Budha Gochar: 68 ದಿನಗಳ ಕಾಲ ಸಿಂಹ ರಾಶಿಯಲ್ಲಿ ಬುಧನ ಸಂಚಾರ ನಿಮ್ಮ ಮೇಲೆ ಏನು ಪರಿಣಾಮ

                                 

Budha Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ, ಗ್ರಹಗಳ ರಾಜಕುಮಾರ ಎಂದು ಬಣ್ಣಿಸಲ್ಪಡುವ ಬುದ್ದಿ, ತಾರ್ಕಿಕ ಅಂಶ ಎಂತಲೂ ಕರೆಯಲ್ಪಡುವ ಬುಧನು ಇತ್ತೀಚೆಗಷ್ಟೇ ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ. ಸುಮಾರು 68 ದಿನಗಳ ಕಾಲ ಸಿಂಹ ರಾಶಿಯಲ್ಲಿಯೇ ಸಂಚರಿಸಲಿರುವ ಬುಧನು ಈ ಸಮಯದಲ್ಲಿ ಯಾವ ರಾಶಿಯವರಿಗೆ ಏನು ಫಲ ನೀಡಲಿದ್ದಾನೆ ಎಂದು ತಿಳಿಯೋಣ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /13

ಜ್ಯೋತಿಷ್ಯದಲ್ಲಿ ಬುದ್ದಿವಂತಿಕೆ, ಮಾತು, ತರ್ಕಕಾರಕ ಎಂದು ಕರೆಯಲ್ಪಡುವ ಗ್ರಹಗಳ ರಾಜಕುಮಾರ ಬುಧನು ಜುಲೈ 25, 2023ರಂದು ತನ್ನ ರಾಶಿಯನ್ನು ಬದಲಾಯಿಸುವ ಮೂಲಕ ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ. ಆಗಸ್ಟ್ 24ರಂದು ಇದೇ ರಾಶಿಯಲ್ಲಿ ಬುಧನ ಹಿಮ್ಮುಖ ಚಲನೆ ಆರಂಭವಾಗಲಿದ್ದು, ಇದರ ಮರುದಿನವೇ ಬುಧ ಅಸ್ತಮಿಸಲಿದ್ದಾನೆ. ನಂತರ ಸೆಪ್ಟೆಂಬರ್ 15 ರಂದು ಉದಯಿಸಲಿದ್ದಾನೆ. ಬಳಿಕ ಅಕ್ಟೋಬರ್ 1ರಂದು ಕನ್ಯಾ ರಾಶಿಗೆ ಬುಧ ಪ್ರವೇಶಿಸಲಿದ್ದಾನೆ. ಅಲ್ಲಿಯವರೆಗೂ ಸುಮಾರು 68ದಿನಗಳ ಕಾಲ ಸಿಂಹ ರಾಶಿಯಲ್ಲಿಯೇ ಸಂಚರಿಸಲಿರುವ ಬುಧನು ಯಾವ ರಾಶಿಯವರಿಗೆ ಎಂದು ಪರಿಣಾಮ ಬೀರಲಿದ್ದಾನೆ ಎಂದು ತಿಳಿಯೋಣ... 

2 /13

ಸಿಂಹ ರಾಶಿಯಲ್ಲಿ ಬುಧನ ಸಂಚಾರದಿಂದಾಗಿ ಮೇಷ ರಾಶಿಯವರು ಉದ್ಯೋಗ, ವ್ಯವಹಾರದಲ್ಲಿ ಭಾರೀ ಯಶಸ್ಸನ್ನು ಕಾಣಬಹುದು. 

3 /13

ಈ ಸಮಯದಲ್ಲಿ ವೃಷಭ ರಾಶಿಯವರಿಗೆ ಕೌಟುಂಬಿಕ ಸಮಸ್ಯೆಗಳು ಬಗೆಹರಿಯಲಿದ್ದು, ವ್ಯವಹಾರದಲ್ಲಿಯೂ ಭಾರೀ ಯಶಸ್ಸನ್ನು ಕಾಣುವಿರಿ. 

4 /13

ಈ ಸಮಯದಲ್ಲಿ ಮಿಥುನ ರಾಶಿಯವರಿಗೆ ನಿಮ್ಮ ಮಾತೇ ಬಂಡವಾಳವಾಗಲಿದ್ದು ವಾಕ್ಚಾತುರ್ಯದಿಂದ ಆದಾಯವೂ ಹೆಚ್ಚಾಗಲಿದೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಯಾಣವು ಲಾಭದಾಯಕವಾಗಿದೆ.   

5 /13

ಮುಂದಿನ 68ದಿನಗಳವರೆಗೆ ಕರ್ಕಾಟಕ ರಾಶಿಯವರಿಗೆ ಮಿಶ್ರ ದಿನವಾಗಿರಲಿದೆ. ಆಸ್ತಿ ಸಂಬಂಧಿತ ಕೆಲಸದಲ್ಲಿ ಪ್ರಯತ್ನಗಳು ಪ್ರಯೋಜನಕಾರಿಯಾಗಿದೆ. ವ್ಯರ್ಥ ಖರ್ಚು ಹೆಚ್ಚಾಗಲಿದೆ. 

6 /13

ಸ್ವ ರಾಶಿಯಲ್ಲಿಯೇ ಬುಧನ ಪ್ರವೇಶವಾಗಿದ್ದು ಈ ಸಮಯದಲ್ಲಿ ಉದ್ಯೋಗಸ್ಥರಿಗೆ ಪ್ರಯೋಜನಕಾರಿ ಆಗಿದೆ. ನಿಮ್ಮ ಸಹಾಯಹಸ್ತದ ಮನೋಭಾವು ನಿಮಗೆ ಹಣದ ಹರಿವನ್ನು ಹೆಚ್ಚಿಸಲಿದೆ. 

7 /13

ಈ ಸಮಯದಲ್ಲಿ ಕನ್ಯಾ ರಾಶಿಯವರು ತುಂಬಾ ಎಚ್ಚರಿಕೆಯಿಂದ ಇರಬೇಕು. ಉದ್ಯೋಗ ವ್ಯವಹಾರದಲ್ಲಿ ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದರಿಂದ ಹಣಕಾಸಿನ ಮುಗ್ಗಟ್ಟುಗಳು ಕೂಡ ಕಾಣಿಸಿಕೊಳ್ಳಬಹುದು. 

8 /13

ಈ ಸಮಯದಲ್ಲಿ ತುಲಾ ರಾಶಿಯವರಿಗೆ ಇಷ್ಟಾರ್ಥಗಳು ಸಿದ್ಧಿಯಾಗಲಿದೆ. ಹಣಕಾಸಿನ ವಿಷಯದಲ್ಲಿ ಪ್ರಯೋಜನಕಾರಿ ಆಗಿದೆ. ಹೊಸ ಉದ್ಯೋಗಗಳಿಗಾಗಿ ಪ್ರಯತ್ನಿಸುತ್ತಿರುವವರಿಗೆ ಒಳ್ಳೆಯ ಸಮಯ.  

9 /13

ಮುಂದಿನ 68 ದಿನಗಳವರೆಗೆ ಬಹುತೇಕ ಸಮಯ ಅದೃಷ್ಟ ನಿಮ್ಮೊಂದಿಗೆ ಇರಲಿದೆ. ಇದರಿಂದಾಗಿ, ಉದ್ಯೋಗಸ್ಥರಿಗೆ ಬಡ್ತಿ ಸಾಧ್ಯತೆ ಇದ್ದು, ಹಣವು ಲಾಭದಾಯಕವಾಗಿರಲಿದೆ. 

10 /13

ಇದು ಧನು ರಾಶಿಯವರಿಗೆ ಅದೃಷ್ಟದ ಸಮಯ ಎಂತಲೇ ಹೇಳಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ಆದಾಯ ಮತ್ತು ಲಾಭ ಹೆಚ್ಚಾಗುತ್ತದೆ. 

11 /13

ಬುಧ ರಾಶಿ ಪರಿವರ್ತನೆಯು ಮಕರ ರಾಶಿಯವರಿಗೆ ಅಷ್ಟು ಪ್ರಯೋಜನಕಾರಿ ಆಗಿಲ್ಲ. ಈ ಸಮಯದಲ್ಲಿ ನಿಮಗೆ ವೃತ್ತಿ ವ್ಯವಹಾರದಲ್ಲಿ ಜಾಗರೂಕರಾಗಿರಿ. ಅನಗತ್ಯ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಖರ್ಚು ಮಾಡಿ. 

12 /13

ಬುಧ ಸಂಚಾರವು ಕುಂಭ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ ಕಾಣಬಹುದು. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ. ಉದ್ಯೋಗಸ್ಥರಿಗೆ ಬಡ್ತಿ ಸಂಭವವಿದೆ.

13 /13

ಬುಧ ರಾಶಿ ಬದಲಾವಣೆಯು ಉದ್ಯೋಗ ಮತ್ತು ವ್ಯವಹಾರದಲ್ಲಿ ವಿವಾದಗಳು ಉಂಟಾಗಬಹುದು. ನಿಮ್ಮ ಜೀವನ ಸಂಗಾತಿ ಮತ್ತು ನಿಮ್ಮ ಸ್ವಂತ ಆರೋಗ್ಯದ ಬಗ್ಗೆ ನಿಗಾವಹಿಸಿ.  ಸೂಚನೆ:  ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.