ಹುಡುಗಿಯರ ಡ್ರೀಮ್‌ ಬಾಯ್‌ ಈ ಸ್ಟಾರ್‌ ಕ್ರಿಕೆಟಿಗ.. ಲವ್‌ ಮಾಡು.. ಲವ್‌ ಮಾಡು.. ಅಂತ ನಟಿಯರೂ ಕಾಡ್ತೀದ್ದಾರೆ ಈತನನ್ನ..!

Indian Cricketer love story : ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ, ನೋಡಲು ಸಖತ್‌ ಸ್ಮಾರ್ಟ್‌.. ಮೈದಾನಕ್ಕಿಳಿದು ಬ್ಯಾಟ್‌ ಬೀಸಿದ್ರೆ ಸಿಕ್ಸ್‌ ಫಿಕ್ಸ್‌.. ಈ ಮನ್ಮಥ ಐವರು ಹುಡುಗಿಯರೊಂದಿಗೆ ಡೇಟಿಂಗ್ ಮಾಡುತ್ತಿದ್ದಾನೆ ಎಂಬ ವರದಿಗಳು ಇಲ್ಲಿಯವರೆಗೆ ಕೇಳಿ ಬಂದಿವೆ... ಹಾಗಿದ್ರೆ ಯಾರು ಆ ಕ್ರಿಕೆಟಿಗ..? ಬನ್ನಿ ನೋಡೋಣ..
 

1 /7

ಭಾರತೀಯ ಕ್ರಿಕೆಟ್‌ ಜಗತ್ತಿನ ಉದಯೋನ್ಮುಖ ತಾರೆ, ಶುಬ್‌ಮಾನ್ ಗಿಲ್ ಅವರ ಅದ್ಭುತ ಕ್ರಿಕೆಟ್ ಪ್ರದರ್ಶನದ ಬಗ್ಗೆ ಎಲ್ಲರಿಗೂ ಗೊತ್ತಿದೆ.. ಅದರ ಬಗ್ಗೆ ಇಲ್ಲಿ ಮಾತನಾಡೋದು ಬೇಡ.. ಸ್ಮಾರ್ಟ್‌ ಆಟವಾಡುವ ಈ ಕ್ರಿಕೆಟಿಗ ನೋಡಲು ಸಹ ಸಖತ್‌ ಸ್ಮಾರ್ಟ್‌.. ಈತನ ಜೊತೆ ಡೇಟಿಂಗ್‌ ಮಾಡೋಕೆ ಅಂತಾನೇ ಯುವತಿಯರು ಲೈನ್‌ನಲ್ಲಿ ನಿಂತಿದ್ದಾರೆ..  

2 /7

ಹೌದು.. ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದಲ್ಲಿರುವ ಮೋಸ್ಟ್‌ ಎಲಿಜೆಬಲ್‌ ಬ್ಯಾಚುಲರ್ ಗಿಲ್‌. ಬಹುತೇಕ ಯುವತಿಯರು ಈತನೊಂದಿಗೆ ಡೇಟ್‌ ಮಾಡೋಕೆ ಕಾತುರದಿಂದ ಕಾಯುತ್ತಿದ್ದಾರೆ. ಅಲ್ಲದೆ ಹಲವಾರು ನಟಿಯರ ಹೆಸರು ಸಹ ಶುಭಮನ್ ಜೊತೆ ತಳುಕು ಹಾಕಿಕೊಂಡಿದೆ..    

3 /7

ಗ್ಲಾಮರ್ ಲೋಕದಲ್ಲಿ ಶುಭಂ ಗಿಲ್ ಬಹಳ ಜನಪ್ರಿಯ. ಅನೇಕ ಸೂಪರ್‌ಸ್ಟಾರ್‌ಗಳು ಭಾಗವಹಿಸುವ ಹಲವಾರು ಉನ್ನತ-ಮಟ್ಟದ ಪಾರ್ಟಿಗಳಲ್ಲಿಯೂ ಸಹ ಈ ಕ್ರಿಕೆಟಿಗ ಕಾಣಿಸಿಕೊಂಡಿದ್ದಾನೆ.. ಈ ಕುರಿತು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು..    

4 /7

ಬಾಲಿವುಡ್ ನಟಿ ಮತ್ತು ಸ್ಟಾರ್ ಕಿಡ್ ಸಾರಾ ಅಲಿ ಖಾನ್ ಮತ್ತು ಗಿಲ್‌ ಗಾಸಿಪ್ ಹೊಸದಲ್ಲ. ನವಾಬ್ ಕುಟುಂಬದ ಮಗಳು, ಬಾಲಿವುಡ್‌ನಲ್ಲಿ ಮಾತ್ರವಲ್ಲದೆ, ಮುಂಬೈನ ರೆಸ್ಟೋರೆಂಟ್‌ನಲ್ಲಿ ಶುಭಮನ್ ಗಿಲ್ ಅವರೊಂದಿಗೆ ಇಬ್ಬರೂ ಒಟ್ಟಿಗೆ ಊಟ ಮಾಡಿದಕ್ಕೆ ಲವ್‌ ವದಂತಿಗಳು ಹುಟ್ಟಿಕೊಂಡಿದ್ದವು. ಆದ್ರೆ ಇಂದಿಗೂ ಇದು ಅರಿಯದ ವಿಷಯವಾಗಿದೆ..  

5 /7

ಜನಪ್ರಿಯ ಪಂಜಾಬಿ ನಟಿ ಮತ್ತು ಜನಪ್ರಿಯ ಸಾಮಾಜಿಕ ಮಾಧ್ಯಮ ವ್ಯಕ್ತಿ ಸೋನಮ್ ಬಾಜ್ವಾ ಶುಭಮಾನ್ ಗಿಲ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ. ಪಂಜಾಬಿ ಟಾಕ್ ಶೋನಲ್ಲಿ ಸೋಮನ್ ಮತ್ತು ಶುಬ್ಮನ್ ಪರಸ್ಪರ ಫ್ಲರ್ಟಿಂಗ್ ಮಾಡುತ್ತಿರುವುದು ಕಂಡುಬಂದಿದೆ.  

6 /7

ಅಂದಿನಿಂದ ಶುಬ್‌ಮನ್ ತನ್ನ ಹಳೆಯ ಗೆಳತಿಯರನ್ನೆಲ್ಲಾ ತ್ಯಜಿಸಿ ಸೋನಂ ಜೊತೆ ಸಂಬಂಧದಲ್ಲಿದ್ದಾರೆ ಎಂಬ ಹೊಸ ಗಾಸಿಪ್‌ ಹುಟ್ಟಿಕೊಂಡಿದೆ.. ಇದರಿಂದ ಗಿಲ್‌ ಅಭಿಮಾನಿಗಳು ಖುಷಿಯಾಗಿದ್ದಾರೆ. ಅಷ್ಟೇ ಅಲ್ಲದೆ, ಇಬ್ಬರು ಮದುವೆಯಾಗ್ತಾರೆ ಅಂತ ಹೇಳಲಾಗುತ್ತಿದೆ.. ಈ ಕುರಿತು ಜೋಡಿ ಸ್ಪಷ್ಟ ಪಡಿಸಬೇಕಿದೆ..  

7 /7

ಮಾರಿಯಾ ಅರೋಯೋಗ್ ಹೆಸರು ಸಹ ಸ್ಟಾರ್ ಕ್ರಿಕೆಟಿಗ ಶುಭಮನ್ ಗಿಲ್ ಅವರೊಂದಿಗೆ ಕೇಳಿ ಬಂದಿದೆ. ಐಪಿಎಲ್ ಪಂದ್ಯದಲ್ಲಿ ಶುಬ್ಮನ್ ಗಿಲ್ ಅವರನ್ನು ಮರಿಯಾ ಹುರಿದುಂಬಿಸಿದರು.. ಆದ್ರೆ ಇವರಿಬ್ಬರ ಸಂಬಂಧದ ಕುರಿತ ಸ್ಪಷ್ಟ ಮಾಹಿತಿ ಇಲ್ಲ.. ಅಲ್ಲದೆ, ಕ್ರಿಕೆಟ್‌ ಗಾಡ್‌ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ಹೆಸರು ಸಹ ಗಿಲ್‌ ಜೊತೆ ವ್ಯಾಪಕವಾಗಿ ಕೇಳಿಬರುತ್ತಿದೆ..