರ ಅದೃಷ್ಟ ಈ ಕ್ಷಣದಿಂದ ಬದಲಾಗುತ್ತದೆ. ಬುಧ ಸಂಕ್ರಮಣದಿಂದಾಗಿ, ಈ ರಾಶಿಯವರ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ.  ನಿಂತು ಹೋಗಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ.   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮಿಥುನ ರಾಶಿ : ಈ ರಾಶಿಯ ಸಂಕ್ರಮಣದ ಜಾತಕದ 11 ನೇ ಮನೆಯಲ್ಲಿ ಬುಧ ನೇರ ನಡೆ ಆರಂಭಿಸುತ್ತಾನೆ. ಇದರಿಂದ ಉದ್ಯೋಗಸ್ಥರ ವೃತ್ತಿಜೀವನದಲ್ಲಿ ಯಶಸ್ಸು ಉತ್ತುಂಗಕ್ಕೆ ಏರಲಿದೆ. ದೊಡ್ಡ ಮಟ್ಟದ ಅಧಿಕಾರಿಗಳನ್ನು ಭೇಟಿಯಾಗುವ ಅವಕಾಶ ಸಿಗುವುದು. ಇದರಿಂದ ಭವಿಷ್ಯದಲ್ಲಿ ಪ್ರಯೋಜನವಾಗಲಿದೆ. ಬೋನಸ್ ಮತ್ತು ವೇತನದಲ್ಲಿ ಹೆಚ್ಚ್ಳವಾಗುವುದು. ಆರ್ಥಿಕ ಸ್ಥಿತಿ ಸದೃಢವಾಗಿರುತ್ತದೆ.  

2 /5

ಸಿಂಹ ರಾಶಿ : ಮೇಷ ರಾಶಿಯಲ್ಲಿ ಬುಧ ಸಂಕ್ರಮಣದ ಲಾಭ ಸಿಂಹ ರಾಶಿಯವರಿಗೆ ಕೂಡಾ ಆಗಲಿದೆ. ಬುಧನು ಈ ರಾಶಿಯ 9 ನೇ ಮನೆಯಲ್ಲಿ ನೇರ ನಡೆಗೆ ಮರಳುತ್ತಾನೆ. ಇದರಿಂದ ನಿಮ್ಮ ಆರ್ಥಿಕ ಸ್ಥಾನಮಾನ ಹೆಚ್ಚುತ್ತದೆ. ವ್ಯಾಪಾರದಲ್ಲಿ ಲಾಭವಾಗುವುದು. ವಿದೇಶದಲ್ಲಿ ಉದ್ಯೋಗ ಪಡೆಯುವ ಸಾಧ್ಯತೆಗಳಿವೆ.

3 /5

ಕಟಕ ರಾಶಿ : ಕರ್ಕಾಟಕ ರಾಶಿಯ 10ನೇ ಮನೆಯಲ್ಲಿ ಬುಧ ನೇರ ನಡೆಗೆ ಮರಳುತ್ತಾನೆ. ಇದರಿಂದಾಗಿ ಈ ರಾಶಿಯವರ ಒಳ್ಳೆಯ ದಿನಗಳು  ಆರಂಭವಾಗಲಿವೆ. ಹಿರಿಯ ಅಧಿಕಾರಿಗಳು ನಿಮ್ಮ ಕೆಲಸದಿಂದ ಸಂತೋಷಪಡುತ್ತಾರೆ. ನಿಮ್ಮ ಕೆಲಸಕ್ಕೆ ಮನ್ನಣೆ, ಪ್ರಶಂಸೆ ಸಿಗುತ್ತದೆ.  ವೃತ್ತಿಜೀವನದಲ್ಲಿ ಮುಂದುವರಿಯಲು ಉದ್ಯೋಗಗಳನ್ನು ಬದಲಾಯಿಸುವ ಬಗ್ಗೆ ಯೋಚಿಸಬಹುದು. ಬೇರೆ ದೇಶದಲ್ಲಿ ಉದ್ಯೋಗ ಮಾಡುವ ಅವಕಾಶ ಸಿಗುತ್ತದೆ. 

4 /5

ಕನ್ಯಾರಾಶಿ :8ನೇ ಮನೆಯಲ್ಲಿ ಬುಧ ಸಂಕ್ರಮಣದಿಂದ ಪೂರ್ವಿಕರ ಆಸ್ತಿ ದೊರೆಯಲಿದೆ. ಹೊಸ ಉದ್ಯೋಗವನ್ನು ಪಡೆಯಬಹುದು ಅಥವಾ ಬಡ್ತಿ ಪಡೆಯಬಹುದು.  ಕೈ ಸೇರದೇ ಉಳಿದಿರುವ ಹಣ ಮತ್ತೆ ನಿಮ್ಮ ಕೈ ಸೇರುವುದು.  

5 /5

ಧನು ರಾಶಿ : ಧನು ರಾಶಿಯವರಿಗೆ ಬುಧನ ನಡೆಯಲ್ಲಿನ ಬದಲಾವಣೆ  ಫಲಪ್ರದವಾಗುತ್ತದೆ. ಈ ಅವಧಿಯಲ್ಲಿ ನಿಮಗೆ ಸಿಗುವ ಎಲ್ಲಾ ಜವಾಬ್ದಾರಿಗಳನ್ನು ಅದ್ಭುತವಾಗಿ ನಿಭಾಯಿಸುತ್ತೀರಿ. ನಿಮ್ಮ ಸಂಕ್ರಮಣ ಜಾತಕದಲ್ಲಿ ಬುಧನು 5 ನೇ ಮನೆಯಲ್ಲಿ ಸಂಚಾರ ಮಾಡುತ್ತಿರುವುದರಿಂದ, ಬುದ್ಧಿವಂತಿಕೆಯಿಂದ ಕೆಲಸ ಮಾಡುತ್ತೀರಿ. ವ್ಯವಹಾರದ ವಿಷಯದಲ್ಲಿ ಪ್ರಭಾವಿ ವ್ಯಕ್ತಿಗಳನ್ನು ಭೇಟಿಯಾಗಬಹುದು. ಆದರೆ ನಾಲಿಗೆಯನ್ನು ನಿಯಂತ್ರಿಸುವುದು ಅವಶ್ಯಕ.  (ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)