ಅತಿಯಾಗಿ ಅಥವಾ ನಿರಂತರವಾಗಿ ಬಳಸುವ ಕಾರಣದಿಂದಾಗಿ ಈ ಮಸಾಲೆಗಳು ಹಾನಿಯನ್ನು ಉಂಟುಮಾಡಬಹುದು.
ನವದೆಹಲಿ : ಗರಂ ಮಸಾಲೆ ಆಹಾರದ ಪರಿಮಳ ಮತ್ತು ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಜೀರ್ಣಕ್ರಿಯೆ ಉತ್ತಮಗೊಳ್ಳಲು ಗರಂ ಮಸಾಲೆ ಸಹಾಯ ಮಾಡುತ್ತದೆ. ಮಧುಮೇಹ ರೋಗಿಗಳಿಗೂ ಇದು ಪ್ರಯೋಜನಕಾರಿಯಾಗಿದೆ. ಆದರೆ, ಕೆಲವೊಮ್ಮೆ ಅತಿಯಾಗಿ ಅಥವಾ ನಿರಂತರವಾಗಿ ಬಳಸುವ ಕಾರಣದಿಂದಾಗಿ ಈ ಮಸಾಲೆಗಳು ಹಾನಿಯನ್ನು ಉಂಟುಮಾಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಶೀತ ಮತ್ತು ಕೆಮ್ಮಿನ ಸಂದರ್ಭದಲ್ಲಿ, ಇದರಿಂದ ಕಷಾಯವನ್ನು ತಯಾರಿಸಬಹುದು. ಲವಂಗ, ಕರಿಮೆಣಸು ಮತ್ತು ದಾಲ್ಚಿನ್ನಿ ಮುಂತಾದವುಗಳಿಂದ ಚಹಾ ಮಾಡಿ ಕುಡಿಯುವುದು ರುಚಿಯಾಗಿಯೂ ಇರುತ್ತದೆ. ದೇಹದ ರೋಗನಿರೋಧಕ ಶಕ್ತಿಯನ್ನು ಕೂಡಾ ಬಲಪಡಿಸುತ್ತದೆ.
ಮಳೆಗಾಲದಲ್ಲಿ ಹೆಚ್ಚು ಕರಿದ ಪದಾರ್ಥಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಗರಂ ಮಸಾಲೆಗಳನ್ನು ಸೇವಿಸಬಹುದು. ಇದರಲ್ಲಿರುವ ಫೈಬರ್ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸಾಲು ಸಹಾಯ ಮಾಡುತ್ತದೆ. ಮಲಬದ್ಧತೆಯ ಸಮಸ್ಯೆ ನಿವಾರಣೆಯಲ್ಲೂ ಇದು ಕೆಲಸ ಮಾಡುತ್ತದೆ.
ಗರಂ ಮಸಾಲೆಗಳು ಆ್ಯಂಟಿ ಇನ್ ಫ್ಲಮೆಟರಿ ಗುಣಗಳನ್ನು ಹೊಂದಿವೆ. ಇದು ನೋವು ಮತ್ತು ಊತವನ್ನು ಕಡಿಮೆ ಮಾಡುತ್ತವೆ. ದೇಹದಿಂದ ದೀರ್ಘಕಾಲದ ನೋವನ್ನು ತೆಗೆದುಹಾಕಲು ಸಹ ಇದು ಸಹಾಯ ಮಾಡುತ್ತದೆ.
ಇದರ ಬಳಕೆಯು ಮಧುಮೇಹದಲ್ಲಿಯೂ ಪ್ರಯೋಜನಕಾರಿಯಾಗಿದೆ. ಗರಂ ಮಸಾಲೆಯು ಜೀರಿಗೆಯನ್ನು ಹೊಂದಿದೆ. ಇದು ಆ್ಯಂಟಿ ಡಯಾಬೆಟಿಕ್ ಏಜೆಂಟ್ ಅನ್ನು ಹೊಂದಿದೆ. ಮಧುಮೇಹದ ಲಕ್ಷಣಗಳನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ.
ಗರಂ ಮಸಾಲೆಗಳು ಉಷ್ಣ ಗುಣವನ್ನು ಹೊಂದಿರುತ್ತದೆ. ಆದ್ದರಿಂದ ಗರಂ ಮಸಾಲೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮತ್ತು ನಿರಂತರವಾಗಿ ಸೇವಿಸುವುದರಿಂದ ಹಾನಿ ಉಂಟಾಗಬಹುದು. ಎದೆಯುರಿ, ಅಸಿಡಿಟಿ , ಹೊಟ್ಟೆಯಲ್ಲಿ ಉರಿಯುವಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.