Vastu Tips For Dustbin: ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಉತ್ತಮ ಫಲಿತಾಂಶಗಳು ಸಿಗುತ್ತವಂತೆ. ಒಂದು ವೇಳೆ ಇಡಬೇಕಾದ ಸ್ಥಳದಲ್ಲಿ ಇಡದೆ ಬೇರೆ ಸ್ಥಳದಲ್ಲಿ ವಸ್ತುಗಳನ್ನು ಇಟ್ಟರೆ ನಕಾರಾತ್ಮಕ ಫಲಿತಾಂಶಗಳು ಸಿಗುತ್ತವೆ.
ನವದೆಹಲಿ: ವಾಸ್ತು ಶಾಸ್ತ್ರದ ಆಧಾರದ ಮೇಲೆ ನಿರ್ಮಿಸಲಾದ ಮನೆಯು ಸುಖ-ಸಮೃದ್ಧಿ, ಶಾಂತಿ ಮತ್ತು ಸಂಪತ್ತನ್ನು ತರುತ್ತದೆಂದು ನಂಬಲಾಗಿದೆ. ಹೀಗಾಗಿಯೇ ಮನೆ ಕಟ್ಟುವಾಗ ವಾಸ್ತುವಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಬಹುತೇಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಮನೆಯಲ್ಲಿ ಎಲ್ಲಿ ಬೇಕಾದ್ದಲ್ಲಿ ಏನೇನೋ ವಸ್ತುಗಳನ್ನು ಇಡುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಹೀಗೆ ಮಾಡುವುದು ಸರಿಯಲ್ಲ. ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಉತ್ತಮ ಫಲಿತಾಂಶಗಳು ಸಿಗುತ್ತವಂತೆ. ಒಂದು ವೇಳೆ ಇಡಬೇಕಾದ ಸ್ಥಳದಲ್ಲಿ ಇಡದೆ ಬೇರೆ ಸ್ಥಳದಲ್ಲಿ ವಸ್ತುಗಳನ್ನು ಇಟ್ಟರೆ ನಕಾರಾತ್ಮಕ ಫಲಿತಾಂಶಗಳು ಸಿಗುತ್ತವೆ. ಕಸದ ಬುಟ್ಟಿ ವಿಚಾರದಲ್ಲಿಯೂ ಇದು ಅನ್ವಯಿಸುತ್ತದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಮನೆಯ ಪಾಠ ಮಾಡುವ ಸ್ಥಳದಲ್ಲಿ ಕಸದ ಬುಟ್ಟಿ ಇಟ್ಟರೆ ಮಕ್ಕಳು ಅಧ್ಯಯನದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಅದೇ ರೀತಿ ಕಸದ ಬುಟ್ಟಿ ಬೆಡ್ ರೂಂನಲ್ಲಿದ್ದರೆ, ಅದು ವೈಯಕ್ತಿಕ ಸಂಬಂಧಗಳಿಗೆ ಅಡ್ಡಿಯಾಗುವುದಲ್ಲದೆ ವೃತ್ತಿಪರ ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ ಇದರ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. ಕಸದ ಬುಟ್ಟಿ ಪೂರ್ವ-ಆಗ್ನೇಯ, ದಕ್ಷಿಣ-ನೈಋತ್ಯ ಮತ್ತು ಪಶ್ಚಿಮ-ವಾಯುವ್ಯ ದಿಕ್ಕುಗಳಲ್ಲಿದ್ದರೆ ವೃತ್ತಿಪರ ಅವಕಾಶಗಳು ಮತ್ತು ಅದೃಷ್ಟವನ್ನು ನೀಡುತ್ತದೆ. ಯಾವ ದಿಕ್ಕುಗಳಲ್ಲಿ ಕಸದ ಬುಟ್ಟಿ ಇಡಬಾರದು ಎಂಬುದರ ಬಗ್ಗೆ ತಿಳಿಯಿರಿ.
ಈಶಾನ್ಯ ದಿಕ್ಕಿನಲ್ಲಿ ಕಸದ ಬುಟ್ಟಿಯನ್ನು ಇಟ್ಟರೆ ಯೋಚಿಸಲು ಕಷ್ಟವಾಗಬಹುದು. ಇದರಿಂದ ಮನೆಯ ಸದಸ್ಯರಲ್ಲಿ ಗೊಂದಲಗಳು ಉಂಟಾಗುತ್ತವೆ. ಗುರಿಗಳ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ ಮತ್ತು ಸಮಯೋಚಿತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಅವರ ವೃತ್ತಿಜೀವನದ ಮೇಲೆ ನೇರ ಪರಿಣಾಮಬೀರುತ್ತದೆ.
ಈ ದಿಕ್ಕಿನಲ್ಲಿ ಕಸದ ಬುಟ್ಟಿ ಇಟ್ಟರೆ ಕುಟುಂಬದಲ್ಲಿ ಸೋಮಾರಿತನ ಕಾಡುತ್ತದೆ. ನೀವು ಎಲ್ಲಾ ಸಮಯದಲ್ಲೂ ವಿಷಯಗಳನ್ನು ಮುಂದೂಡಲು ಬಯಸಬಹುದು. ಬದುಕಿನಲ್ಲಿ ಸಂಭ್ರಮ, ಶಾಂತಿ ಇರುವುದಿಲ್ಲ. ಆಗಾಗ ನೀವು ಹಿಂದಿನ ನೆನಪುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.
ಪೂರ್ವ ದಿಕ್ಕಿನಲ್ಲಿ ಕಸದ ಬುಟ್ಟಿ ಇಡುವುದರಿಂದ ಬೇರೆಯವರ ಜೊತೆಗೆ ಚೆನ್ನಾಗಿ ಮಾತುಕತೆ ಮಾಡಲು ಸಾಧ್ಯವಾಗದಿರಬಹುದು. ಮನೆಯ ಸದಸ್ಯರು ಆಗಾಗ ತಮ್ಮ ನೆರೆಹೊರೆಯವರೊಂದಿಗೆ ಅಥವಾ ಕೆಲಸದಲ್ಲಿ ಅಪಾಯಕ್ಕೆ ಒಳಗಾಗುತ್ತಾರೆ. ಈ ಕಾರಣದಿಂದ ಉದ್ಯಮಿಗಳು ದೊಡ್ಡ ನಷ್ಟ ಎದುರಿಸುತ್ತಾರೆ. ಹೀಗಾಗಿ ಇದರ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ.
ಕಸದ ಬುಟ್ಟಿಯನ್ನು ಆಗ್ನೇಯ ದಿಕ್ಕಿನಲ್ಲಿ ಇಡುವುದರಿಂದ ಸಂಪತ್ತು ನಿಮ್ಮ ಮನೆಗೆ ಬರದಂತೆ ತಡೆಯುತ್ತದೆ. ಮನೆಯ ಸದಸ್ಯರು ಹೆಚ್ಚಿನ ಸಮಯ ಹಣದ ಕೊರತೆ ಅನುಭವಿಸುತ್ತಾರೆ. ಹೀಗಾಗಿ ಏನಾದರೂ ಒಳ್ಳೆಯದು ಸಂಭವಿಸಿದಾಗ ಅದನ್ನು ತಡೆಯಲು ಅಡಚಣೆ ಉಂಟಾಗಬಹುದು.