Money Tips: ನಿತ್ಯ ಬೆಳಗ್ಗೆ ಎದ್ದು ಈ 5 ಕೆಲಸ ಮಾಡಿ, ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ !

Astrology Tips For Money - ಧರ್ಮಶಾಸ್ತ್ರಗಳಲ್ಲಿ ತಾಯಿ ಲಕ್ಷ್ಮಿಯನ್ನು (Goddess Lakshmi) ಐಶ್ವರ್ಯದ ದೇವಿ ಎಂದು ಹೇಳಲಾಗಿದೆ. ದೇವಿ ಲಕ್ಷ್ಮಿಯ ಕೃಪೆ ಇದ್ದರೆ, ವ್ಯಕ್ತಿಯ ಜೀವನದಲ್ಲಿ ಹಣಕಾಸಿನ ಕೊರತೆ ಇರುವುದಿಲ್ಲ ಎನ್ನಲಾಗುತ್ತದೆ. 

Astrology Tips For Money - ಧರ್ಮಶಾಸ್ತ್ರಗಳಲ್ಲಿ ತಾಯಿ ಲಕ್ಷ್ಮಿಯನ್ನು (Goddess Lakshmi) ಐಶ್ವರ್ಯದ ದೇವಿ ಎಂದು ಹೇಳಲಾಗಿದೆ. ದೇವಿ ಲಕ್ಷ್ಮಿಯ ಕೃಪೆ ಇದ್ದರೆ, ವ್ಯಕ್ತಿಯ ಜೀವನದಲ್ಲಿ ಹಣಕಾಸಿನ ಕೊರತೆ ಇರುವುದಿಲ್ಲ ಎನ್ನಲಾಗುತ್ತದೆ. ಇದೇ ಕಾರಣದಿಂದ ಪ್ರತಿಯೊಬ್ಬ ವ್ಯಕ್ತಿ ಜೀವನದಲ್ಲಿ ತಾಯಿ ಲಕ್ಷ್ಮಿಯ ಕೃಪೆಗೆ (Goddess Lakshmi Blessings) ಪಾತ್ರರಾಗಲು ಬಯಸುತ್ತಾನೆ. ಶಾಸ್ತ್ರಗಳ ಪ್ರಕಾರ, ನಿತ್ಯ ಬೆಳಗ್ಗೆ ಎದ್ದು ಕೆಲ ಕೆಲಸಗಳನ್ನು ಮಾಡುವುದರಿಂದ ತಾಯಿ ಲಕ್ಷ್ಮಿಯ ವಿಶೇಷ ಕೃಪೆ (Goddess Lakshmi Remedy) ಲಭಿಸುತ್ತದೆ ಎನ್ನಲಾಗಿದೆ. ಹಾಗಾದರೆ ಬನ್ನಿ ಆ ಕೆಲಸಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.

 

ಇದನ್ನೂ ಓದಿ-Health Tips: ಪುರುಷರ ಈ ಸಮಸ್ಯೆಗಳಿಗೆ ಅರಿಶಿನ ಮತ್ತು ಜೇನುತುಪ್ಪ ರಾಮಬಾಣ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಮನೆಯಲ್ಲಿ ತುಳಸಿಯ ಸಸ್ಯ - ಮನೆಯಲ್ಲಿನ ತುಳಸಿ ಗಿಡ ದೇವಿ ಲಕ್ಷ್ಮಿಗೆ ಸಂಬಂಧಿಸಿದೆ. ಇಂತಹ ಪರಿಸ್ಥಿತಿಯಲ್ಲಿ ತುಳಸಿ ಗಿಡವನ್ನು ಮನೆಯಲ್ಲಿ ಕಡ್ಡಾಯವಾಗಿ ನೆಡಬೇಕು. ಇದರೊಂದಿಗೆ ಬೆಳಗ್ಗೆ ಸ್ನಾನದ ನಂತರ ತುಳಸಿಗೆ ನೀರುಣಿಸಬೇಕು. ಬೆಳಗ್ಗೆ ತುಳಸಿಗೆ ನೀರುಣಿಸುವುದರಿಂದ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ.  

2 /5

2. ಸೂರ್ಯನಿಗೆ ಅರ್ಘ್ಯ ಅರ್ಪಿಸಿ - ಬೆಳಗ್ಗೆ ಸ್ನಾನ ಮಾಡಿದ ತಕ್ಷಣ ತಾಮ್ರದ ಪಾತ್ರೆಯಲ್ಲಿ ಜಲ, ಕುಂಕುಮ ಹಾಗೂ ಗುಲಾಬಿ ಹೂವಿನ ಕೆಲ ದಳಗಳನ್ನು ಬೆರೆಸಿ, ಸೂರ್ಯನಿಗೆ ಅರ್ಘ್ಯ ನೀಡಬೇಕು. ಈ ಕೆಲಸ ಮಾಡುವುದರಿಂದ ಜೀವನದಲ್ಲಿ ಸೂರ್ಯ ದೇವನ ಕೃಪೆಯ ಜೊತೆಗೆ ದೇವಿ ಲಕ್ಷ್ಮಿಯ ಕೃಪೆ ಕೂಡ ಪ್ರಾಪ್ತಿಯಾಗುತ್ತದೆ.   

3 /5

3. ಮನೆಯ ಮುಖ್ಯ ದ್ವಾರದಲ್ಲಿ ದೀಪ ಬೆಳಗಿ - ಬೆಳಗ್ಗೆ ಮನೆಯನ್ನು ಸ್ವಚ್ಛಗೊಳಿಸಿ, ಮನೆಯ ಮುಖ್ಯದ್ವಾರದ ಹತ್ತಿರ ದೀಪ ಬೆಳಗಬೇಕು. ಈ ರೀತಿ ಮಾಡುವುದರಿಂದ ಎಲ್ಲ ದೇವಿ-ದೇವತೆಗಳು ಪ್ರಸನ್ನರಾಗುತ್ತಾರೆ. ಇದರಿಂದ ಎಲ್ಲಾ ಕಷ್ಟ ಕಾರ್ಪಣ್ಯಗಳು ನಿವಾರಣೆಯಾಗುತ್ತವೆ.  

4 /5

4. ಪೂಜೆಯ ಬಳಿಕ ಹಣೆಗೆ ತಿಲಕವನ್ನಿಟ್ಟುಕೊಳ್ಳಿ - ನಿತ್ಯ ಬೆಳಗ್ಗೆ ಪೂಜೆಯನ್ನು ನೆರವೇರಿಸಿದ ಬಳಿಕ ಹಣೆಗೆ ತಿಲಕವನ್ನು ಇಟ್ಟುಕೊಳ್ಳಲು ಮರೆಯಬೇಡಿ. ಧರ್ಮ ಶಾಸ್ತ್ರಗಳಲ್ಲಿ ಇದನ್ನು ತುಂಬಾ ಶುಭಕರ ಎಂದು ಪರಿಗಣಿಸಲಾಗಿದೆ. ಈ ರೀತಿ ಮಾಡುವುದರಿಂದ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ ಮತ್ತು ಜೀವನದಲ್ಲಿ ಸುಖ-ಶಾಂತಿ ಪ್ರಾಪ್ತಿಯಾಗುತ್ತದೆ ಎನ್ನಲಾಗಿದೆ.  

5 /5

5. ಉಪ್ಪಿನ ನೀರಿನಿಂದ ನೆಲವನ್ನು ಸ್ವಚ್ಛಗೊಳಿಸಿ - ಮನೆಯ ವಾಸ್ತುದೋಷ ನಿವಾರಣೆಗೆ ಬೆಳಗ್ಗೆ ನೀರಿನಲ್ಲಿ ಉಪ್ಪನ್ನು ಬೆರೆಸಿ, ಆ ನೀರಿನಿಂದ ಮನೆಯ ನೆಲವನ್ನು ಸ್ವಚ್ಛಗೊಳಿಸಿ. ಈ ರೀತಿ ಮಾಡುವುದರಿಂದ ಜೀವನದಲ್ಲಿ ತಾಯಿ ಲಕ್ಷ್ಮಿಯ ಕೃಪೆ ಎಂದೆಂದಿಗೂ ನಿಮ್ಮ ಮೇಲಿರುತ್ತದೆ ಎಂಬ ನಂಬಿಕೆ ಇದೆ. (Disclaimer -  ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)