ದಾಸವಾಳ ಹೂವನ್ನು ಹೀಗೆ ಬಳಸಿದರೆ ಕೂದಲು ಸದೃಢ, ಕಡುಕಪ್ಪಾಗಿ ಮೊನಕಾಲುದ್ದ ಬೆಳೆಯುತ್ತೆ! ಒಂದೇ ವಾರದಲ್ಲಿ ಫಲಿತಾಂಶ!

 hibiscus for Long hair: ಕೂದಲು ಉದುರುವುದು ಅನೇಕ ಜನರು ಎದುರಿಸುತ್ತಿರುವ ಸಮಸ್ಯೆಯಾಗಿದೆ. ಇದರಿಂದ ಅನೇಕ ಜನರು ಬಳಲುತ್ತಿದ್ದಾರೆ. ಆದರೆ ದಾಸವಾಳ ಹೂವು ಈ ಸಮಸ್ಯೆಯನ್ನು ನಿವಾರಿಸುತ್ತದೆ.. ಹಾಗಾದ್ರೆ ಕೂದಲಿಗೆ ಈ ದಾಸವಾಳವನ್ನು ಹೇಗೆ ಬಳಸಬೇಕೆಂಬುದನ್ನು ಇಲ್ಲಿ ತಿಳಿಯಿರಿ.. 

1 /8

ಕೂದಲು ಉದುರುವುದು ಈ ಸಮಸ್ಯೆ ಹೆಚ್ಚಿನವರಿಗೆ ಒಮ್ಮೊಮ್ಮೆ ಮಾತ್ರ ಬರುತ್ತದೆ ಮತ್ತು ಕೆಲವರಿಗೆ ಬೇಸಿಗೆಯಲ್ಲಿ ಹೆಚ್ಚು. ಬಿಸಿಲು, ಮಾಲಿನ್ಯ, ಧೂಳು ಮತ್ತು ಹಾನಿಕಾರಕ ಸೂರ್ಯನ ಕಿರಣಗಳು ಕೂದಲಿನ ಮೇಲೆ ಬಿದ್ದು ಕೂದಲಿನ ಬುಡಕ್ಕೆ ಹಾನಿ ಮಾಡುತ್ತದೆ. ಇದು ಹೆಚ್ಚು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.   

2 /8

ಆರೋಗ್ಯಕರ ಕೂದಲನ್ನು ಹೊಂದಲು.. ಅದನ್ನು ಮೊದಲು ಬೇರುಗಳಿಂದ ಬಲವಾಗಿ ಮಾಡಬೇಕು. ಅದಕ್ಕಾಗಿ ನಾವು ಕೆಲವು ನೈಸರ್ಗಿಕ ಸಲಹೆಗಳನ್ನು ಅನುಸರಿಸಬಹುದು. ಒಂದೇ ಒಂದು ದಾಸವಾಳದ ಹೂವನ್ನು ಹೇಗೆ ಬಳಸಿ ಈ ಸಮಸ್ಯೆಗೆ ಹೇಗೆ ಮುಕ್ತಿ ಪಡೆಯಬಹುದೆಂದು ಇಲ್ಲಿ ತಿಳಿಯೋಣ..   

3 /8

ಕೂದಲಿಗೆ ದಾಸವಾಳವನ್ನು ಬಳಸುವುದು ಹಳೆಯ ಪರಿಹಾರವಾಗಿದೆ. ದಾಸವಾಳದ ಹೂವು ಕೂದಲಿನ ಬೆಳವಣಿಗೆಗೆ ಉಪಯುಕ್ತವಾಗಿದೆ. ದಾಸವಾಳದಲ್ಲಿರುವ ಕೆಲವು ಅಂಶಗಳು ಬೇಸಿಗೆಯಲ್ಲಿ ಕೂದಲನ್ನು ತಂಪಾಗಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.  

4 /8

ದಾಸವಾಳ ಹೂವು ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣದಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದು ಕೂದಲಿಗೆ ಪೋಷಣೆ ನೀಡುತ್ತದೆ. ಇದರಲ್ಲಿ ವಿಟಮಿನ್ ಸಿ ಕೂಡ ಸಮೃದ್ಧವಾಗಿದೆ. ಇದು ಕೂದಲನ್ನು ದಟ್ಟವಾಗಿ ಬೆಳೆಯುವಂತೆ ಮಾಡುತ್ತದೆ..    

5 /8

ಕೂದಲಿಗೆ ದಾಸವಾಳವನ್ನು ಸಾಂಪ್ರದಾಯಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ನೈಸರ್ಗಿಕ ಬಣ್ಣವಾಗಿ ಬಳಸಬಹುದು. ದಾಸವಾಳದ ಹೂಗಳನ್ನು ಸರಿಯಾಗಿ ಬಳಸಿದರೆ ಬಿಳಿ ಕೂದಲು ಕಪ್ಪಾಗುತ್ತದೆ.  

6 /8

ಬಳಸುವ ವಿಧಾನ: 2 ಕಪ್ ನೀರು ಅದಕ್ಕೆ ಒಂದು ಕೆಂಪು ದಾಸವಾಳ ಹೂವಿನ ದಳಗಳನ್ನು ಹಾಕಿ ಕುದಿಸಿ. ಬಳಿಕ ನೀರನ್ನು ತಣ್ಣಗಾಗಿಸಿ. ಸ್ಪ್ರೇ ಬಾಟಲಿಗೆ ಹಾಕಿ ಕೂದಲಿಗೆ ಸಿಂಪಡಿಸಿ.. ಇದರಿಂದ ಕೂದಲು ಕಪ್ಪಾಗುತ್ತದೆ..   

7 /8

ಬಳಸುವ ವಿಧಾನ 2: ಮೊಸರಿನಲ್ಲಿ ದಾಸವಾಗಳದ ಹೂವಿನ ಪೇಸ್ಟ್‌ನ್ನು ಮಿಶ್ರಣಮಾಡಿ ಹಚ್ಚಿಕೊಂಡು, ಒಂದು ಗಂಟೆ ಬಿಟ್ಟು ತೊಳೆಯಿರಿ.. ಇದರಿಂದ ಕೂದಲಿನ ಹಲವಾರು ಸಮಸ್ಯೆಗಳು ವಾಸಿಯಾಗಿ ಕೂದಲು ದಪ್ಪ ಹಾಗೂ ಉದ್ದವಾಗಿ ಬೆಳೆಯುತ್ತೆ..   

8 /8

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)