ವಾಸ್ತು ಶಾಸ್ತ್ರದ ಪ್ರಕಾರ ರಂಗೋಲಿ ಹಾಕಿದರೆ ಲಕ್ಷ್ಮೀ ದೇವಿ ಪ್ರಸನ್ನಳಾಗುತ್ತಾಳೆ. ಲಕ್ಷ್ಮೀ ಪ್ರಸನ್ನಳಾದರೆ ಮನೆಯಲ್ಲಿ ಐಶ್ವರ್ಯ ನೆಲೆಯಾಗುತ್ತದೆ.
Diwali Rangoli : ದೀಪಾವಳಿಯಂದು ಮನೆಯನ್ನು ಸ್ವಚ್ಛಗೊಳಿಸಿದ ನಂತರ ರಂಗೋಲಿಯನ್ನು ಹಾಕಲಾಗುತ್ತದೆ. ಇದರಿಂದ ಲಕ್ಷ್ಮೀ ದೇವಿ ಸಂತುಷ್ಟಳಾಗುತ್ತಾಳೆ ಎಂಬ ನಂಬಿಕೆ ಇದೆ. ವಾಸ್ತು ಶಾಸ್ತ್ರದ ಪ್ರಕಾರ ರಂಗೋಲಿ ಹಾಕಿದರೆ ಲಕ್ಷ್ಮೀ ದೇವಿ ಪ್ರಸನ್ನಳಾಗುತ್ತಾಳೆ. ಲಕ್ಷ್ಮೀ ಪ್ರಸನ್ನಳಾದರೆ ಮನೆಯಲ್ಲಿ ಐಶ್ವರ್ಯ ನೆಲೆಯಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ದೀಪಾವಳಿಯ ದಿನದಂದು ಹಾಕುವ ರಂಗೋಲಿಯನ್ನು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮೀ ದೇವಿತನ್ನು ಸ್ವಾಗತಿಸಲು ಮನೆಯ ಹೊರಗೆ ಮತ್ತು ಒಳಗೆ ರಂಗೋಲಿಯನ್ನು ಬಿಡಿಸಲಾಗುತ್ತದೆ. ದೀಪಾವಳಿಯಂದು ಐಶ್ವರ್ಯ ಮತ್ತು ಅದೃಷ್ಟವನ್ನು ಹೆಚ್ಚಿಸುವ ರಂಗೋಲಿಯನ್ನು ಮನೆಯ ಯಾವ ಮೂಲೆಯಲ್ಲಿಬಿಡಿಸಬೇಕು ? ಅದರ ಧಾರ್ಮಿಕ ಮಹತ್ವವೇನು ಎಂಬುದರ ಕುರಿತು ತಿಳಿಯುವುದು ಮುಖ್ಯ
ರಂಗೋಲಿ ಎಂಬ ಪದವು 'ರಂಗ್' ಮತ್ತು 'ಅವಲ್ಲಿ' ಎಂಬ ಎರಡು ಪದಗಳಿಂದ ರಚಿತವಾಗಿದೆ. ಅಂದರೆ - ಬಣ್ಣಗಳ ಸಾಲು. ಹಬ್ಬದ ಸಲುವಾಗಿ ಮನೆಯ ಒಳಗೆ ಮತ್ತು ಹೊರಗೆ ಹಲವಾರು ರೀತಿಯ ರಂಗೋಲಿಗಳನ್ನು ಹಾಕಲಾಗುತ್ತದೆ. ದೀಪಾವಳಿಯಂದು ಕಮಲದ ವಿನ್ಯಾಸದೊಂದಿಗೆ ರಂಗೋಲಿಯನ್ನು ಬಿಡಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
ರಂಗೋಲಿ ಬಿಡಿಸುವಾಗ ಹಿಟ್ಟು, ಅಕ್ಕಿ, ಅರಿಶಿನ, ಕುಂಕುಮ, ಹೂವುಗಳು ಮತ್ತು ಎಲೆಗಳನ್ನು ಬಳಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.
ಲಕ್ಷ್ಮೀ ದೇವಿಯ ಸ್ಥಾನವೆಂದು ಪರಿಗಣಿಸಲಾದ ಕಮಲದ ರಂಗೋಲಿಯನ್ನು ಹಾಕಿದರೆ ಅವಳು ಶೀಘ್ರದಲ್ಲೇ ಸಂತೋಷಪಡುತ್ತಾಳೆ. ವಾಸ್ತು ಪ್ರಕಾರ ದೀಪಾವಳಿಯ ದಿನದಂದು ಮನೆಯ ಮುಖ್ಯದ್ವಾರದಲ್ಲಿ ರಂಗೋಲಿ ಹಾಕಬೇಕು. ಈ ಸ್ಥಳದಲ್ಲಿ ರಂಗೋಲಿ ಮಾಡಲು ಕೆಂಪು, ಹಳದಿ, ಹಸಿರು, ಗುಲಾಬಿ, ಕಿತ್ತಳೆ ಬಣ್ಣಗಳನ್ನು ಬಳಸಬೇಕು.
ವಾಸ್ತು ಪ್ರಕಾರ, ಈ ಬಣ್ಣಗಳನ್ನು ಬಳಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಬರುತ್ತದೆ. ರಂಗೋಲಿಗೆ ಕಪ್ಪು ಬಣ್ಣವನ್ನು ಬಳಸಬಾರದು. ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)