Sourav Ganguly Love Life: ಕ್ರಿಕೆಟ್ ಮತ್ತು ಬಾಲಿವುಡ್ ಕ್ಷೇತ್ರದ ಸಂಬಂಧ ಇಂದು ಮೊನ್ನೆಯದಲ್ಲ… ಶತಮಾನಗಳಷ್ಟು ಹಳೆಯದು ಎಂದರೂ ತಪ್ಪಾಗಲ್ಲ. ಗ್ಲಾಮರ್ ಲೋಕದ ಸೆಲೆಬ್ರಿಟಿಗಳ ಅಂದಕ್ಕೆ ಮರುಳಾಗಿ ಕೆಲವರು ಮದುವೆಯಾಗಿದ್ದರೆ, ಇನ್ನೂ ಕೆಲವರು ಒಂದಿಷ್ಟು ಕಾಲ ಡೇಟಿಂಗ್ ಮಾಡಿರೋದು ಉಂಟು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಾವಿಂದು ಈ ವರದಿಯಲ್ಲಿ ಒಂದು ವಿಚಿತ್ರ ಪ್ರೇಮ ಕಥೆಯನ್ನು ನಿಮಗೆ ತಿಳಿಸಿಕೊಡಲಿದ್ದೇವೆ. ಈ ಕಹಾನಿ ಸೌರವ್ ಗಂಗೂಲಿ ಅವರಿಗೆ ಸಂಬಂಧಿಸಿದ್ದು.
ಸೌರವ್ ಗಂಗೂಲಿ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದವರು. ಇದರ ಜೊತೆಗೆ ಮದುವೆ ಬಳಿಕವೂ ನಟಿಯ ಜೊತೆ ಡೇಟಿಂಗ್ ಮಾಡಿ, ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಸುದ್ದಿಯಾದವರು.
ಅಂದಹಾಗೆ ಮುಂಬೈನಲ್ಲಿ ನಡೆದ ಸಮಾವೇಶದಲ್ಲಿ ನಗ್ಮಾ ಮತ್ತು ಸೌರವ್ ಮೊದಲು ಭೇಟಿಯಾಗಿದ್ದರು. ಇವರಿಬ್ಬರ ಗೆಳೆತನ ಶುರುವಾಗಿ ನಂತರ ಪ್ರೀತಿ ಅರಳಿತು. ವರದಿಗಳ ಪ್ರಕಾರ, ಇಬ್ಬರೂ ಸುಮಾರು 2 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದಾರೆ. ಆದರೆ ಸೌರವ್ ಜೊತೆ ಮದುವೆ ಬಗ್ಗೆ ಯಾವಾಗ ಮಾತನಾಡಿದರೋ.. ಆ ಸಂದರ್ಭದಿಂದ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ.
ಅಷ್ಟಕ್ಕೂ ನಗ್ಮಾಳನ್ನು ಮದುವೆಯಾಗಲು ಸೌರವ್ ಮದುವೆಯಾಗಲು ನಿರಾಕರಿಸಿದ್ದು ಏಕೆಂದರೆ, ಅದಾಗಲೇ ಅವರು ಡೋನಾ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ನಗ್ಮಾರನ್ನು ಪ್ರೀತಿಸಿದ ಕೆಲ ಸಮಯದ ಬಳಿಕ ಸೌರವ್ ಒಮ್ಮೆ ಡೋನಾಗೆ ವಿಚ್ಛೇದನ ನೀಡಲು ಕೂಡ ನಿರ್ಧರಿಸಿದ್ದರಂತೆ. ಆದರೆ ಇದೆಲ್ಲವೂ ಅವರ ಕ್ರಿಕೆಟರ್ ವೃತ್ತಿಜೀವನದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿತು.
ತನ್ನ ವೃತ್ತಿಜೀವನದಲ್ಲಿ ವಿವಾದಗಳು ಹುಟ್ಟಿಕೊಂಡಾಗ, ಸೌರವ್ ನಗ್ಮಾದಿಂದ ದೂರವಾಗಬೇಕಾಯಿತು. ಅಂತೆಯೇ 2001 ರಲ್ಲಿ ಇಬ್ಬರೂ ಬೇರ್ಪಟ್ಟರು.
ನಗ್ಮಾ ತಮ್ಮ ಚಿತ್ರರಂಗದಲ್ಲಿ ಲವ್ ಬರ್ಡ್ಸ್, ಕಿಂಗ್ ಅಂಕಲ್, ಯಲ್ಗಾರ್, ಚಲ್ ಮೇರೆ ಭಾಯ್, ಕುನ್ವಾರ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
DNA ವರದಿಯ ಪ್ರಕಾರ, ಡೋನಾ, ತನ್ನ ಪತಿಯ ಡೇಟಿಂಗ್ ವಿಚಾರ ತಿಳಿದಾಗ ಸೌರವ್’ಗೆ ವಿಚ್ಚೇದನ ನೀಡಲು ಮುಂದಾಗಿದ್ದರಂತೆ. ಬಳಿಕ ತಪ್ಪನ್ನು ಸರಿಪಡಿಸಿಕೊಂಡು ಮುನ್ನಡೆಯಬೇಕು ಅಂದುಕೊಂಡ ಡೋನಾ, ವೈವಾಹಿಕ ಜೀವನ ನಿಭಾಯಿಸಲು ಎದ್ದು ನಿಂತರು. ಅಷ್ಟೇ ಅಲ್ಲದೆ, ಇವರ ಎಂಟ್ರಿ ಬಳಿಕ ಸೌರವ್ ಮತ್ತು ನಗ್ಮಾ ಸಂಬಂಧವೂ ಮುರಿದುಬಿತ್ತು ಎನ್ನಲಾಗುತ್ತದೆ.