Brahmastra Cast Fees: 400 ಕೋಟಿ ವೆಚ್ಚದ ‘ಬ್ರಹ್ಮಾಸ್ತ್ರ’ ಚಿತ್ರಕ್ಕೆ ಯಾರಿಗೆ ಎಷ್ಟು ಸಂಭಾವನೆ..?

ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅಭಿನಯದ ‘ಬ್ರಹ್ಮಾಸ್ತ್ರ’ ಸಿನಿಮಾ ಬಿಡುಗಡೆಯಾಗಿದೆ.

ನವದೆಹಲಿ: ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅಭಿನಯದ ‘ಬ್ರಹ್ಮಾಸ್ತ್ರ’ ಸಿನಿಮಾ ಬಿಡುಗಡೆಯಾಗಿದೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಬಹಳ ದಿನಗಳಿಂದ ಕಾತರದಿಂದ ಕಾಯುತ್ತಿದ್ದರು. ಇದೀಗ ತಮ್ಮ ನೆಚ್ಚಿನ ನಟ-ನಟಿಯವರ ಚಿತ್ರದಲ್ಲಿ ಥಿಯೇಟರ್‍ನಲ್ಲಿ ಕಣ್ತುಂಬಿಕೊಂಡಿದ್ದಾರೆ. ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ ಎನ್ನಲಾಗಿರುವ ಈ ಸಿನಿಮಾದಲ್ಲಿ ನಟಿಸಿರುವ ಆಲಿಯಾ-ರಣಬೀರ್ ಸೇರಿದಂತೆ ಇನ್ನುಳಿದ ಕಲಾವಿದರು ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರಂತೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಕಿರುತೆರೆ ಜಗತ್ತಿನಲ್ಲಿ ಮಿಂಚಿದ ಬಳಿಕ ಮೌನಿ ರಾಯ್ ಈಗ ಬಾಲಿವುಡ್‌ನಲ್ಲಿಯೂ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಈ ನಟಿ ‘ಬ್ರಹ್ಮಾಸ್ತ್ರ’ದ ಪ್ರಮುಖ ಭಾಗವಾಗಿದ್ದಾಳೆ. ಇದರಲ್ಲಿ ಆಕೆ ಜುನೂನ್ ಪಾತ್ರವನ್ನು ನಿರ್ವಹಿಸಿದ್ದಾಳೆ. ಅವರ ಪಾತ್ರ ತುಂಬಾ ಸ್ಟ್ರಾಂಗ್ ಆಗಿದೆ ಎನ್ನಲಾಗಿದೆ. ಅದೇ ರೀತಿ ಮೌನಿ ಈ ಪಾತ್ರಕ್ಕೆ ಲಕ್ಷದಲ್ಲಿ ಅಲ್ಲ ಕೋಟಿಗಳಲ್ಲಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ವರದಿಗಳ ಪ್ರಕಾರ ಮೌನಿ ಈ ಸಿನಿಮಾಗೆ ಸುಮಾರು 3 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ.       

2 /5

ಸೌತ್ ಸ್ಟಾರ್ ನಾಗಾರ್ಜುನ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ನಾಗಾರ್ಜುನ ಅವರ ಚಿತ್ರಗಳು ದಕ್ಷಿಣದಲ್ಲಿ ಸಾಕಷ್ಟು ಸದ್ದು ಮಾಡುತ್ತವೆ. ಆದರೆ ಅವರಿಗ ಬಹಳ ವರ್ಷಗಳ ನಂತರ ಬಾಲಿವುಡ್‍ಗೆ ಪುನರಾಗಮನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರಿಗೂ ಪ್ರಮುಖ ಪಾತ್ರವಿದ್ದು, ವರದಿಗಳ ಪ್ರಕಾರ ಇದಕ್ಕಾಗಿ ಅವರು 9 ರಿಂದ 11 ಕೋಟಿ ರೂ. ಸಂಭಾವನೆ ತೆಗೆದುಕೊಂಡಿದ್ದಾರಂತೆ.

3 /5

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಯಾವುದೇ ಚಿತ್ರದ ಪ್ರಾತಕ್ಕೂ ಜೀವ ತುಂಬುತ್ತಾರೆ. ಇದು ‘ಬ್ರಹ್ಮಾಸ್ತ್ರ’ದ ವಿಮರ್ಶೆಯಲ್ಲಿಯೂ ಸಾಬೀತಾಗಿದೆ. ಈ ಚಿತ್ರದಲ್ಲಿ ಅವರು ಗುರುವಿನ ಪಾತ್ರದಲ್ಲಿದ್ದು, ಇದಕ್ಕಾಗಿ ಅವರು ಭಾರೀ ಮೊತ್ತದ ಸಂಭಾವನೆ ತೆಗೆದುಕೊಂಡಿದ್ದಾರಂತೆ. ವರದಿಗಳ ಪ್ರಕಾರ ಬಿಗ್ ಬಿ 8-10 ಕೋಟಿ ರೂ. ತೆಗೆದುಕೊಂಡಿದ್ದಾರಂತೆ.

4 /5

ರಣಬೀರ್ ಕಪೂರ್ ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಅವರು ಈ ಚಿತ್ರದಲ್ಲಿ ‘ಶಿವ’ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಇದಕ್ಕಾಗಿ ರಣಬೀರ್ 20-25 ಕೋಟಿ ರೂ. ಚಾರ್ಜ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರ ಹಿಟ್ ಆದಲ್ಲಿ ಅವರ ಸಂಭಾವನೆ ಇನ್ನೂ ದುಪ್ಪಟ್ಟಾಗಲಿದೆ ಎನ್ನಲಾಗುತ್ತಿದೆ.

5 /5

ನಟಿ ಆಲಿಯಾ ಭಟ್ ಪಾರ್ವತಿ ಅಂದರೆ ‘ಇಶಾ’ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಈ ಪಾತ್ರವು ಸಾಕಷ್ಟು ಪ್ರಶಂಸೆಗೆ ಒಳಗಾಗುತ್ತಿದೆ. ಶುಲ್ಕದ ವಿಷಯಕ್ಕೆ ಬಂದರೆ ಆಲಿಯಾ ರಣಬೀರ್ ಕಪೂರ್‌ಗಿಂತ ಕಡಿಮೆ ಸಂಭಾವನೆ ಪಡೆದಿದ್ದಾರಂತೆ. ಆಲಿಯಾಗೆ 10-12 ಕೋಟಿ ರೂ. ನೀಡಲಾಗಿದೆ ಎಂದು ಹೇಳಲಾಗುತ್ತಿದೆ.