Changes From 1 July: ಜುಲೈ 1 ರಿಂದ 5 ಮಹತ್ವದ ನಿಯಮಗಳಲ್ಲಿ ಬದಲಾವಣೆ, ನಿಮ್ಮ ವ್ಯಾಲೆಟ್ ಮೇಲೆ ಏನು ಪ್ರಭಾವ?

Changes From 1 July: ಇನ್ನೇನು ಕೆಲವೇ ದಿನಗಳಲ್ಲಿ ಜೂನ್ ತಿಂಗಳು ಮುಕ್ತಾಯಗೊಂಡು ಜುಲೈ ತಿಂಗಳು ಪ್ರಾರಂಭವಾಗಲಿದೆ. ಈ ತಿಂಗಳ ಮೊದಲ ದಿನಾಂಕದಿಂದ, ನಿಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸುತ್ತಿವೆ. 

Changes From 1 July: ಇನ್ನೇನು ಕೆಲವೇ ದಿನಗಳಲ್ಲಿ ಜೂನ್ ತಿಂಗಳು ಮುಕ್ತಾಯಗೊಂಡು ಜುಲೈ ತಿಂಗಳು ಪ್ರಾರಂಭವಾಗಲಿದೆ. ಈ ತಿಂಗಳ ಮೊದಲ ದಿನಾಂಕದಿಂದ, ನಿಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸುತ್ತಿವೆ. ಈ ಬದಲಾವಣೆಗಳು ನಿಮ್ಮ ಜೀವನ ಮತ್ತು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತವೆ. ಪ್ರತಿ ತಿಂಗಳ ಮೊದಲ ದಿನದಿಂದ ಹಲವು ಬದಲಾವಣೆಗಳಿದ್ದರೂ, ಈ ಮಹತ್ವದ ನಿಯಮಗಳಲ್ಲಿನ ಬದಲಾವಣೆಯಿಂದ ನಿಮ್ಮ ಮೇಲೆ ಆರ್ಥಿಕ ಹೊರೆ ಹೆಚ್ಚಾಗಬಹುದು. ನಿಮ್ಮ ಮೇಲೆ ಪ್ರಭಾವ ಬೀರುವ ಬದಲಾವಣೆಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

 

ಇದನ್ನೂ ಓದಿ-ಪಿಎಂ ಕಿಸಾನ್ 12 ನೇ ಕಂತು ಕೈ ಸೇರುವ ಮುನ್ನವೇ ರೈತರಿಗೆ ಶುಭ ಸುದ್ದಿ, ಈ ಯೋಜನೆಯನ್ನು ಪುನರಾರಂಭಿಸುತ್ತಿದೆ ಸರ್ಕಾರ

 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

1 /5

ಒಂದು ವೇಳೆ ನೀವೂ ಕೂಡ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದರೆ ಎಚ್ಚೆತ್ತುಕೊಳ್ಳಿ. ಜೂನ್ 30 ವರೆಗೆ ನೀವು ನಿಮ್ಮ ಟ್ರೇಡಿಂಗ್ ಖಾತೆಯ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಇಲ್ಲದಿದ್ದರೆ ನಿಮ್ಮ ಖಾತೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಖಾತೆ ತಾತ್ಕಾಲಿಕವಾಗಿ ಸ್ಥಗಿತಗೊಂಡರೆ ನೀವು ಷೇರುಗಳ ಖರೀದಿ ಮತ್ತು ಮಾರಾಟ ನಡೆಸಲು ಸಾಧ್ಯವಿಲ್ಲ.

2 /5

ಒಂದು ವೇಳೆ ನೀವೂ ಕೂಡ ನಿಮ್ಮ ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್ ಗೆ ಜೋಡಣೆ ಮಾಡಿಲ್ಲ ಎಂದಾದರೆ, ನಿಮ್ಮ ಪ್ಯಾನ್ ಕಾರ್ಡ್ ಡಿಆಕ್ಟಿವೇಟ್ ಆಗಲಿದೆ. ಇನ್ನೂ ನಿಮ್ಮ ಬಳಿ 8 ದಿನಗಳ ಸಮಯಾವಕಾಶವಿದೆ. ಆಧಾರ್ ಅನ್ನು ನಿಮ್ಮ ಪ್ಯಾನ್ ಕಾರ್ಡ್ ಗೆ ಜೋಡಣೆ ಮಾಡಲು ಜೂನ್ 30 ಕೊನೆಯ ದಿನವಾಗಿದೆ . ಜೂನ್ 30ರವರೆಗೆ ನೀವು ಈ ಕೆಲಸ ಮಾಡಿದರೆ ನಿಮಗೆ 500 ರೂ.ದಂಡ ಬೀಳಲಿದೆ. ಆದರೆ ನಂತರ ಈ ದಂಡದ ಮೊತ್ತ ದುಪ್ಪಟ್ಟಾಗಲಿದೆ.

3 /5

ಪ್ರತಿ ತಿಂಗಳ ಮೊದಲನೇ ತಾರೀಖಿಗೆ ಅಡುಗೆ ಅನಿಲ ಬೆಲೆಯನ್ನು ಪರಿಷ್ಕರಿಸಲಾಗುತ್ತದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಣದುಬ್ಬರದ ಹಿನ್ನೆಲೆ ಅಡುಗೆ ಅನಿಲ ಸಿಲೆಂಡರ್ ಬೆಲೆ ಜುಲೈ 1 ರಿಂದ ಹೆಚ್ಚಾಗುವ ಸಾಧ್ಯತೆ ಇದೆ.

4 /5

ಕ್ರಿಪ್ಟೋಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡುವವರಿಗೆ ಜುಲೈ 1 ರಿಂದ ನಿಯಮಗಳು ಬದಲಾಗುತ್ತಿವೆ. ಶೇ.30ರಷ್ಟು ತೆರಿಗೆಯ ಬಳಿಕ ಸರ್ಕಾರ ಮತ್ತೊಂದು ಶಾಕ್ ನೀಡುವ ಸಾಧ್ಯತೆ ಇದೆ. ಹೌದು, ಇನ್ಮುಂದೆ ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡುವವರಿಗೆ ಶೇ.1 ರಷ್ಟು ಹೆಚ್ಚುವರಿ ಟಿಡಿಎಸ್ ಬೀಳುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ಕ್ರಿಪ್ಟೋಕರೆನ್ಸಿ ಹೂಡಿಕೆಯಲ್ಲಿ ನಿಮಗೆ ಹಾನಿಯಾದರೂ ಕೂಡ ಈ ಟಿಡಿಎಸ್ ಅನಿವಾರ್ಯವಾಗಿರಲಿದೆ.

5 /5

ಐದನೇ ಮಹತ್ವದ ಬದಲಾವಣೆ ದೆಹಲಿ ನಾಗರಿಕರಿಗೆ ಸಂಬಂಧಿಸಿದೆ. ಜೂನ್ 30ರೊಳಗೆ ಒಂದು ವೇಳೆ ನೀವು ಪ್ರಾಪರ್ಟಿ ಟ್ಯಾಕ್ಸ್ ಪಾವತಿಸಿದರೆ, ನಿಮಗೆ ಶೇ.15ರಷ್ಟು ರಿಯಾಯಿತಿ ಸಿಗಲಿದೆ. ಆದರೆ, ಜೂನ್ 30ರ ನಂತರ ನಿಮಗೆ ಈ ಡಿಸ್ಕೌಂಟ್ ಸಿಗುವುದಿಲ್ಲ. ಹೀಗಿರುವಾಗ ಒಂದು ವೇಳೆ ನೀವೂ ಕೂಡ ನಿಮ್ಮ ಆಸ್ತಿ ತೆರಿಗೆಯನ್ನು ಪಾವತಿಸಿಲ್ಲ ಎಂದಾದಲ್ಲಿ ಇಂದೇ ಪಾವತಿಸಿ ಈ ಲಾಭವನ್ನು ಪಡೆದುಕೊಳ್ಳಿ.