ಈ ಆಫರ್ ನಲ್ಲಿ ನೀವು ಅರ್ಧಕ್ಕಿಂತ ಕಡಿಮೆ ಬೆಲೆಗೆ ಉತ್ತಮ 5G ಸ್ಮಾರ್ಟ್ಫೋನ್ಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತದೆ.
ಫ್ಲಿಪ್ಕಾರ್ಟ್ನಲ್ಲಿ ಬಿಗ್ ಸೇವಿಂಗ್ ಡೇಸ್(Flipkart Big Saving Days) ಮಾರಾಟ ನಡೆಯುತ್ತಿದೆ. ಇಲ್ಲಿ ನೀವು ಎಲ್ಲಾ ರೀತಿಯ ಉತ್ಪನ್ನಗಳನ್ನು ಅಗ್ಗವಾಗಿ ಖರೀದಿಸಬಹುದು. ಇಂದು ನಾವು ಕೆಲವು ಉತ್ತಮ ಸ್ಮಾರ್ಟ್ಫೋನ್ ಕೊಡುಗೆಗಳ ಬಗ್ಗೆ ಇಲ್ಲಿ ಮಾಹಿತಿ ನೀಡುತ್ತಿದ್ದೇವೆ. ಈ ಆಫರ್ ನಲ್ಲಿ ನೀವು ಅರ್ಧಕ್ಕಿಂತ ಕಡಿಮೆ ಬೆಲೆಗೆ ಉತ್ತಮ 5G ಸ್ಮಾರ್ಟ್ಫೋನ್ಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಇತ್ತೀಚೆಗೆ ಬಿಡುಗಡೆಯಾದ Vivoನ 5G ಸ್ಮಾರ್ಟ್ಫೋನ್ ಮೇಲೆ ಫ್ಲಿಪ್ಕಾರ್ಟ್ ನಲ್ಲಿ ಶೇ.20ರಷ್ಟು ರಿಯಾಯಿತಿ ಸಿಗುತ್ತಿದೆ. 19,990 ರೂ. ಮೂಲಬೆಲೆಯ ಈ ಫೋನ್ ಅನ್ನು ನೀವು 15,990 ರೂ.ಗೆ ಖರೀದಿಸಬಹುದು. ಎಕ್ಸ್ಚೇಂಜ್ ಆಫರ್ನ ಸಂಪೂರ್ಣ ಪ್ರಯೋಜನ ಪಡೆದುಕೊಂಡರೆ 13 ಸಾವಿರ ರೂ. ವರೆಗೆ ಉಳಿಸಬಹುದು. SBI ಕ್ರೆಡಿಟ್ ಕಾರ್ಡ್ ಬಳಸುವ ಮೂಲಕ ನೀವು 1,000 ರೂ. ಉಳಿಸಲು ಸಾಧ್ಯವಾಗುತ್ತದೆ. ಈ ರೀತಿ ನೀವು Vivo T1 5G ಫೋನ್ ಅನ್ನು ಕೇವಲ 1,990 ರೂ.ಗೆ ಖರೀದಿಸಬಹುದು.
ರಿಯಲ್ ಮಿಯ 128GB ಸ್ಟೋರೇಜ್ ಹೊಂದಿರುವ ಈ 5G ಸ್ಮಾರ್ಟ್ಫೋನ್ ಅನ್ನು ಫ್ಲಿಪ್ಕಾರ್ಟ್ನಲ್ಲಿ 20,999 ರೂ. ಬದಲಿಗೆ 17,499 ರೂ.ಗೆ ಖರೀದಿಸಬಹುದು. ಎಸ್ಬಿಐ ಕ್ರೆಡಿಟ್ ಕಾರ್ಡ್ ಬಳಸುವ ಮೂಲಕ ನೀವು 1,500 ರೂ. ಉಳಿಸಬಹುದು ಮತ್ತು ಎಕ್ಸ್ಚೇಂಜ್ ಆಫರ್ನ ಸಂಪೂರ್ಣ ಪ್ರಯೋಜನ ಪಡೆದರೆ 13 ಸಾವಿರ ರೂ.ವರೆಗೆ ಉಳಿಸಬಹುದು. ಇವೆಲ್ಲಾ ಪ್ರಯೋಜನಗಳನ್ನು ಪಡೆದುಕೊಂಡರೆ ನೀವು 2,999 ರೂ.ಗಳಿಗೆ Realme 9 5G ಫೋನ್ ಖರೀದಿಸಬಹುದು.
16,999 ರೂ. ಬೆಲೆಯ Pocoನ 5G ಫೋನ್ ಅನ್ನು ಫ್ಲಿಪ್ಕಾರ್ಟ್ನಿಂದ 14,999 ರೂ.ಗೆ ಖರೀದಿಸಬಹುದು. ಎಕ್ಸ್ಚೇಂಜ್ ಆಫರ್ನ ಸಂಪೂರ್ಣ ಪ್ರಯೋಜನ ಪಡೆಯುವ ಮೂಲಕ ನೀವು 13 ಸಾವಿರ ರೂ. ರಿಯಾಯಿತಿ ಪಡೆಯಬಹುದು. ಎಸ್ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಮತ್ತೆ 1 ಸಾವಿರ ರೂ. ಉಳಿಸಬಹುದು. ಆಗ ಈ 5G ಫೋನ್ನ ಬೆಲೆ 999 ರೂ. ಆಗಲಿದೆ.
Redmiಯ ಈ 5G ಸ್ಮಾರ್ಟ್ಫೋನ್ ಅನ್ನು ಫ್ಲಿಪ್ಕಾರ್ಟ್ನಲ್ಲಿ 15,999 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಆದರೆ ಇದರ ಮೂಲ ಬೆಲೆ 18,999 ರೂ. ಆಗಿದೆ. ನೀವು ಯಾವುದೇ ಬ್ಯಾಂಕಿನ ಕಾರ್ಡ್ಗಳಿಂದ ಪಾವತಿಸಿದರೆ 500 ರೂ.ಗಳ ರಿಯಾಯಿತಿ ಪಡೆಯುತ್ತೀರಿ. SBI ಕಾರ್ಡ್ ಬಳಸಿದರೆ ನಿಮಗೆ 1 ಸಾವಿರ ರೂ.ಗಳ ರಿಯಾಯಿತಿ ಸಿಗುತ್ತದೆ. ಎಕ್ಸ್ಚೇಂಜ್ ಆಫರ್ನ ಸಂಪೂರ್ಣ ಪ್ರಯೋಜನ ಪಡೆದ ಮೇಲೆ 13 ಸಾವಿರ ರೂ.ವರೆಗೆ ಉಳಿಸಬಹುದು. ಈ ಎಲ್ಲಾ ಪ್ರಯೋಜನ ಪಡೆದುಕೊಂಡರೆ ಕೇವಲ 1,499 ರೂ.ಗೆ ಈ ಫೋನ್ ಖರೀದಿಸಬಹುದು.
Motorolaದ ಈ 5G ಸ್ಮಾರ್ಟ್ಫೋನ್ ಅನ್ನು 17,999 ರೂ.ಗಳ ಬದಲಿಗೆ 14,999 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಎಸ್ಬಿಐ ಕ್ರೆಡಿಟ್ ಕಾರ್ಡ್ಮೂಲಕ ಪಾವತಿಸಿದರೆ ನೀವು 750 ರೂ. ಉಳಿಸಲು ಸಾಧ್ಯವಾಗುತ್ತದೆ. ಎಕ್ಸ್ಚೇಂಜ್ ಆಫರ್ನ ಸಂಪೂರ್ಣ ಪ್ರಯೋಜನ ಪಡೆಯುವ ಮೂಲಕ ನೀವು 13 ಸಾವಿರ ರೂ. ರಿಯಾಯಿತಿ ಪಡೆಯಬಹುದು. ಆಗ ನಿಮಗೆ ಈ ಫೋನ್ ಕೇವಲ 1,249 ರೂ.ಗೆ ಸಿಗುತ್ತದೆ.