ನೀವು ತುಂಬಾ ಸಣ್ಣಗಿದ್ದೀರಾ! ತೂಕ ಹೆಚ್ಚಿಸಿಕೊಳ್ಳಲು ಈ ಆಹಾರಗಳನ್ನು ಸೇವಿಸಿ

Weight Gain: ತುಂಬಾ ಸಣ್ಣಗಿದ್ದೀನಿ ಎಂದು ಯೋಚಿಸುತ್ತಿದ್ದಿರಾ ಅಂಥವರಿಗಾಗಿ  ಇಲ್ಲಿದೆ ಮನೆ ಮದ್ದು. 
 

Weight Gain: ದಪ್ಪ ಆದರೆ ಅದು ಸೌಂದರ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದರ ಜೊತೆಗೆ ಸಾಕಷ್ಟು ಬಗೆಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಆದರೆ, ಅದಕ್ಕೆ ವಿರುದ್ಧವಾಗಿ ಸಣ್ಣ ಇದ್ದರೂ ಸಹ ವಿಪರೀತ ದೈಹಿಕ ಆಯಾಸ, ಸುಸ್ತು, ಶಕ್ತಿಹೀನತೆ ಇತ್ಯಾದಿ ಸಮಸ್ಯೆಗಳು ಕಂಡುಬರುತ್ತದೆ. ಹಾಗಾಗಿ ದೇಹದ ಆಯಕಟ್ಟಿನ ತಕ್ಕಂತೆ ಗಾತ್ರ ಮತ್ತು ತೂಕವನ್ನು ಹೊಂದುವುದು ತುಂಬಾ ಅವಶ್ಯಕ.  ಹಾಗಿದ್ದರೆ ತುಂಬಾ ಸಣ್ಣಗಿದ್ದೀನಿ ಎಂದು ಯೋಚಿಸುತ್ತಿದ್ದಿರಾ ಅಂಥವರಿಗಾಗಿ  ಇಲ್ಲಿದೆ ಮನೆ ಮದ್ದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಬಾದಾಮಿ ಹಾಲು: ಬಾದಾಮಿ ಹಾಲಿನ ಜೊತೆ ಹಸಿ ಅಥವಾ ಒಣ ಕರ್ಜೂರ ಮತ್ತು ಒಣದ್ರಾಕ್ಷಿ ಹಾಕಿ ಕುಡಿಯುವುದರಿಂದ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಪೌಷ್ಟಿಕಾಂಶಗಳು ಸಿಗುತ್ತವೆ. ಮಾತ್ರವಲ್ಲ ಇದು ತೂಕ ಹೆಚ್ಚಳಕ್ಕೂ ಸಹಕಾರಿ ಆಗಿದೆ.

2 /6

​ಸಕ್ಕರೆ ಮತ್ತು ಬೆಣ್ಣೆ: ನಿಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ಇನ್ನೊಂದು ಸುಲಭವಾದ ಪರಿಹಾರ ಎಂದರೆ ಬೆಣ್ಣೆ ಜೊತೆ ಸಕ್ಕರೆಯನ್ನು ಮಿಶ್ರಣ ಮಾಡಿ ಸೇವನೆ ಮಾಡಬೇಕು. 

3 /6

ಆಲೂಗಡ್ಡೆ: ನಿಯಮಿತವಾಗಿ ಆಲೂಗಡ್ಡೆ ತಿನ್ನುವ ಅಭ್ಯಾಸ ಇರುವವರಿಗೆ ದೇಹದ ತೂಕ ಬಹಳ ಬೇಗನೆ ಹೆಚ್ಚಾಗುತ್ತದೆ. ಏಕೆಂದರೆ ಇದರಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚಾಗಿದೆ.

4 /6

ಪಿಸ್ತಾ : ಪಿಸ್ತಾ ಬೀಜಗಳಲ್ಲಿ ಕೊಬ್ಬಿನ ಅಂಶ ಮತ್ತು ಕ್ಯಾಲೊರಿ ಅಂಶವಾಗಿ ಹೇರಳವಾಗಿದೆ. ನಿತ್ಯ ಸೀಮಿತ ಪ್ರಮಾಣದಲ್ಲಿ ಪಿಸ್ತಾ ಸೇವಿಸುವುದರಿಂದಲೂ ತೂಕ ಹೆಚ್ಚಿಸಿಕೊಳ್ಳಬಹುದು. 

5 /6

ಒಣದ್ರಾಕ್ಷಿ: ಒಣದ್ರಾಕ್ಷಿಯಲ್ಲಿ ಮ್ಯಾಂಗನೀಸ್, ಮೆಗ್ನೀಷಿಯಂ, ವಿಟಮಿನ್ ಸಮೃದ್ಧವಾಗಿರುವ ಕಾರಣ ನಿಯಮಿತ ದ್ರಾಕ್ಷಿ ಸೇವನೆಯಿಂದ ತೂಕ ಹೆಚ್ಚಿಸಿಕೊಳ್ಳಬಹುದು

6 /6

ಕಡಲೆ ಬೀಜಗಳು ( ಶೇಂಗ ) : ಕಡಲೆ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬಿನ ಅಂಶ ಮತ್ತು ಕ್ಯಾಲೋರಿ ಅಂಶ ಇರುವ ಕಾರಣ, ಬಹಳ ವೇಗವಾಗಿ ನಿಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ಇದು ನೆರವಾಗುತ್ತದೆ. ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.